Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಮೇಘಾಲಯದಲ್ಲಿ ಭೀಕರ ಅಪಘಾತ: ರಸ್ತೆ ವಿಭಜಕಕ್ಕೆ ಟ್ರಕ್ ಡಿಕ್ಕಿ, 16 ಸಾವು

ನವದೆಹಲಿ: ಮೇಘಾಲಯದ ಪಶ್ಚಿಮ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಟ್ರಕ್ ಮಗುಚಿ 16 ಮಂದಿ ಸಾವಿಗೀಡಾದ ಘಟನೆ ನಡೆದಿದೆ.

ಸೋಮವಾರ ಬೆಳಗ್ಗೆ ದೋಖ್‍ಕ್ರೋಹ್ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದ್ದು 50 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಐಎಎನ್‍ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇಲ್ಲಿನ ಪ್ರೆಸ್‌ಬೆಟೇರಿಯನ್ ಚರ್ಚ್‍ಗೆ ಜನರನ್ನು ಕರೆದೊಯ್ಯುತ್ತಿದ್ದ ಟ್ರಕ್‍ನಲ್ಲಿ 70 ಮಂದಿ ಪ್ರಯಾಣಿಕರಿದ್ದರು. ನಿಯಂತ್ರಣ ತಪ್ಪಿದ ಟ್ರಕ್ ಕಾಂಕ್ರೀಟ್ ಬ್ಯಾರಿಕೇಡ್‍ಗೆ ಹೋಗಿ ಢಿಕ್ಕಿ ಹೊಡೆದು ಮಗುಚಿದೆ.

ಸ್ಥಳದಲ್ಲೇ 12 ಮಂದಿ ಸಾವಿಗೀಡಾಗಿದ್ದು, ಗಂಭೀರ ಗಾಯಗೊಂಡ ನಾಲ್ಕು ಮಂದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ 50 ಮಂದಿಗೆ ಗಾಯಗಳಾಗಿವೆ. ಚಾಲಕನ ಸ್ಥಿತಿಯೂ ಗಂಭೀರವಾಗಿದೆ ಎಂದು ವೆಸ್ಟ್ ಖಾಸಿ ಹಿಲ್ಸ್ ಪೊಲೀಸ್ ಅಧಿಕಾರಿ ಸಿಲ್ವೆಸ್ಟರ್ ನೋಂಗ್ಟಂನ್‍ಗರ್ ತಿಳಿಸಿದ್ದಾರೆ.

No Comments

Leave A Comment