Log In
BREAKING NEWS >
ಶಿರಾ ಲಾರಿ -ಬಸ್ಸು ಭೀಕರ ರಸ್ತೆ ಅಪಘಾತ 7 ಮಂದಿ ದುರ್ಮರಣ......ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಇಂಧನ ದರ-ಪೆಟ್ರೋಲ್‌, ಡೀಸೆಲ್‌ ದರ ಗರಿಷ್ಠ ಮಟ್ಟಕ್ಕೆ

ಗನ್ ತೋರಿಸಿದ ಪಿಎಸ್ಐಗೆ ಗ್ರಾಮಸ್ಥರಿಂದ ಥಳಿತ, ಅಣ್ಣಾಮಲೈ ಅವಾಜ್!

ಚಿಕ್ಕಮಗಳೂರು: ಮುಂದುಗಡೆ ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಗೂಂಡಾಗಿರಿ ಪ್ರದರ್ಶಿಸಿದ ಪಿಎಸ್ಐಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಚಿಕ್ಕಮಗಳೂರಿನ ಸಿರಗುಂದ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಚಿಕ್ಕಮಗಳೂರಿನ ಸಿರಗುಂದ ಗ್ರಾಮದ ಬಳಿ ಕಾರೊಂದು ಮುಂದೆ ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಆಗ ಡಿಕ್ಕಿ ಹೊಡೆದುದನ್ನು ಪ್ರಶ್ನಿಸಿದಾಗ, ಹಿಂಬದಿ ಕಾರಿನಲ್ಲಿದ್ದ ಪಿಎಸ್ಐ ಪಿಸ್ತೂಲ್ ಹೊರಗೆ ತೆಗೆದು, ಏಯ್ ಮಗನೇ ಮೂಳೆ ಮುರಿದು ಕೈಗೆ ಕೊಡ್ತೀನಿ ಎಂದು ಧಮ್ಕಿ ಹಾಕಿದ್ದ ಪ್ರಸಂಗ ನಡೆಯಿತು.

ಆಗ ಗ್ರಾಮಸ್ಥರು ಒಟ್ಟಾಗಿ ಮಫ್ತಿಯಲ್ಲಿದ್ದ ಪಿಎಸ್ಐ ಗವಿರಾಜು ಹಾಗೂ ಇನ್ನಿಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದರು, ಈ ಸಂದರ್ಭದಲ್ಲಿ ವಾಗ್ವಾದ ನಡೆದಾಗ ಗ್ರಾಮಸ್ಥರು ಮೂರು ಪೊಲೀಸರನ್ನು ಥಳಿಸಿ ಕೂಡಿ ಹಾಕಿದ್ದರು.

ಗಲಾಟೆ ವಿಕೋಪಕ್ಕೆ ಹೋದಾಗ ಸ್ಥಳಕ್ಕೆ ಪೊಲೀಸರ ಪಡೆ ಆಗಮಿಸಿತ್ತು. ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಕೂಡಾ ಸ್ಥಳಕ್ಕೆ ಬಂದಾಗ ಗ್ರಾಮಸ್ಥರ ಮೇಲೆ ಹರಿಹಾಯ್ದಿದ್ದರು. ಪಿಎಸ್ಐ ಜೊತೆ ಹೇಗೆ ನಡೆದುಕೊಳ್ಳಬೇಕು ಅಂತ ಗೊತ್ತಿಲ್ವೇನ್ರೋ…ಹಲ್ಲು ಮುರಿದು ಕೈಗೆ ಕೊಡ್ತೀನಿ ಎಂದು ಅವಾಜ್ ಹಾಕಿದ್ದರು. ಪ್ರಕರಣದ ಸಂಬಂಧ 6 ಮಂದಿಯನ್ನು ವಶಕ್ಕೆ ತೆಗೆದುಕೊಂಡು ಕೇಸ್ ಹಾಕಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

No Comments

Leave A Comment