Log In
BREAKING NEWS >
ಉಡುಪಿಯ ಕಿನ್ನಿಮುಲ್ಕಿಯಲ್ಲಿ ಜನವರಿ 17ರ೦ದು ಸಾಯ೦ಕಾಲ 7ಗ೦ಟೆಗೆ ಉಡುಪಿಯ ಖ್ಯಾತ ಉದ್ಯಮಿ ಹಾಗೂ ಕಾ೦ಗ್ರೆಸ್ ಮುಖ೦ಡರಾದ ಕೆ.ಕೃಷ್ಣಮೂರ್ತಿ ಆಚಾರ್ಯ ಹಾಗೂ ನಗರ ಸಭಾ ಸದಸ್ಯರಾದ ಶ್ರೀಅಮೃತ ಕೃಷ್ಣಮೂರ್ತಿ ಆಚಾರ್ಯರವರ ಸಾರಥ್ಯದಲ್ಲಿ ನೂತನ ಯಶೋಧ ಆಟೋ ರಿಕ್ಷಾ ಅಸೋಸಿಯೇಷನ್ ಶುಭಾರ೦ಭಗೊಳ್ಳಲಿದೆ.

3 ಲಕ್ಷ ಭಾರತೀಯರಿಗೆ ಅಮೆರಿಕ ಗೇಟ್‌ಪಾಸ್‌?

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಲಸೆ ವಿರೋಧಿ ನೀತಿ ಜಗತ್ತಿನ ನಿದ್ದೆ ಗೆಡಿಸ್ತುತಲೇ ಇದೆ. ಈಗ ಅಲ್ಲಿನ ಭಾರತೀಯರಿಗೂ ಜಾಗರಣೆ ಕಾಲ! ವಲಸೆ ವಿರೋಧಿ ನೀತಿ ಮತ್ತಷ್ಟು ಕಠಿನ ಸ್ವರೂಪ ಪಡೆದಿದ್ದು, ಇದರನ್ವಯ 3 ಲಕ್ಷ ಭಾರತೀಯ ಅಮೆರಿಕನ್ನರು ಗಡೀಪಾರಾಗುವ ಸಾಧ್ಯತೆ ಇದೆ.

ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ನೆಲೆಸಿರುವ 1.10 ಕೋಟಿ ಪ್ರಜೆಗಳ ಮಾಹಿತಿ ಕಲೆಹಾಕಲು ಅಮೆ ರಿಕ ಸರಕಾರ ಮುಂದಾಗಿದ್ದು, ಹೋಮ್‌ಲ್ಯಾಂಡ್‌ ಸೆಕ್ಯೂರಿಟಿ ಮನವಿಗೆ ಟ್ರಂಪ್‌ ಆಡಳಿತ ಈಗಾಗಲೇ ಸಹಿ ಹಾಕಿದೆ. ವಲಸೆ ವಿರೋಧಿ ನೀತಿಗೆ ತಡೆ ಇರುವ ಹಿನ್ನೆಲೆ ಯಲ್ಲಿ ಸಿದ್ಧಪಡಿಸಿದ ಪರಿಷ್ಕೃತ ನೀತಿ ಇದಾಗಿದೆ. ವೀಸಾ ಪುನರ್‌ನವೀಕರಣಗೊಳ್ಳದ, ಸೂಕ್ತ ದಾಖಲೆ ಗಳಿಲ್ಲದೆ ಅಮೆರಿಕದಲ್ಲಿ ನೆಲೆಸಿರುವ ಯಾವುದೇ ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದುಕೊಳ್ಳುವ, ಇಲ್ಲವೇ ಗಡೀಪಾರು ಮಾಡುವ ಸಾಧ್ಯತೆಯಿದೆ.

ಎಲ್ಲರಿಗೂ ಅನ್ವಯ: ಟ್ರಂಪ್‌ ಅವರ ಮೊದಲ ವಲಸೆ ನೀತಿಯಲ್ಲಿ ಕೇವಲ ಮುಸ್ಲಿಂ ರಾಷ್ಟ್ರಗಳಿಗಷ್ಟೇ ನಿಷೇಧ ಹೇರಲಾಗಿತ್ತು. ಧಾರ್ಮಿಕ ಹಿನ್ನೆಲೆಯ ನಿರ್ಬಂಧ ಸರಿ ಯಲ್ಲ ಎಂದು ವಾಷಿಂಗ್ಟನ್‌ ಜಿಲ್ಲಾ ನ್ಯಾಯಾಲಯ ಆಕ್ಷೇಪ ಎತ್ತುತ್ತಿದ್ದಂತೆ, ಟ್ರಂಪ್‌ ಈ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ. ಯಾವ ಧರ್ಮ, ಪಂಥದವರನ್ನೂ ದೃಷ್ಟಿಯಲ್ಲಿಟ್ಟುಕೊಂಡು ಈ ಕಾಯ್ದೆ ಹೊರಡಿಸದೆ, ಎಲ್ಲ ಅಕ್ರಮ ವಾಸಿಗಳಿಗೂ ಚಾಟಿ ಬೀಸಿದ್ದಾರೆ.

