Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಜೈಲಿನಲ್ಲಿ ಮಂಚ, ಟೇಬಲ್ ಫ್ಯಾನ್ ಕೊಡಿ: ಹೊಸ ಬೇಡಿಕೆ ಮುಂದಿಟ್ಟ ಶಶಿಕಲಾ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ತನಗೆ ಜೈಲಿನಲ್ಲಿ ಹೆಚ್ಚಿನ ಸೌಕರ್ಯ ನೀಡಬೇಕೆಂದು ಬೇಡಿಕೆ ಮುಂದಿಟ್ಟಿದ್ದಾರೆ.

ಎನ್‍ಡಿಟಿವಿ ವರದಿ ಪ್ರಕಾರ, ಶಶಿಕಲಾ ತಮ್ಮ ವಯಸ್ಸು ಮತ್ತು  ಅನಾರೋಗ್ಯ ಸಮಸ್ಯೆ ಪರಿಗಣಿಸಿ ಹೆಚ್ಚಿನ ಸೌಕರ್ಯ ನೀಡಬೇಕೆಂದು ಕೇಳಿಕೊಂಡಿದ್ದಾರೆ.

ಜೈಲಿನಲ್ಲಿ ನನಗೆ ಅಟಾಚ್ಡ್ ಬಾತ್‍ರೂಂ, ಮಂಚ, ಟೇಬಲ್ ಫ್ಯಾನ್ ಮತ್ತು ಬೆಡ್ ನೀಡಬೇಕೆಂಬುದು ಶಶಿಕಲಾ ಅವರ ಹೊಸ ಬೇಡಿಕೆ.

ಕೆಲವು ದಿನಗಳ ಹಿಂದೆ ತನಗೆ ಜೈಲಿನಲ್ಲಿ ಅಗತ್ಯ ಬಂದಾಗ ವೈದ್ಯ ಸಹಾಯ ನೀಡಬೇಕು, ವಾರದಲ್ಲಿ ಎರಡು ಬಾರಿ ನಾನ್ ವೆಜ್ ಊಟ ಮತ್ತು ಮಿನರಲ್ ವಾಟರ್ ನೀಡಬೇಕೆಂದು ಶಶಿಕಲಾ ಬೇಡಿಕೆ ಮುಂದಿಟ್ಟಿದ್ದರು. ಆದರೆ ಜೈಲು ಅಧಿಕಾರಿಗಳು ಈ ಬೇಡಿಕೆಯನ್ನು ತಿರಸ್ಕರಿಸಿದ್ದರು.

No Comments

Leave A Comment