Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಅಶ್ವಿನ್ ಜಡೇಜಾ ಜುಗಲ್ ಬಂದಿ; 285ಕ್ಕೆ ಆಸ್ಟ್ರೇಲಿಯಾ ಆಲ್ ಔಟ್

ಪುಣೆ: ಭಾರತದ ಸ್ಪಿನ್ ಅಸ್ತ್ರಗಳಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರ ಜುಗಲ್ ಬಂದಿ ಬೌಲಿಂಗ್ ಪ್ರದರ್ಶನದ ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯಾವನ್ನು 285ರನ್ ಗಳಿಗೆ ಆಲ್ ಔಟ್ ಮಾಡಿದೆ.

ಆ ಮೂಲಕ  ಭಾರತ ಗೆಲ್ಲಲು 441 ರನ್ ಗಳನ್ನು ಗಳಿಸಬೇಕಿದೆ.ನಿನ್ನೆ 2ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 143 ರನ್ ಗಳಿಸಿತ್ತು. 3ನೇ ದಿನಕ್ಕೆ ನಾಯಕ ಸ್ಮಿತ್ (ಅಜೇಯ 59)ಹಾಗೂ ಮಾರ್ಷ್ (ಅಜೇಯ 21)ಕ್ರೀಸ್ ಕಾಯ್ದುಕೊಂಡಿದ್ದರು. 3ನೇ ದಿನ ಇನ್ನಿಂಗ್ಸ್ ಆರಂಭಿಸಿದ ಈ  ಜೋಡಿಗೆ ಜಡೇಜಾ ಶಾಕ್ ನೀಡಿದರು. 31 ರನ್ ಗಳಿಸಿದ್ದ ಮಾರ್ಷ್ ಅವರ ವಿಕೆಟ್ ಅನ್ನು ಜಡೇಜಾ ಪಡೆಯುವುದರೊಂದಿಗೆ ಆಸ್ಟ್ರೇಲಿಯಾ ಆರಂಭಿಕ ಆಘಾತ ಎದುರಿಸಿತು.

ಬಳಿಕ ವೇಡ್ ಕೂಡ 20 ರನ್ ಗಳಿಸಿ ಔಟ್ ಆದರು.  ಸಾರ್ಟ್ಕ್ 30 ರನ್ ಗಳಿಸಿ ಅಶ್ವಿನ್ ಗೆ ವಿಕೆಟ್ ಒಪ್ಪಿಸದರು. ಅತ್ತ ಒಂದೆಡೆ ವಿಕೆಟ್ ಗಳು ಉರುತ್ತಿದ್ದರೆ ಮತ್ತೊಂದು ಬದಿಯಲ್ಲಿ ಗಟ್ಟಿಯಾಗಿ ನಿಂತು ಆಡುತ್ತಿದ್ದ ನಾಯಕ ಸ್ಮಿತ್ ನೋಡ ನೋಡುತ್ತಿದ್ದಂತೆಯೇ ಶತಕ ಸಿಡಿಸಿ  ಸಂಭ್ರಮಿಸಿದರು. 109 ರನ್ ಗಳಿಸಿದ್ದ ಸ್ಮಿತ್ ಗೆ ಜಡೇಜಾ ಎಲ್ ಬಿ ಮೂಲಕ ಪೆವಿಲಿಯನ್ ದಾರಿ ತೋರಿಸಿದರು,ಬಳಿಕ ಬಂದ ಯಾವೊಬ್ಬ ಆಟಗಾರ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡಲಿಲ್ಲ.

ಅಂತಿಮವಾಗಿ ಆಸ್ಟ್ರೇಲಿಯಾ ತಂಡ 285 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಆ ಮೂಲಕ ಭಾರತಕ್ಕೆ ಗೆಲ್ಲಲು 441 ರನ್  ಗಳ ಸವಾಲಿನ ಗುರಿ ನೀಡಿದೆ. ಆಟ ಮುಗಿಯಲು ಇನ್ನೂ ಎರಡೂವರೆ ದಿನದಾಟ ಬಾಕಿ ಇದ್ದು, ಕೊಹ್ಲಿ ಪಡೆ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶನ ನೀಡಿದರೆ ಮಾತ್ರ ಈ ಪಂದ್ಯ ಗೆಲ್ಲುವ ಸಾಧ್ಯತೆ ಇದೆ.

ಇನ್ನು ಭಾರತದ ಪರ ಆರ್ ಅಶ್ವಿನ್ 4 ವಿಕೆಟ್ ಮತ್ತು ರವೀಂದ್ರ ಜಡೇಜಾ 3 ವಿಕೆಟ್ ಪಡೆಯುವ ಮೂಲಕ ಯಶಸ್ವಿ ಬೌಲರ್ ಗಳೆನಿಸಿದರೆ, ಉಮೇಶ್ ಯಾದವ್ 2 ಮತ್ತು ಜಯಂತ್ ಯಾದವ್ 1 ವಿಕೆಟ್ ಪಡೆದರು.

No Comments

Leave A Comment