ಭಾರತೀಯರಿಗೆ ಸಂಕಷ್ಟ: ಅಮೆರಿಕದಲ್ಲಿ ಉದ್ಯೋಗ ಪಡೆದು ಎಚ್‌1ಬಿ ವೀಸಾ ಹೊಂದಿದ ಭಾರತೀಯರು ಕುಟುಂಬದೊಟ್ಟಿಗೆ ನೆಲೆಸಿದ್ದರೆ, ಕುಟುಂಬಸ್ಥರ ವೀಸಾ ನವೀಕರಣ ಕಾಲ ಕಾಲಕ್ಕೆ ಕಡ್ಡಾಯ. ಆದರೆ ಇದನ್ನು ಉಲ್ಲಂ ಸಿದ್ದಲ್ಲಿ ಅವರನ್ನೂ ಅಕ್ರಮ ವಲಸಿಗರ ಪಟ್ಟಿಗೆ ಸೇರಿಸಲಾಗುತ್ತದೆ. ಹೀಗೆ ಅನಧಿಕೃತವಾಗಿ ಸುಮಾರು 3 ಲಕ್ಷ ಭಾರತೀಯರು ಅಮೆರಿಕದಲ್ಲಿ ನೆಲೆಸಿದ್ದಾರೆ. ವೀಸಾ ಅವಧಿ ಮುಗಿದರೆ ಇಲ್ಲಿಯ ತನಕ ಸಿವಿಲ್‌ ಪ್ರಕರಣವಾಗಿರುತ್ತಿತ್ತು. ಅವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ಬೀಳುತ್ತಿರಲಿಲ್ಲ. ಆದರೆ ಇನ್ನು ಮಂದೆ ಅವರೂ ಕ್ರಿಮಿನಲ್‌ ಪಟ್ಟಿಗೆ ಸೇರಲಿದ್ದಾರೆ.

ಟಾರ್ಗೆಟ್‌ ಕ್ರಿಮಿನಲ್ಸ್‌: ವಲಸೆ ಕಾನೂನನ್ನು ಉಲ್ಲಂ  ಸಿ, ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡವರಿಗೆ ಈ ಕಾನೂನು ಮುಳುವಾಗುವ ಸಾಧ್ಯತೆ ಹೆಚ್ಚು. ಟ್ರಾಫಿಕ್‌ ಅಪರಾಧಗಳಂಥ ಸಣ್ಣಪುಟ್ಟ ಪ್ರಕರಣದಿಂದ ಹಿಡಿದು ಅಂಗಡಿಗಳ್ಳತನ, ದರೋಡೆ ಅಥವಾ  ಇನ್ನಾವುದೇ ಗಂಭೀರ ಅಪರಾಧವನ್ನು ವಿದೇಶಿಗರು ಎಸಗಿದರೆ ಅಂಥವರಿಗೆ ಅಮೆರಿಕದಲ್ಲಿ ಜಾಗವಿಲ್ಲ. ಯಾವುದೇ ಕ್ಷಣದಲ್ಲೂ ಹೋಮ್‌ಲ್ಯಾಂಡ್‌ ಸೆಕ್ಯೂರಿಟಿ ರಾಷ್ಟ್ರೀಯ ಭದ್ರತೆಯ ನೆಪದಲ್ಲಿ ಬಂಧನಕ್ಕೆ ಗುರಿಪಡಿಸಬಹುದು. ಎರಡು ವರ್ಷ ಅಮೆರಿಕದಲ್ಲಿ ನಿರಂತರ ನೆಲೆ ನಿಲ್ಲದ ವಲಸಿಗರಿಗೂ ಟ್ರಂಪ್‌ ಆದೇಶದ ಬಿಸಿ ತಟ್ಟಲಿದೆ.

ಸೆಕ್ಯೂರಿಟಿ ಹೆಚ್ಚಳ: ಈ ಆದೇಶಕ್ಕೆ ಪೂರಕವಾಗಿ ಸರಕಾರ ಕಸ್ಟಮ್ಸ್‌ ಮತ್ತು ಗಡಿ ರಕ್ಷಣಾ ಏಜೆನ್ಸಿಗೆ 5 ಸಾವಿರ ಹೆಚ್ಚುವರಿ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿದೆ. ಅಲ್ಲದೆ ವಲಸೆ ಮತ್ತು ಕಸ್ಟಮ್ಸ್‌ ನೀತಿ ಜಾರಿಯ ಏಜೆನ್ಸಿಗೆ 10 ಸಾವಿರ ಸಿಬಂದಿಯನ್ನು ನೇಮಿಸಲು ಆದೇಶ ಹೊರಡಿಸಿದೆ.

