Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ನನ್ನ ಭ್ರಷ್ಟ ಎಂದ್ರೆ ಹುಷಾರ್…ಮಾನನಷ್ಟ ಕೇಸ್ ಹಾಕ್ತೇನೆ; ಬಿಎಸ್ ವೈ

ಬೆಂಗಳೂರು: ಹೋದಲ್ಲಿ, ಬಂದಲ್ಲಿ ಪದೇ, ಪದೇ ನನ್ನ ಮಹಾನ್ ಭ್ರಷ್ಟ ಎಂದು ಹೇಳುತ್ತಿದ್ದೀರಿ..ಇನ್ಮುಂದೆ ನನ್ನ ಭ್ರಷ್ಟ ಎಂದು ಕರೆದರೆ ಮಾನನಷ್ಟ ಮೊಕದ್ದಮೆ ಹಾಕ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ್ದಾರೆ.

ಯಾವುದೇ ಪ್ರತಿಕ್ರಿಯೆ ಕೇಳಿದಾಗಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮಹಾನ್ ಭ್ರಷ್ಟ, ಜಗತ್ತಿನ ದೊಡ್ಡ ಭ್ರಷ್ಟ ಎಂದು ಟೀಕಿಸುತ್ತಾರೆ. ಇನ್ಮುಂದೆ ನನ್ನ ಭ್ರಷ್ಟ ಎಂದು ಕರೆದರೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.

ಸಿದ್ದರಾಮಯ್ಯ ದೇಶ ಕಂಡ ಅತಿಭ್ರಷ್ಟ ಸಿಎಂ ಎಂದು ಮೈಸೂರಿನಲ್ಲಿ ಬಿಎಸ್ ಯಡಿಯೂರಪ್ಪ ಹೇಳಿದರು.

No Comments

Leave A Comment