Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ಪದಕ ಗೆಲ್ಲಲು ನಾರಂಗ್‌ ನೆರವು: ಪೂಜಾ ಘಾಟ್ಕರ್‌

ಹೊಸದಿಲ್ಲಿ: ನನ್ನ ಈ ಸಾಧನೆಗೆ ಗಗನ್‌ ನಾರಂಗ್‌ ಅವರ ಮಾರ್ಗದರ್ಶನವೇ ಕಾರಣವಾಗಿದೆ. ಶೂಟಿಂಗ್‌ ಬಾಳ್ವೆಯಲ್ಲಿ ಮಹತ್ತರ ಸಾಧನೆ ಗೈಯಲು ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಕಂಚಿನ ಪದಕ ಗೆದ್ದ ಬಳಿಕ ಪೂಜಾ ಫಾಟ್ಕರ್‌ ಹೇಳಿದ್ದಾರೆ. ಪದಕ ಗೆಲ್ಲುವ ವೇಳೆ ನಾರಂಗ್‌ ಅವರು ಪ್ರೇಕ್ಷಕರ ಗ್ಯಾಲರಿಯಲ್ಲಿ ಇದ್ದರು.

ನಾನು ಯಾವುದೇ ಯೋಜನೆ ಹಾಕಿಕೊಂಡಿರಲಿಲ್ಲ. ಆದರೆ ಗಗನ್‌ ನಾರಂಗ್‌ ಅವರು ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಮಾನಸಿಕ ಮತ್ತು ತಾಂತ್ರಿಕವಾಗಿ ನನಗೆ ಬಹಳಷ್ಟು ಬೆಂಬಲ ನೀಡಿದ್ದಾರೆ. ಗುರುವಾರ ನಾವಿಬ್ಬರು ಜತೆಯಾಗಿ ಮಾತ‌ ನಾಡಿದ್ದೇವೆ ಮತ್ತು ಅವರು ಹೇಳಿದ್ದ ಸೂಚನೆಯಂತೆ ನಾನಿಂದು ಆಡಿದ್ದೇನೆ ಮತ್ತು ಇದರಿಂದ ಪದಕ ಗೆಲ್ಲಲು ಸಾಧ್ಯ ವಾಯಿತು ಎಂದು ಘಾಟ್ಕರ್‌ ತಿಳಿಸಿದರು.

ಘಾಟ್ಕರ್‌ ಅರ್ಹತಾ ಸುತ್ತಿನಲ್ಲಿ ದ್ವಿತೀಯ ಸ್ಥಾನ ಪಡೆದು ಫೈನಲಿಗೆ ತೇರ್ಗಡೆಯಾಗಿದ್ದರು.

No Comments

Leave A Comment