ಎಲ್ಲ ವಲಸಿಗರನ್ನು ಹೊರಗೆ ಹಾಕುವುದು ಕಷ್ಟ
ಇದು ಅಸಾಧ್ಯದ ಕೆಲಸ ಎಂದು ಅಮೆರಿಕದ ಮಾಧ್ಯಮಗಳೇ ಹೇಳಿವೆ. ಅಮೆರಿಕದಲ್ಲಿ ಒಟ್ಟಾರೆ 1.1 ಕೋಟಿ ಅಕ್ರಮ ವಲಸಿಗ ರಿದ್ದು, ಇವರೆಲ್ಲರನ್ನೂ ಒಮ್ಮೆಗೆ ಅಮೆರಿಕದಿಂದ ಹೊರಗೆ ಹಾಕಬೇಕಾದರೆ ಸರಿಸುಮಾರು 400 ಬಿಲಿಯನ್‌ ಡಾಲರ್‌ನಿಂದ 600 ಬಿಲಿಯನ್‌ ಡಾಲರ್‌ ಹಣ ಬೇಕಾಗುತ್ತದೆ. ಇದನ್ನು ಬಿಡಿ ಬಿಡಿಯಾಗಿ ಹೇಳಬೇಕಾದರೆ, ಪ್ರತಿಯೊಬ್ಬ ವ್ಯಕ್ತಿಯನ್ನು ಗಡೀಪಾರು ಮಾಡಬೇಕಾದರೆ 23,480 ಡಾಲರ್‌ ಬೇಕಾಗುತ್ತದೆ. ಅಲ್ಲದೆ 1 ಟ್ರಿಲಿಯನ್‌ ಡಾಲರ್‌ ವಹಿವಾಟು ಇರಿಸಿಕೊಂಡಿರುವ ಅಮೆರಿಕದ ಉದ್ದಿಮೆಗಳ ಮೇಲೂ ಇದು ಕೆಟ್ಟ ಪರಿಣಾಮ ಬೀರಲಿದ್ದು, ಅವು ಶಾಶ್ವತವಾಗಿ ಮುಚ್ಚುವ ಭೀತಿ ಆವರಿಸಲಿದೆ. ವಿಶೇಷವೆಂದರೆ,
ಶೇ. 76ರಷ್ಟು ಅಮೆರಿಕನ್ನರು ಅಕ್ರಮ ವಲಸಿಗರನ್ನು “ತಮ್ಮಂತೆಯೇ’ ಎಂದು ಭಾವಿಸುವುದಲ್ಲದೆ, ಅವರು ಒಳ್ಳೆಯವರು ಎಂದೇ ಹೇಳುತ್ತಾರೆ.

ಅಮೆರಿಕದಲ್ಲಿ ಔಟಾದ್ರೆ ಯುರೋಪಿಗೆ ಬನ್ನಿ !
ಅಮೆರಿಕದ ಪರಿಷ್ಕೃತ ವಲಸೆ ನೀತಿಯಿಂದ ಆತಂಕಕ್ಕೊಳಗಾದ ಭಾರತೀಯ ಪ್ರತಿಭಾವಂತ ಐಟಿ ಉದ್ಯೋಗಿಗಳಿಗೆ ಐರೋಪ್ಯ ಒಕ್ಕೂಟ ಸ್ವಾಗತ ಕೋರಿದೆ.  ಭಾರತೀಯ ಉದ್ಯೋಗಿಗಳು ಅತ್ಯಂತ ಪ್ರತಿಭಾಶಾಲಿಗಳು. ನಮ್ಮ ಐಟಿ ಉದ್ಯಮ ಯಶಸ್ಸು ಕಂಡಿಲ್ಲ. ನಮ್ಮಲ್ಲಿ ಭಾರತೀಯ ಉದ್ಯೋಗಿಗಳೂ ಆ ಪ್ರಮಾಣದಲ್ಲಿ ಇಲ್ಲ. ಒಂದು ವೇಳೆ ಟ್ರಂಪ್‌ ವಲಸೆ ವಿರೋಧಿ ನೀತಿಯಿಂದ ಎಚ್‌-1ಬಿ ಮತ್ತು ಎಲ್‌1 ವೀಸಾ ಹೊಂದಿದವರು ಅಪಾಯಕ್ಕೆ ಸಿಲುಕಿದರೆ ಅಂಥವರಿಗೆ ಸೂಕ್ತ ಸ್ಥಾನಮಾನ ನೀಡುತ್ತೇವೆ ಎಂದು ಹೇಳಿದೆ. ಐಟಿ ಸಹಿತ ಹಲವು ಆರ್ಥಿಕ ಒಪ್ಪಂದ ಮಾಡಿಕೊಳ್ಳಲು ಭಾರತಕ್ಕೆ ಆಗಮಿಸಿರುವ ಯೂರೋಪಿಯನ್‌ ಒಕ್ಕೂಟದ ನಿಯೋಗ ಕೇಂದ್ರ ಸಚಿವರಿಗೆ ಈ ಭರವಸೆ ನೀಡಿದೆ.

ಅಂದಹಾಗೆ ಐರೋಪ್ಯ ಒಕ್ಕೂಟದಲ್ಲಿ ಜರ್ಮನಿ, ಇಟಲಿ, ಪೋಲೆಂಡ್‌, ಫ್ರಾನ್ಸ್‌, ಸಹಿತ 28 ದೇಶಗಳಿವೆ.

No Comments

Leave A Comment