Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಉಡುಪಿ:ಮಾ. 9-27: ದ್ವಿ ಪಿಯುಸಿ ಪರೀಕ್ಷೆ

ಉಡುಪಿ: ದ್ವಿತೀಯ ಪಿಯುಸಿ ಪಬ್ಲಿಕ್‌ ಪರೀಕ್ಷೆಗಳು ಮಾ. 9ರಿಂದ 27ರ ವರೆಗೆ ನಡೆಯಲಿದ್ದು, ಜಿಲ್ಲೆಯ ಒಟ್ಟು 26 ಪರೀಕ್ಷಾ ಕೇಂದ್ರಗಳಲ್ಲಿ 16,428 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಲಾ ವಿಭಾಗದಿಂದ 2,165, ವಾಣಿಜ್ಯ ವಿಭಾಗದಿಂದ 8,983, ವಿಜಾnನ ವಿಭಾಗದಿಂದ 5,280 ವಿದ್ಯಾರ್ಥಿಗಳು. ಒಟ್ಟು 14,688 ಪ್ರಥಮ ಬಾರಿಗೆ ಪರೀಕ್ಷೆ ಬರೆಯಲಿರುವರು. 1,158 ವಿದ್ಯಾರ್ಥಿಗಳು ಖಾಸಗಿಯಾಗಿ ಪರೀಕ್ಷೆ ಬರೆಯುವರು. 582 ರಿಪೀಟರ್, 8,503 ವಿದ್ಯಾರ್ಥಿನಿಯರು ಮತ್ತು 7,925 ವಿದ್ಯಾರ್ಥಿಗಳು ಇದ್ದಾರೆ.

ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಜಿಲ್ಲಾಡಳಿತ ಎಲ್ಲ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಹೇಳಿದರು. ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಗೆ ಡಿಡಿಪಿಯು ಆರ್‌.ಬಿ. ನಾಯಕ್‌ ಮಾಹಿತಿ ನೀಡಿದರು. ಪರೀಕ್ಷೆ 10.15ರಿಂದ 1.30ರ ವರೆಗೆ ನಡೆಯಲಿದೆ. ಈ ಬಾರಿ ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲಾ ಖಜಾನೆಯಲ್ಲಿ ಮಾತ್ರ ಠೇವಣಿ ಇಡಲಾಗುವುದು. ಖಜಾನೆಯಿಂದ ಪ್ರತಿದಿನ ಬೆಳಗ್ಗೆ ಪ್ರಶ್ನೆ ಪತ್ರಿಕೆಗಳನ್ನು ಸ್ವೀಕರಿಸಿ ವಿತರಿಸಲು 3 ಸದಸ್ಯರ ತಂಡ ರಚಿಸಲಾಗಿದೆ. ತಂಡದಲ್ಲಿ ತಹಶೀಲ್ದಾರರು, ಬಿಇಒ, ಪ್ರಾಂಶುಪಾಲರಿರುತ್ತಾರೆ. ಅಪರ ಜಿಲ್ಲಾಧಿಕಾರಿ, ಜಿಲ್ಲಾ ಖಜಾನಾಧಿಕಾರಿ, ಡಿಡಿಪಿಯು ಖಜಾನೆಯಿಂದ ಪತ್ರಿಕೆ ಸ್ವೀಕರಿಸಿ ವಿತರಿಸುವರು. ಖಜಾನೆಯಲ್ಲಿ ಸಿಸಿಟಿವಿ, ಬಯೋಮೆಟ್ರಿಕ್‌ ಮೆಷಿನ್‌, ಬಾರ್‌ ಕೋಡಿಂಗ್‌ ರೀಡರ್‌ಗಳನ್ನು ಅಳವಡಿಸಲಾಗಿದೆ.

ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾ ದಿನಗಳಂದು ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಿಸಲು ಹಾಗೂ ಬಂದೋಬಸ್ತ್ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಪೊಲೀಸ್‌ ಇಲಾಖೆಗೆ ನಿರ್ದೇಶನ ನೀಡಿದರು. ಪರೀಕ್ಷೆ ಮುಗಿದ ಅನಂತರ ಉತ್ತರ ಪತ್ರಿಕೆ ಬಂಡಲ್‌ ಸುರಕ್ಷಿತವಾಗಿ ತಲುಪಿಸಲು ಅಂಚೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಈ ಸಂಬಂಧ ವಾಹನ ವ್ಯವಸ್ಥೆ ಮತ್ತು ಮೆಸ್ಕಾಂಗೆ ಪವರ್‌ ಕಟ್‌ ಮಾಡದಂತೆ ನಿರ್ದೇಶನ ನೀಡಲಾಯಿತು.

ಪರೀಕ್ಷೆ ನಡೆಯುವ ವೇಳೆ ಪೊಲೀಸ್‌ ಇಲಾಖೆ ಜಿಲ್ಲಾಡಳಿತಕ್ಕೆ ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಹೇಳಿದರು. ಅಪರ ಜಿಲ್ಲಾಧಿಕಾರಿ ಅನುರಾಧಾ, ಡಿಡಿಪಿಐ ದಿವಾಕರ ಶೆಟ್ಟಿ, ಎಲ್ಲ ತಹಶೀಲ್ದಾರ್‌, ಕಾಲೇಜು ಮುಖ್ಯಸ್ಥರು ಉಪಸ್ಥಿತರಿದ್ದರು

 

No Comments

Leave A Comment