Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಮದ್ಯ ವಿಚಾರದಲ್ಲಿ ಜಗಳ: ವ್ಯಕ್ತಿಯ ಇರಿದು ಕೊಲೆ

ಬ್ರಹ್ಮಾವರ: ಮದ್ಯಪಾನ ವಿಚಾರದಲ್ಲಿ ವ್ಯಕ್ತಿಯ ಇರಿದು ಕೊಲೆಗೈದ ಘಟನೆ ಬುಧವಾರ ಬೆಳಗ್ಗೆ ಚೇರ್ಕಾಡಿ ಗ್ರಾಮದ ಪೇತ್ರಿಯಲ್ಲಿ ಸಂಭವಸಿದೆ.

ಕನ್ನಾರು ನಿವಾಸಿ ಪ್ರಕಾಶ್‌ ನಾಯ್ಕ(38) ಕೊಲೆಯಾದಾತ. ಆರೂರು ಕೀರ್ತಿನಗರದ ಪ್ರಶಾಂತ ಅಲಿಯಾಸ್‌ ಪಚ್ಚು ಅಲಿಯಾಸ್‌ ಮಣಿಕಂಠ(28) ಆರೋಪಿ. ಪ್ರಕಾಶ ನಾಯ್ಕ ಮತ್ತು ಮಣಿಕಂಠ ಇಬ್ಬರೂ ಪರಿಚಯಸ್ಥರು. ಬುಧವಾರ ಬೆಳಗ್ಗೆ 10.30ರ ಸುಮಾರಿಗೆ ಪೇತ್ರಿ ಪೇಟೆ ಸಮೀಪ ಮದ್ಯಪಾನಕ್ಕೆ ಹಣ ನೀಡುವಂತೆ ಪ್ರಕಾಶ ನಾಯ್ಕ ಅವರನ್ನು ಮಣಿಕಂಠ ಕೇಳಿದ್ದ. ಹಣ ನೀಡದ ಕಾರಣ ಮಾತಿಗೆ ಮಾತು ಬೆಳೆದು ಮಣಿಕಂಠನು ಪ್ರಕಾಶ ನಾಯ್ಕ ಅವರಿಗೆ ಚೂರಿಯಿಂದ ಇರಿದ ಎನ್ನಲಾಗಿದೆ. ಪ್ರಕಾಶ ನಾಯ್ಕ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿಯಲ್ಲಿ ಮೃತಪಟ್ಟ.

ಪ್ರಕಾಶ ನಾಯ್ಕ ಹಿನ್ನೆಲೆ: ಕನ್ನಾರಿನ ವಾಸು ನಾಯ್ಕ ಅವರಿಗೆ ನಾಲ್ವರು ಪುತ್ರಿಯರು ಹಾಗೂ ಪ್ರಕಾಶ ಏಕಮಾತ್ರ ಪುತ್ರ. ಪುತ್ರಿಯರಿಗೆ ಮದುವೆಯಾಗಿದೆ. 2014ರಲ್ಲಿ ಪ್ರಕಾಶ ಮನೆಯಲ್ಲಿ ಯಾರೂ ಇಲ್ಲದ ಸಮಯ ತಂದೆ ವಾಸು ನಾಯ್ಕ ಅವರನ್ನು ಕೊಲೆಗೈದಿದ್ದ. ಸುಮಾರು 1 ತಿಂಗಳ ಬಳಿಕ ಸಂಶಯಗೊಂಡು ಹೂತಿಟ್ಟ ದೇಹವನ್ನು ಹೊರತೆಗೆದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಕಾಶ್‌ ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾನೆ. ಆರೋಪಿ ಮಣಿಕಂಠನನ್ನು ಬಂಧಿಸಲಾಗಿದ್ದು, ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ಬರೂ ಕೊಲೆ ಆರೋಪಿಗಳು..!
ಬುಧವಾರ ಕೊಲೆಯಾದಾತ  ಮತ್ತು ಕೊಲೆ ಆರೋಪಿ ಇಬ್ಬರೂ ಕೊಲೆ ಆರೋಪಿಗಳೇ! ಪ್ರಕಾಶ್‌ ನಾಯ್ಕ ಮೂರು ವರ್ಷಗಳ ಹಿಂದೆ ತಂದೆ ವಾಸು ನಾಯ್ಕ ಅವರನ್ನು ಕೊಲೆಗೈದ ಆರೋಪ‌ದಲ್ಲಿ ಜೈಲು ಪಾಲಾಗಿದ್ದ. ಶಿವಮೊಗ್ಗದಲ್ಲಿ ಹೊಟೇಲ್‌ ಕೆಲಸದಲ್ಲಿದ್ದ ಪ್ರಕಾಶ ನಾಯ್ಕ ಮಂಗಳವಾರವಷ್ಟೇ ಊರಿಗೆ ಬಂದಿದ್ದ. ಮಣಿಕಂಠ 2009ರಲ್ಲಿ ಶೀನ ಕುಲಾಲ್‌ ಅವರನ್ನು ಕೊಲೆಗೈದ ಆರೋಪಿಯಾಗಿದ್ದನು. ಅವಿವಾಹಿತನಾಗಿರುವ ಮಣಿಕಂಠ ಸ್ಥಳೀಯವಾಗಿ ಕೂಲಿ ಕೆಲಸ ಮಾಡಿಕೊಂಡಿದ್ದವನು.

No Comments

Leave A Comment