Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಇಂದು ಜನರ ನಡೆ ಉಡುಪಿ ಶ್ರೀಮಾತಾ ಅಮೃತಾನಂದಮಯೀನೆಡೆಗೆ…

ಉಡುಪಿ: ಶ್ರೀಮಾತಾ ಅಮೃತಾನಂದಮಯೀ ದೇವಿಯವರು ಶನಿವಾರ ಉಡುಪಿಗೆ ಆಗಮಿಸಲಿದ್ದಾರೆ. ಇವರ ಉಡುಪಿ ಭೇಟಿ ಮೊದಲ ಬಾರಿಯಾಗಿರುವುದರಿಂದ ಇದರ ಯಶಸ್ವಿಗಾಗಿ ಕಾರ್ಯಕರ್ತರು ಹಗಲಿರುಳು ದುಡಿಯುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು 2,000 ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ.

ಎಂಜಿಎಂ ಕಾಲೇಜಿನ ಮೈದಾನದಲ್ಲಿ ಸಭೆ ನಡೆಯಲಿದ್ದು, ಶನಿವಾರ ಮಧ್ಯಾಹ್ನದಿಂದ ಜನರು ಬರುವ ನಿರೀಕ್ಷೆ ಇದೆ. ಅಪರಾಹ್ನ 4ರಿಂದ ಭವ್ಯ ವೇದಿಕೆಯಲ್ಲಿ ಕಾರ್ಯಕ್ರಮ ಜರಗಲಿದೆ.

6 ಗಂಟೆಗೆ ಸಭೆಯಲ್ಲಿ ರಾಜ್ಯಪಾಲ ವಜೂಭಾç ರುಡಾಭಾç ವಾಲಾ ಮುಖ್ಯ ಅತಿಥಿಯಾಗಿ, ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ, ಮೀನುಗಾರಿಕೆ ಸಚಿವ ಪ್ರಮೋದ್‌ ಮಧ್ವರಾಜ್‌, ಸಂಸದರಾದ ಶೋಭಾ, ಆಸ್ಕರ್‌ , ಮಣಿಪಾಲ ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಗೌರವ ಅತಿಥಿಗಳಾಗಿ ಆಗಮಿಸುವರು. ವಿವಿಧ ಸೇವಾ ಯೋಜನೆಧಿಗಳನ್ನು ಈ ಸಂದರ್ಭ ಪ್ರಕಟಿಸಲಾಗುವುದು. ಸಾರ್ವಜನಿಕ ಸಭೆ ಬಳಿಕ ಸತ್ಸಂಗ, ಭಜನೆ, ಧ್ಯಾನ, ವೈಯಕ್ತಿಕ ದರ್ಶನ ಆಯೋಜಿಸಲಾಗಿದೆ.

ಕೇರಳದಿಂದ ಬಂದವರು ವೇದಿಕೆಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ತುಳುನಾಡ ಸಂಸ್ಕೃತಿ ಬಿಂಬಿಸುವ ಆಕರ್ಷಕ ಬ್ಯಾಕ್‌ಡ್ರಾಪ್‌ ಮೂಡಿಬರಲಿದೆ.

ಶನಿವಾರ ರಾತ್ರಿ ಸುಮಾರು 30,000 ಜನರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಇನ್ನೂ 30,000 ಜನರಿಗೆ ಬೇಕಾದಷ್ಟು ಆಹಾರ ಸಾಮಗ್ರಿಗಳನ್ನು ಸಿದ್ಧಪಡಿಸಿದ್ದಾರೆ. ಶನಿವಾರ ಮಧ್ಯಾಹ್ನ ಊಟ ಮತ್ತು ರವಿವಾರ ಬೆಳಗ್ಗೆ ಉಪಾಹಾರದ ವ್ಯವಸ್ಥೆಯೂ ಇದೆ.

