Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಚಂದ್ರಶೇಖರ್‌ ಸ್ವಾಮೀಜಿ ವಿರುದ್ಧ ವಂಚನೆ ದೂರು

ಬೆಂಗಳೂರು: ಜಾಹೀರಾತು ಹಾಕಿಸುವುದಾಗಿ ಎರಡು ಕೋಟಿ ಹಣ ಪಡೆದು ವಂಚಿಸಿದ್ದ ಆರೋಪದ ಮೇಲೆ ಜೋತಿಷಿ ಚಂದ್ರಶೇಖರ್‌ ಭಟ್‌ ಅಲಿಯಾಸ್‌ ಚಂದ್ರಶೇಖರ್‌ ಸ್ವಾಮೀಜಿ ಸಹಿತ ಮೂವರ ವಿರುದ್ಧ ಆರ್‌.ಟಿ. ನಗರ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ. ಕೋರ್ಟ್‌ ಸೂಚನೆ ಮೇರೆಗೆ ಚಂದ್ರಶೇಖರ್‌ ಭಟ್‌, ಸ್ವಾಮೀಜಿ ಪತ್ನಿ ರಜನಿ ಸಿ. ಹಾಗೂ ಗಿರೀಶ್‌ ಕಾಮತ್‌ ವಿರುದ್ಧ ಎಫ್ಐಆರ್‌ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರುದಾರ ಉದ್ಯಮಿ ಅಶ್ರಫ್ ಅಲಿ ಮತ್ತು ಚಂದ್ರಶೇಖರ್‌ ಸ್ವಾಮೀಜಿ ಪರಿಚಿತರಾಗಿದ್ದು, ನಗರದ ಅರಮನೆ ರಸ್ತೆಯಲ್ಲಿನ ಅಕ್ಕ-ಪಕ್ಕದ ರಸ್ತೆಗಳಲ್ಲಿ ಬ್ಯಾನರ್‌, ಹೋರ್ಡಿಂಗ್ಸ್‌ ಹಾಕಿಸುವುದಾಗಿ 2011ರಲ್ಲಿ ಉದ್ಯಮಿಯಿಂದ ಸ್ವಾಮೀಜಿ ಎರಡು ಕೋಟಿ ಹಣ ಪಡೆದಿದ್ದರು. ಆದರೆ, ಯಾವುದೇ ಜಾಹೀರಾತು ಇರುವ ಬ್ಯಾನರ್‌ ಹಾಗೂ ಹೋರ್ಡಿಂಗ್ಸ್‌ ಹಾಕಿಸಿರಲಿಲ್ಲ. ಹೀಗಾಗಿ, ತಮ್ಮ ಹಣ ಹಿಂದಿರುಗಿಸುವಂತೆ ಉದ್ಯಮಿ ಸ್ವಾಮೀಜಿಯನ್ನು ಕೇಳಿದ್ದರು. ಹಣ ವಾಪಸ್‌ ನೀಡದ ಹಿನ್ನೆಲೆಯಲ್ಲಿ ಉದ್ಯಮಿ ಸ್ಥಳೀಯ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಇದೀಗ ನ್ಯಾಯಾಲಯದ ಸೂಚನೆ ಮೇರೆಗೆ ಆರೋಪಿಗಳ ವಿರುದ್ಧ ಎಫ್ಐಆರ್‌ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಸಿ ಆರೋಪಿಗಳ ವಿರುದ್ಧ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

No Comments

Leave A Comment