Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

‘ಹೆಬ್ಬುಲಿ’ ಘರ್ಜನೆ:ಭರ್ಜರಿ ರೆಸ್ಪಾನ್ಸ್‌,ಫ್ಯಾನ್ಸ್‌ಗೆ ಲಾಠಿ ರುಚಿ !

ಬೆಂಗಳೂರು : ಕಿಚ್ಚ ಸುದೀಪ್‌ ಅಭಿನಯದ ಬಹುನಿರೀಕ್ಷಿತ “ಹೆಬ್ಬುಲಿ’ ಚಿತ್ರ ಅಂದರೆ ಇಂದು ಗುರುವಾರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು  ಸಿನಿ ಪ್ರಿಯರಿಂದ ನಿರೀಕ್ಷೆಯಂತೆ  ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಎಲ್ಲೆಡೆ ಚಿತ್ರಮಂದಿರಗಳ ಎದುರು ಉದ್ದನೆಯ ಸಾಲುಗಳು ಕಂಡು ಬಂದಿವೆ.

ಕನ್ನಡ ಚಿತ್ರರಂಗದ ಇದುವರೆಗಿದ ದೊಡ್ಡ ದಾಖಲೆ ಎಂಬಂತೆ ಹೆಬ್ಬುಲಿ’ ಚಿತ್ರವು ರಾಜ್ಯಾದ್ಯಂತ ಬರೋಬ್ಬರಿ 435 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

ಬೆಂಗಳೂರು ಸೇರಿದಂತೆ ಕೆಲವೆಡೆ ನಸುಕಿನ ವೇಳೆಯ ಚಿತ್ರವನ್ನು ಪ್ರದರ್ಶಿಸಲಾಗಿರುವ ಬಗ್ಗೆ  ಮಾಧ್ಯಮಗಳಲ್ಲಿ  ವರದಿಯಾಗಿದೆ.

ದಾವಣಗೆರೆಯಲ್ಲಿ ಚಿತ್ರಮಂದಿರದ ಎದುರಿದ್ದ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಬಗ್ಗೆ ವರದಿಯಾಗಿದೆ.

ಹೆಚ್ಚಿನ ಕಡೆ ಚಿತ್ರ 10 ಗಂಟೆಗೆ ಆರಂಭವಾಗಿದ್ದು 7 ಗಂಟೆಯಿಂದ ಚಿತ್ರವನ್ನು ನೋಡಲು ಕಾತರರಾಗಿದ್ದ ಸುದೀಪ್‌ ಅಭಿಮಾನಿಗಳು ಚಿತ್ರಮಂದಿರಗಳ ಎದುರು ಸರತಿಯ ಸಾಲುಗಳಲ್ಲಿ ನಿಂತಿರುವ ದೃಶ್ಯ ಕಂಡು ಬಂದಿದೆ.

ಗೌಡನಪಾಳ್ಯ ಶ್ರೀನಿವಾಸ ಎಂಬ ಚಿತ್ರಮಂದಿರದಲ್ಲಿ ಸುದೀಪ್‌ ಅಭಿಮಾನಿಯೊಬ್ಬರು ಬೆಳಿಗ್ಗೆ ಆರು ಗಂಟೆಯ ಪ್ರದರ್ಶನಕ್ಕೆ 650 ಟಿಕೆಟುಗಳನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಇನ್ನು ಬುಕ್‌ಮೈಶೋನಲ್ಲಿ ಗುರುವಾರದ ಹಲವು ಪ್ರದರ್ಶನಗಳು  ಬುಕ್‌ ಆಗಿವೆ.

ಚಿತ್ರ 2 ವಾರಗಳ ಬಳಿಕ ವಿದೇಶದಲ್ಲೂ ತೆರೆ ಕಾಣಲಿದೆ. ಇನ್ನು ಸುದೀಪ್‌ ಅಭಿಮಾನಿಗಳೊಂದಿಷ್ಟು ಜನ ಸೇರಿಕೊಂಡು, ಚಿತ್ರದ ಕುರಿತಾದ ಮೊಬೈಲ್‌ ಗೇಮ್‌ ಶುರು ಮಾಡಿದ್ದಾರೆ. ಈಗಾಗಲೇ ಈ ಗೇಮ್‌ ಬಿಡುಗಡೆಯಾಗಿದೆ.

No Comments

Leave A Comment