Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಉಡುಪಿ:ದೈವಜ್ಞ ಬ್ರಾಹ್ಮಣ ಸಂಘದ 35ನೇ ವಾರ್ಷಿಕೋತ್ಸವ

ಉಡುಪಿಯ ಒಳಕಾಡಿನಲ್ಲಿರುವ ದೈವಜ್ಞ ಮಂದಿರದಲ್ಲಿ ಭಾನುವಾರದಂದು ದೈವಜ್ಞ ಬ್ರಾಹ್ಮಣ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ಶ್ರೀದೇವರ ಪ್ರಾರ್ಥನೆಯೊಂದಿಗೆ ಗಣಹೋಮ, ಸತ್ಯನಾರಾಯಣ ಪೂಜೆ, ಮಹಾಮಂಗಳಾರತಿಯ ಬಳಿಕ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.

ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಕೆ. ವಾಸುದೇವ ಶೇಟ್, ಅಧ್ಯಕ್ಷರು ದೈವಜ್ಞ ಬ್ರಾಹ್ಮಣ ಸಂಘ ಒಳಕಾಡು ಉಡುಪಿ ಇವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶ್ರೀಮತಿ ಅನುರಾಧ ಜಿ., ಅಪರ ಜಿಲ್ಲಾಧಿಕಾರಿಗಳು, ಉಡುಪಿ, ಮುಖ್ಯ ಅತಿಥಿಯಾಗಿ ನಾಗೇಶ್ ಎ. ರಾಯ್ಕರ್, ಜಿಲ್ಲಾ ಪಂಚಾಯತ್ ಉಡುಪಿ, ಸಂಘದ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಶೇಟ್, ಖಜಾಂಚಿಯಾದ ದಿವಾಕರ್ ಶೇಟ್, ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ ಶಶಿಕಲಾ ಚಂದ್ರಕಾಂತ್ ಶೇಟ್ ಪ್ರಾರ್ಥನೆಗೈದರು. ಮನೋಹರ್ ಬೈಲೂರು ಸ್ವಾಗತಿಸಿದರು. ಕಾರ್ಯದರ್ಶಿಯಾದ ನಾಗೇಶ್ ಶೇಟ್ ಅವರು ವರದಿವಾಚನ ಮತ್ತು ಕಾರ್ಯಕ್ರಮ ನಿರೂಪಣೆ ನೆರವೇರಿಸಿದರು.

ದೈವಜ್ಞ ಬ್ರಾಹ್ಮಣ ಸಂಘದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಪುರಸ್ಕಾರವನ್ನು ವಿತರಿಸಿದರು. ಈಜು ಸ್ಪರ್ಧೆಯಲ್ಲಿ ವಿಶೇಷ ಸಾಧನೆಗೈದ ಸುಧೀರ್ ಶೇಟ್, ಸನತ್ ಶೇಟ್ ಮತ್ತು ಕರಾಟೆಯಲ್ಲಿ ವಿಶೇಷ ಸಾಧನೆಗೈದ ವಿಶೇಷ್ ಶೇಟ್ ಇವರುಗಳನ್ನು ಮುಖ್ಯ ಅತಿಥಿಯಾದ ಅನುರಾಧಾ ಜಿ. ಅವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

ವಾರ್ಷಿಕೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ಬಹುಮಾನಗಳನ್ನು ನಾಗೇಶ್ ರಾಯ್ಕರ್ ವಿತರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಘದ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ಸಂಪನ್ನಗೊಂಡಿತು.

No Comments

Leave A Comment