Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:ಶ್ರೀಮದ್ ಭಾಗವತ ಪುರಾಣದ ಪಾರಾಯಣ,ಪ್ರವಚನಕ್ಕೆ ಚಾಲನೆ

ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟರಮಣ ದೇವಸ್ಥಾನದಲ್ಲಿ ಶ್ರೀದೇವರ 120ನೇ ಪ್ರತಿಷ್ಠಾ ವರ್ದ೦ತಿ ಮಹೋತ್ಸವದ ಸಮಯದಲ್ಲಿ ಹಮ್ಮಿಕೊ೦ಡ ಸತ್ಕಾರ್ಯಗಳ ಭಾಗವಾಗಿ ಶ್ರೀದೇವಸ್ಥಾನದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ಜರಗಿಸಲು ಈ ಮೊದಲು ಸ೦ಕಲ್ಪಿಸಿದ೦ತೆ ಸ್ವಸ್ತಿ ದುರ್ಮುಖ ಸ೦ವತ್ಸರದ ಫಾಲ್ಗುಣ ಶುದ್ಧ ಅಷ್ಟಮಿ 05-03-2017 ನೇ ಭಾನುವಾರದ ಶುಭದಿನ ಗೋಧೂಳಿ ಮುಹೂರ್ತದಲ್ಲಿ ಶ್ರೀಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ವೈಭವದಿ೦ದ ಆಚರಿಸಲು ನಿರ್ಧರಿಸಲಾಗಿದೆ.

ಶ್ರೀಶ್ರೀನಿವಾಸ ಕಲ್ಯಾಣ ಮಹೋತ್ಸವದ ಪೂರ್ವಿಭಾವಿಯಾಗಿ ವೈದಿಕ ಸಾಹಿತ್ಯದಲ್ಲಿ ಅಡಕವಾಗಿರುವ ತತ್ವಗಳನ್ನು ಮನವರಿಕೆಮಾಡಿಕೊಡುವ ಅಷ್ಟಾದಶ ಪುರಾಣಗಳಲ್ಲಿ ಐದನೆಯದಾದ :ಸಾಧನ ಭಕ್ತಿ ಮತ್ತು ಸಾಧ್ಯ ಭಕ್ತಿಗಳ ದಾಸಿಯಾಗಿ ಮುಕ್ತಿ ಅ೦ಗನೆಯು ಧಾವಿಸಿ ಬರುವ,ಭಗವದ್ಗೀತೆಗೆ ಸರಿಸಮವೆನಿಸಿದ ಶ್ರೀಮದ್ ಭಾಗವತ ಪುರಾಣದ ಪಾರಾಯಣ ಪ್ರವಚನಗಳ ಪುಣ್ಯಪ್ರದ ಕಾರ್ಯಕ್ರಮವನ್ನು ವೇದಮೂರ್ತಿ ಚೇ೦ಪಿ ಶ್ರೀಕಾ೦ತ್ ರ೦ಗನಾಥ ಭಟ್ ರವರು ಫಾಲ್ಗುಣ ಶುದ್ಧ ಪಾಡ್ಯವಾದ ಸೋಮವಾರ(ಇ೦ದು)ದಿ೦ದ ಶನಿವಾರ(4-03-2017)ರ ಪರ್ಯ೦ತ ಸಾಯ೦ಕಾಲ 6.30ರಿ೦ದ 8-15ರ ತನಕವೂ:ಮ೦ಗಲಾಚರಣೆಯ ಪ್ರವಚನವನ್ನು 05-03-2017ರ ಭಾನುವಾರದ೦ದು ಪೂರ್ವಾಹ್ನ ೧೧ರಿ೦ದ ಮಧ್ಯಾಹ್ನ 12-15ರವರೆಗೆ ದೇವಸ್ಥಾನದ ಭಜನಾ ಸಪ್ತಾಹ ಪೌಳಿಯಲ್ಲಿ ನೆರವೇರಿಸಲಿದ್ದಾರೆ.

ಇ೦ದು ಸೋಮವಾರ ಮು೦ಜಾನೆ ದೇವಸ್ಥಾನದ ಆಡಳಿತ ಮ೦ಡಳಿಯ ಮೊಕ್ತೇಸರರು ಮತ್ತು ಧರ್ಮದರ್ಶಿ ಮ೦ಡಳಿಯ ಸದಸ್ಯರು ಹಾಗೂ ಶ್ರೀಶ್ರೀನಿವಾಸ ಕಲ್ಯಾಣ ಮಹೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಸಮಾಜ ಬಾ೦ಧವರ ಉಪಸ್ಥಿತಿಯಲ್ಲಿ ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.

No Comments

Leave A Comment