Log In
BREAKING NEWS >
ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಮಹೋತ್ಸವದ ಶುಭಾರoಭಕ್ಕೆ ಕ್ಷಣಗಣನೆ....ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ;೧೧೮ನೇ ಭಜನಾ ಸಪ್ತಾಹ ಮಹೋತ್ಸವದ 1`ದಿನ ಶ್ರೀದೇವರಿಗೆ ಮತ್ಸ್ಯಲoಕಾರ

ಉಡುಪಿ:ರೆಡ್‌ಕ್ರಾಸ್‌ನಿಂದ ಗಿನ್ನೆಸ್‌ ದಾಖಲೆ

ಉಡುಪಿ: ರೋಟರಿ ಜಿಲ್ಲೆ 3190 ಕಳೆದ ವರ್ಷ ಆಯೋಜಿಸಿದ್ದ ರಕ್ತದಾನ ಶಿಬಿರಗಳಲ್ಲಿ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಆರೋಗ್ಯ ಪಾಲುದಾರನಾಗಿ 15 ವಿವಿಧ ಸ್ಥಳಗಳಲ್ಲಿ ಕೇವಲ ಎಂಟು ಗಂಟೆಯಲ್ಲಿ 3,034 ಯೂನಿಟ್‌ ರಕ್ತವನ್ನು ರಕ್ತದಾನಿಗಳಿಂದ ಸಂಗ್ರಹಿಸಿ ಗಿನ್ನೆಸ್‌ ದಾಖಲೆ ಸ್ಥಾಪಿಸಿದ್ದು, ಈ ಪ್ರಶಸ್ತಿಯನ್ನು ರಾಜ್ಯಪಾಲ, ಸಂಸ್ಥೆ ಅಧ್ಯಕ್ಷ ವಜೂ ಭಾç ರುಡಾ ಭಾç ವಾಲಾ ಅವರಿಂದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಸ್ವೀಕರಿಸಿದರು.

ಉಪಾಧ್ಯಕ್ಷ ಪ್ರೊ| ಎನ್‌.ಆರ್‌. ಶೆಟ್ಟಿ, ಉಪಸಭಾಪತಿ ಅಪ್ಪಾ ರಾವ್‌ ಅಕ್ಕೋಣೆ, ಪ್ರಧಾನ ಕಾರ್ಯದರ್ಶಿ ಎಸ್‌. ಅಶೋಕ್‌ಕುಮಾರ್‌ ಶೆಟ್ಟಿ, ಸದಸ್ಯ ಶಂಕರಪ್ಪ ವೀರಪ್ಪ ಮುಗದ್‌ ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯಪಾಲರು ಯಾವುದೇ ಬದಲಿ ರಕ್ತದ ಬೇಡಿಕೆ ಸಲ್ಲಿಸದೆ ರೋಗಿಗಳಿಗೆ ರಕ್ತ ಪೂರೈಸುತ್ತಿರುವ ಬಗ್ಗೆ ಮೆಚ್ಚುಗೆ ಸೂಚಿಸಿದರು. ಸಂಸ್ಥೆಯ ವಿವಿಧ ಘಟಕಗಳ ಚಟುವಟಿಕೆ ಶ್ಲಾ ಸಿ, ಇನ್ನಷ್ಟು ಜನಪರ ಕಾರ್ಯಕ್ರಮ ಆಯೋಜಿಸಲು ಕರೆ ನೀಡಿದರು.

No Comments

Leave A Comment