Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಪ್ರಧಾನಿ ಮೋದಿ ನೋಟು ನಿಷೇಧ ನಿರ್ಧಾರವನ್ನು ಪ್ರಶಂಸಿಸಿದ ವಿಶ್ವಬ್ಯಾಂಕ್ ಸಿಇಒ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 500-1000 ಮುಖಬೆಲೆಯ ಹಳೆಯ ನೋಟುಗಳ ನಿಷೇಧ ತೀರ್ಮಾನವನ್ನು ವಿಶ್ವಬ್ಯಾಂಕ್ ಸಿಇಒ ಕ್ರಿಸ್ಟಾಲಿನಾ ಜಿಯೋರ್ ಜಿವಾ ಪ್ರಶಂಸಿಸಿದ್ದಾರೆ.

ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಕ್ರಿಸ್ಟಾಲಿನಾ ಅವರು ನರೇಂದ್ರ ಮೋದಿ ಅವರು ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ಮಟ್ಟ ಹಾಕುವ ಉದ್ದೇಶದೊಂದಿಗೆ ನೋಟು ನಿಷೇಧದ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದರು. ಈ ನಿರ್ಧಾರ ಭಾರತದ ಆರ್ಥಿಕತೆಯ ಮೇಲೆ ಉತ್ತಮ ಧನಾತ್ಮಕ ಪರಿಣಾಮ ಬೀರಲಿದೆ. ಅದೇ ರೀತಿ ಭಾರತದ ಈ ನಡೆಯನ್ನು ಇತರ ದೇಶಗಳು ಕೂಡ ಅಧ್ಯಯನ ಮಾಡಲಿವೆ ಎಂದು ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ವಿಶ್ವಬ್ಯಾಂಕ್ ಸಿಇಒ ಕ್ರಿಸ್ಟಾಲಿನಾ ಅವರು ಭಾರತಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಾರತವು ವಿಶ್ವ ಬ್ಯಾಂಕಿನ ಅತೀ ದೊಡ್ಡ ಮಧ್ಯಮ ವರ್ಗವನ್ನು ಹೊಂದಿರುವ ಗ್ರಾಹಕ ದೇಶವಾಗಿದೆ. ಇಲ್ಲಿನ ಆರ್ಥಿಕ ಅಭಿವೃದ್ಧಿ ಜಗತ್ತಿನ ಮೇಲೆ ಧನಾತ್ಮಕ ಪರಿಣಾಮ ಬೀರುವುದರಿಂದ ನಮಗೆ ಭಾರತವು ಮುಖ್ಯವಾಗುತ್ತದೆ ಎಂದರು.

ಭಾರತದಲ್ಲಿ ನೋಟು ನಿಷೇಧಗೊಂಡರು ದೇಶದ ಜಿಡಿಪಿ ದರ ಸ್ಥಿರತೆಯನ್ನು ಕಾಯ್ದುಗೊಂಡಿದೆ. ಕಳೆದ ವರ್ಷ 7.6ರಷ್ಟಿದ್ದ ಜಿಡಿಪಿ ದರ ಪ್ರಸ್ತುತ 7ರಷ್ಟಿದೆ. ಹೀಗಿದ್ದರು ಭಾರತ ಜಿಡಿಪಿ ದರದಲ್ಲಿ ಮೊದಲ ಸ್ಥಾನದಲ್ಲೇ ಇದೆ.

No Comments

Leave A Comment