Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಮಂಗಳೂರು:ಪಿಣರಾಯಿ ಭೇಟಿಗೂ ಮುನ್ನ ಸಿಪಿಐ(ಎಂ) ಕಚೇರಿಗೆ ಬೆಂಕಿ

 ಮಂಗಳೂರು: ನಗರದ ತೊಕ್ಕೊಟ್ಟು ವಿನಲ್ಲಿರುವ ಸಿಪಿಐ(ಎಂ) ಕಚೇರಿಗೆ ದುಷ್ಕರ್ಮಿಗಳು ಗುರುವಾರ ನಸುಕಿನ ವೇಳೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.ಇದರಿಂದಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಸೌಹಾರ್ದ ಸಮಾವೇಶಕ್ಕಾಗಿ  ಫೆಬ್ರವರಿ 25 ರಂದು ಕಮ್ಯುನಿಷ್ಟ್ ನಾಯಕ ಕೇರಳ ಸಿಎಂ  ಪಿಣರಾಯಿ ವಿಜಯನ್‌ ಆಗಮನ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಬಂದ್‌ಗೆ ಹಿಂದೂ ಪರ ಸಂಘಟನೆಗಳು ಕರೆ ನೀಡಿದ್ದು ಇದಕ್ಕೂ ಮುನ್ನ ಈ ಘಟನೆ ನಡೆದಿದೆ.

ಕಚೇರಿಯ ಬೀಗ ಒಡೆದು ನುಗ್ಗಿ ಕಚೇರಿಯಲ್ಲಿದ್ದ ಫ್ಲೆಕ್ಸ್‌ಗಳಿಗೆ ಬೆಂಕಿ ಹಚ್ಚಲಾಗಿದ್ದು, ಕಚೇರಿಯಲ್ಲಿದ್ದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.

 ಪೊಲೀಸರು ಸ್ಥಳಕ್ಕಾಮಿಸಿ ಪರಿಶೀಲನೆ ನಡೆಸಿದ್ದು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಸಿಪಿಐ(ಎಂ) ನಾಯಕರು ಆಗ್ರಹಿಸಿದ್ದಾರೆ.

ಬೆಳ್ತಂಗಡಿಯಲ್ಲಿ ಪಿಣರಾಯಿ ವಿಜಯನ್‌ ಅವರಿಗೆ ಸ್ವಾಗತ ಕೋರಿ ಹಾಕಲಾಗಿದ್ದ ಬ್ಯಾನರ್‌ಗೆ ಮಸಿ ಎರಚಲಾಗಿದೆ. ಈ ಬಗ್ಗೆ ದೂರು ದಾಖಲಾಗಿದೆ.

No Comments

Leave A Comment