Log In
BREAKING NEWS >
ಚು೦...ಚು೦ ಚಳಿಯಲ್ಲಿ ಬೃಹತ್ ಜನಸ್ತೋಮದ ನಡುವೆ ಪಲಿಮಾರು ಮಠಾಧೀಶರ ದ್ವಿತೀಯ ಪರ್ಯಾಯದ ಭವ್ಯ ಮೆರಣಿಗೆ...

ಮಾಧ್ಯಮ ಬಡವರ ಪರ ಇರಬೇಕು: ಮಂಗಳೂರಿನಲ್ಲಿ ಪಿಣರಾಯಿ ವಿಜಯನ್

ಮಂಗಳೂರು: ಜಾತ್ಯತೀತ ಎಂದು ಹೇಳಿಕೊಳ್ಳುವ ಅನೇಕ ಮಾಧ್ಯಮ ಸಂಸ್ಥೆಗಳು ಕೂಡ ಕೋಮುವಾದಿ ನಿಲುವು ತೆಗೆದುಕೊಳ್ಳುತ್ತಿವೆ. ಇದು ಸಮಾಜಕ್ಕೆ ಅಪಾಯಕಾರಿ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.

ಅವರು ಶನಿವಾರ ವಾರ್ತಾಭಾರತಿ ಪತ್ರಿಕೆಯ ಮಾಧ್ಯಮ ಕೇಂದ್ರ ನೂತನ ಕಚೇರಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಸುದ್ದಿ ಮಾಧ್ಯಮ ಬಡವರ ಮತ್ತು ಸಮಾಜದ ಒಳಿತಿನ ಪರ ಇರಬೇಕು. ಆದರೆ ಶೇ ೯೫ ಮಾಧ್ಯಮ ಬಂಡವಾಳಶಾಹಿ ಪರ ಇವೆ. ದೇಶದಲ್ಲಿ ಬಹುತೇಕ ಜನಸಂಖ್ಯೆ ಬಡವರಾಗಿ ಇರುವಾಗ ಮಾಧ್ಯಮ ಬಡಜನರ, ಶೋಷಿತರ ಪರ ಇರಬೇಕು ಎಂದರು.

ತಮ್ಮ ಈ ಭೇಟಿಗೆ ಅನುವು ಮಾಡಿಕೊಟ್ಟ ಕರ್ನಾಟಕ ಸರ್ಕಾರಕ್ಕೆ ಅವರು ಈ ಸಂದರ್ಭ ಧನ್ಯವಾದ ಹೇಳಿದರು. ಇನ್ನೂ ಹೆಚ್ಚಿನ ವಿಚಾರ ಹೇಳುವುದಿದೆ. ಅವೆಲ್ಲವನ್ನೂ ಬಳಿಕ ನಡೆಯುವ ಕಾರ್ಯಕ್ರಮದಲ್ಲಿ ಹೇಳುವುದಾಗಿ ಸೂಚ್ಯವಾಗಿ ನುಡಿದರು.

No Comments

Leave A Comment