ಶುಕ್ರವಾರ ಸಚಿವ ಪ್ರಮೋದ್‌ ಮಧ್ವರಾಜ್‌ ನೇತೃತ್ವದಲ್ಲಿ ಹೊರೆಕಾಣಿಕೆ ಸಮರ್ಪಣೆ  ನಡೆದಿದ್ದು, ಶ್ರೀಕೃಷ್ಣಮಠದಿಂದ ಪರ್ಯಾಯ ಶ್ರೀ ಪೇಜಾವರ ಶ್ರೀ ಅನ್ನಧಿದಾನಧಿಕ್ಕಾಗಿ 1 ಲ. ರೂ. ದೇಣಿಗೆ ನೀಡಿದ್ದಾರೆ. ಅಮೃತಾನಂದಮಯಿ ಅವರ ಜತೆ ಬರುವ ಮಹಿಳಾ ಭಕ್ತರಿಗೆ ಕುಂಜಿಬೆಟ್ಟು ಇಎಂಎಚ್‌ಎಸ್‌ ಶಾಲೆಯಲ್ಲಿ, ಪುರುಷರಿಗೆ ಸಗ್ರಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಉಪೇಂದ್ರ ಪೈ ಸ್ಮಾರಕ ಕಾಲೇಜು, ಕಾನೂನು ಕಾಲೇಜಿನಲ್ಲಿಯೂ ವ್ಯವಸ್ಥೆ ಮಾಡಲಾಗಿದೆ. ಕುಂಜಿಬೆಟ್ಟು ಆಸುಪಾಸಿನವರು ತಮ್ಮ ತಮ್ಮ ಮನೆಗಳಲ್ಲಿ ಭಕ್ತರನ್ನು ಉಳಿಸಿಕೊಳ್ಳಲು ಮುಂದೆ ಬಂದಿದ್ದಾರೆ.

ದರ್ಶನಕ್ಕೆ ಟೋಕನ್‌ 
ಸಭೆ, ಸತ್ಸಂಗ, ಪ್ರವಚನದ ಬಳಿಕ (ಸುಮಾರು ರಾತ್ರಿ 9 ಗಂಟೆ) ಕೇರಳದಿಂದ ಬಂದ ಆಶ್ರಮವಾಸಿಗಳೇ ಭಕ್ತರಿಗೆ ಟೋಕನ್‌ ಕೊಡುತ್ತಾರೆ. ಮೊದಲು ಬಂದು ಕುಳಿತವರಿಗೆ ಮೊದಲ ಟೋಕನ್‌ ಸಿಗುತ್ತದೆ. 20,000 ಆಸನಗಳನ್ನು ವ್ಯವಸ್ಥೆಗೊಳಿಸಲಾಗಿದೆ. ದರ್ಶನ ಕಾರ್ಯಕ್ರಮ ರವಿವಾರ ಬೆಳಗ್ಗೆಯೂ ಮುಂದುವರಿಯಲಿದೆ.

ಕ್ಯಾಂಟೀನ್‌ ವ್ಯವಸ್ಥೆ, ಕುಡಿಯುವ ನೀರು, ವೈದ್ಯಕೀಯ ಶುಶ್ರೂಷೆ, ಉಚಿತ ವೈದ್ಯಕೀಯ ಸಹಾಯವನ್ನೂ ಕಲ್ಪಿಸಲಾಗಿದೆ. ಶೌಚಾಲಯಧಿಗಳನ್ನು ನಿರ್ಮಿಸಲಾಗಿದೆ.

ವಾಹನ ನಿಲುಗಡೆ
ದ್ವಿಚಕ್ರ ವಾಹನಗಳನ್ನು ಉಪೇಂದ್ರ ಪೈ ಸ್ಮಾರಕ ಕಾಲೇಜಿನ ಮೈದಾನದಲ್ಲಿ ನಿಲ್ಲಿಸಬೇಕು. ಎಲ್ಲ ರೀತಿಯ ಕಾರುಗಳನ್ನು ಕಲ್ಸಂಕ ರೋಯಲ್‌ ಗಾರ್ಡನ್‌ನಲ್ಲಿ ನಿಲುಗಡೆಗೊಳಿಸಬೇಕು. ಅಲ್ಲಿಂದ ಸಮಾರಂಭಕ್ಕೆ ಬರಲು ಮತ್ತು ವಾಪಸು ಹೋಗಲು ರಾತ್ರಿಯಿಡೀ ವಾಹನದ ವ್ಯವಸ್ಥೆ ಮಾಡಲಾಗುತ್ತದೆ.

No Comments

Leave A Comment