Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

1st Test: O’Keefe claims 6-35, India bowled out for 105/ಆಸಿಸ್ ಬೌಲರ್ ಗಳ ಪಾರಮ್ಯ; ಕೇವಲ 105 ರನ್ ಗಳಿಗೆ ಭಾರತ ಆಲ್ ಔಟ್!

ಪುಣೆ: ಬಾರ್ಡರ್-ಗವಾಸ್ಕರ್ ಟ್ರೋಫಿ ನಿಮಿತ್ತ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಕೇವಲ 105 ರನ್ ಗಳಿಗೆ ಆಲ್ ಔಟ್ ಆಗಿದೆ.

ಆ ಮೂಲಕ  ಆಸ್ಟ್ರೇಲಿಯಾ ವಿರುದ್ಧ 155 ರನ್ ಗಳ ಹೀನಾಯ ಹಿನ್ನಡೆ ಕಂಡಿದೆ.ಬೆಳಗ್ಗೆ 2ನೇ ದಿನದಾಟದ ಆರಂಭದಲ್ಲೇ ಸ್ಟ್ರಾರ್ಕ್ ವಿಕೆಟ್ ಪಡೆಯುವ ಮೂಲಕ ಭಾರತ ಆಸಿಸ್ ತಂಡವನ್ನು ಆಲ್ ಮಾಡಿತ್ತು. ಬಳಿಕ ಗರಿಷ್ಷ ರನ್ ಕಲೆ ಹಾಕುವ ಮೂಲಕ ಸ್ಟೀವ್ ಸ್ಮಿತ್ ಬಳಗದ ಮೇಲೆ ಒತ್ತಡ ಹೇರುವ  ಉತ್ಸಾಹದಿಂದಲೇ ಭಾರತ ಕಣಕ್ಕಿಳಿಯಿತು. ಆದರೆ ಭಾರತದ ಆಸೆಗೆ ಆಸ್ಟ್ರೇಲಿಯಾದ ದೈತ್ಯ ಬೌಲರ್ ಗಳು ತಣ್ಣೀರೆರಚಿದರು.

ಪ್ರಮುಖವಾಗಿ ಆಸಿಸ್ ತಂಡ ಒ.ಕೀಫ್ ಭಾರತದ ಐದು ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ  ಪತನಕ್ಕೆ ಪ್ರಮುಖ ಕಾರಣರಾದರು.ಭಾರತ ತನ್ನ ಇಡೀ ಮೊದಲ ಇನ್ನಿಂಗ್ಸ್ ಅಲ್ಲಿ ಕೇವಲ 40.1 ಓವರ್ ಗಳನ್ನಷ್ಟೇ ಆಡಿದೆ. ಇದು ವಿಶ್ವದ ಅತ್ಯಂತ ಬಲಿಷ್ಠ ಬ್ಯಾಟಿಂಗ್ ಲೈನ್ ಆಪ್ ಹೊಂದಿರುವ ಭಾರತದ ಕಳಪೆ ಬ್ಯಾಟಿಂಗ್ ಹಾಗೂ ಆಸ್ಟ್ರೇಲಿಯಾ ತಂಡದ ಅತ್ಯುತ್ತಮ  ಬೌಲಿಂಗ್ ಗೆ ಹಿಡಿದ ಕನ್ನಡಿಯಾಗಿದೆ.

ಇಡೀ ತಂಡದಲ್ಲಿ ಆರಂಭಿಕ ಆಟಗಾರ ಕೆಎಲ್ ರಾಹುಲ್ ಗಳಿಸಿದ 64 ರನ್ ಗಳೇ ತಂಡದ ಪರ ಓರ್ವ ಆಟಗಾರ ಗಳಿಸಿದ ಗರಿಷ್ಟ ಸ್ಕೋರ್ ಆಗಿದ್ದು, ರಹಾನೆ ಗಳಿಸಿದ ಕೇವಲ 13 ರನ್ ಗಳೇ  ಎರಡನೇ ಗರಿಷ್ಠ ಸ್ಕೋರ್ ಆಗಿದೆ. ಮುರಳಿ ವಿಜಯ್ ಗಳಿಸಿದ 10 ರನ್ ಗಳನ್ನು ಹೊರತು ಪಡಿಸಿದರೆ ಉಳಿದೆಲ್ಲ ಬ್ಯಾಟ್ಸಮನ್ ಗಳ ವೈಯುಕ್ತಿಕ ಸ್ಕೋರ್ ಒಂದಂಕಿ ದಾಟಿಲ್ಲ. ಪ್ರಮುಖವಾಗಿ ನಾಯಕ ವಿರಾಟ್ ಕೊಹ್ಲಿ ಮತ್ತು ವಿಕೆಟ್  ಕೀಪರ್ ಬ್ಯಾಟ್ಸಮನ್ ವೃದ್ಧಿಮಾನ್ ಸಾಹಾ ಶೂನ್ಯಕ್ಕೆ ಔಟ್ ಆಗಿದ್ದು, ತಂಡಕ್ಕೆ ಭಾರಿ ಹಿನ್ನಡೆಯನ್ನುಂಟು ಮಾಡಿತು.

ಅಂತೆಯೇ ಆಸಿಸ್ ತಂಡ 155 ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ.ಇನ್ನು ಆಸಿಸ್ ತಂಡ ಬ್ಯಾಟಿಂಗ್ ನಲ್ಲಿ ಅನುಭವಿಸಿದ ವೈಫಲ್ಯವನ್ನು ಬೌಲಿಂಗ್ ನಲ್ಲಿ ನೀಗಿಸಿಕೊಂಡಿತು. ಪ್ರಮುಖವಾಗಿ ಮಾರಕ ವೇಗಿ ಒ’ಕ್ಲಿಫ್ 6 ವಿಕೆಟ್ ಪಡೆದು ಟೀಂ ಇಂಡಿಯಾ ಪತನಕ್ಕೆ ಪ್ರಮುಖ ಕಾರಣರಾದರು. ಉಳಿದಂತೆ  ಸ್ಟಾರ್ಕ್ 2 ಮತ್ತು ಹೇಜಲ್ವುಡ್ ಮತ್ತು ಲಿಅನ್ ತಲಾ 1 ವಿಕೆಟ್ ಪಡೆದರು.

ಆಸಿಸ್ ಗೆ ಆರಂಭಿಕ ಆಘಾತ

ಇದೀಗ 2ನೇ ಇನ್ನಿಂಗ್ಸ್ ಆರಂಭಿಸಿರುವ ಸ್ಟೀವ್ ಸ್ಮಿತ್ ಪಡೆ ಕೂಡ ಆರಂಭಿಕ ಆಘಾತ ಅನುಭವಿಸಿದ್ದು, ಕೇವಲ 15 ರನ್ ಗಳಿಗೆ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡಿದೆ

Jadeja goes after O’Keefe but fails to make proper connection and is caught at long-on for two.

O’Keefe completes a deserved five-wicket haul as India slip to 101 for nine.

Superb bowling from the left-arm spinner, who claims five for 33 in his 123th over.
India have fallen into their own trap as the Australian spinners make merry on a turning track with the batsmen struggling to get even bat on ball now.

Umesh and Ishant pick a single each as India look to scramble whatever runs they can manage and reduce the deficit.

Australia’s lead is over 150 runs now and that could prove to be a match-clinching one.

Interestingly, good captaincy from Smith as change of ends worked wonders for O’Keefe, who since the change has claimed five for five in four overs.

And he finishes off the Indian innings with the wicket of Umesh, who comes down and has a big swing but gets an edge and is caught at first slip by Smith for four.

No Comments

Leave A Comment