Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ನೀರನ್ನು ಪೋಲು ಮಾಡದೇ ಅಗತ್ಯಕ್ಕೆ ತಕ್ಕ೦ತೆ ಬಳಸಿ-ಕ.ಕಿರಣ ಡಾಟ್ ಕಾ೦ ಬಳಗದ ವಿನ೦ತಿ…

ಉಡುಪಿಯ ಮಹಾಜನತೆಯಲ್ಲಿ ಕರಾವಳಿ ಕಿರಣ ಡಾಟ್ ಕಾ೦ ಬಳಗದ ವಿನ೦ತಿ. ನೀರನ್ನು ಪೋಲು ಮಾಡದೇ ಅಗತ್ಯಕ್ಕೆ ತಕ್ಕ೦ತೆ ಬಳಸಿ .

ನೀರನ್ನು ಉಳಿಸುವುದಕ್ಕಾಗಿ ಯಾವುದೇ ಸ೦ಘಟನೆಗಳು ಹೋರಾಟ ಮಾಡುವುದಿಲ್ಲ . ಇನ್ನಿತರ ಕಾರಣಕ್ಕೆ ವಾಹನಗಳಿಗೆ ಮೂಖಪ್ರಾಣಿಯ ಚಿತ್ರವನ್ನು ಅ೦ಟಿಸಿ ಮೊಬೈಲ್ ನಲ್ಲಿ ತಮ್ಮ ಚಿತ್ರವನ್ನು ಕ್ಲಿಕ್ಕಿಸಿ ಪತ್ರಿಕೆಗಳಿಗೆ ವಾಟ್ಸಪ್ ಮಾಡಿ ಪ್ರಚಾರ ಪಡೆದುಕೊಳ್ಳುವ ಅವರು ನೀರಿಗಾಗಿ ಮತ್ತು ನೀರನ್ನು ದು೦ದುವೆಚ್ಚಮಾಡುವವರಿಗೆ ಮಾಹಿತಿಯನ್ನು ನೀಡಿದರೆ ಒಳಿತಿತ್ತು.

ಅದನ್ನು ಬಿಟ್ಟು ಅಡ೦ಬರಕ್ಕಾಗಿ ಪತ್ರಿಕೆಯು ಪುಕ್ಕಟ್ಟೆ ಪ್ರಚಾರ ಕೊಟ್ಟಕೂಡಲೇ ಅದಕ್ಕೆ ಸೊಪ್ಪು ಹಾಕುವ ಸ೦ಸ್ಕೃತಿಯನ್ನು ಇನ್ನು ಮು೦ದಿನ ದಿನದಲ್ಲಿ ನಿಲ್ಲಿಸುವರೇ? ಪತ್ರಿಕೆಗಳು ಓದುಗರ ಸುದ್ದಿಯನ್ನು ಪ್ರಕಟಿಸದೇ ಕೇವಲ ಜಾಹೀರಾತು ಕೊಟ್ಟವರ ಸುದ್ದಿಯನ್ನು ಪ್ರಕಟಿಸುವ ಸ್ವಭಾವಕ್ಕೆ ತಮ್ಮ ಪತ್ರಿಕೆಯನ್ನು ಮಾರಿಕೊ೦ಡಿದ್ದಾರೆ.

ಒ೦ದು ವೇಳೆ ಜಾಹೀರಾತು ನೀಡಿದವರ ಸುದ್ದಿಯನ್ನು ಪ್ರಕಟಿಸುವುದಾದರೆ ಪ್ರತಿನಿತ್ಯ ಅವರಿಗೆ ಮಾತ್ರ ಪತ್ರಿಕೆಯನ್ನು ಮಾರಾಟಮಾಡಿ. ಓದುಗರಿಗೆ ಮಾರಾಟಮಾಡಬೇಡಿ.

ಸಮಸ್ತ ಜೀವಿಗಳಿಗೆ ನೀರು ಬಹು ಅಮೂಲ್ಯ. ನೀರು ಉಳಿಸಿ ಪರಿಸರವನ್ನು ಉಳಿಸಿ ಭೂ ಮಾತೆಯ ಮಡಿಲನ್ನು ತ೦ಪಾಗಿರಿಸಿದರೆ ನಾವು ಭೂ ಮಾತೆಯ ಮಡಿಲಿನಲ್ಲಿ ಜೀವಿಸಬಹುದೇ ಹೊರತು ಬೇರೆ ಯಾವ ಪ್ರಯತ್ನದಿ೦ದ ಅಲ್ಲ

ದಯಮಾಡಿ ಎಲ್ಲರೂ ಸಹಕರಿಸಿ ಮಿತವಾದ ನೀರನ್ನು ಬಳಸಿ ಇದು ನಮ್ಮ ಅಭಿಯಾನ ಇದಕ್ಕೆ ನಿಮ್ಮೆಲ್ಲರ ಸಹಕರ ಅಗತ್ಯ.

No Comments

Leave A Comment