Log In
BREAKING NEWS >
ಕುಮಟಾದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಸೂರಜ್‌ ದೆಹಲಿಯಲ್ಲಿ ಅರೆಸ್ಟ್‌....ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 18ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ನಮ್ಮ ಸೌರವ್ಯೂಹದ ಸಮೀಪದಲ್ಲೇ 7 “ಭೂಮಿ” ಪತ್ತೆ, 3 “ವಾಸಯೋಗ್ಯ”: ನಾಸಾ

ಕೇಪ್ ಕಾರ್ನಿವಲ್: ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನಾಸಾದ ವಿಜ್ಞಾನಿಗಳು ಒಂದೇ ಸೌರವ್ಯೂಹದಲ್ಲಿ ಭೂಮಿಯನ್ನು ಹೋಲುವ 7 ಗ್ರಹಗಳನ್ನು ಪತ್ತೆ ಮಾಡಿದ್ದು, ಈ ಏಳೂ ಗ್ರಹಗಳು ಜೀವಿಗಳು ವಾಸಿಸಲು  ಯೋಗ್ಯವಾಗಿರಬಹುದು ಎಂದು ಶಂಕಿಸಿದ್ದಾರೆ.

ನಾಸಾದ ಮೂಲಗಳ ಪ್ರಕಾರ ನಮ್ಮ ಸೌರವ್ಯೂಹದ ಅತ್ಯಂತ ಸಮೀಪದಲ್ಲೇ ಮತ್ತೊಂದು ಸೌರವ್ಯೂಹ ಪತ್ತೆಯಾಗಿದ್ದು, ಇಲ್ಲಿ ಭೂಮಿಯನ್ನು ಹೋಲುವ ಏಳು ಗ್ರಹಗಳು ಪತ್ತೆಯಾಗಿವೆಯಂತೆ. ಅಲ್ಲದೆ ಈ ಏಳೂ ಗ್ರಹಗಳು  ಜೀವಿಗಳು ವಾಸಿಸಲು ಯೋಗ್ಯವಾಗಿದ್ದು, ಈ ಪೈಕಿ 3 ಗ್ರಹಗಳಲ್ಲಿ ಬೃಹತ್ ನೀರಿನ ಮೂಲವಿದೆ ಎಂದು ವಿಜ್ಞಾನಿಗಳು ಶಂಕಿಸಿದ್ದಾರೆ. ಇನ್ನು ಈ ನೂತನ ಸೌರವ್ಯೂಹ ಭೂಮಿಯಿಂದ ಸುಮಾರು 40 ಜ್ಯೋತಿರ್ ವರ್ಷಗಳಷ್ಟು  ದೂರದಲ್ಲಿದ್ದು, ನಮ್ಮ ಸೌರವ್ಯೂಹದ ಮಾದರಿಯಲ್ಲಿಯೇ ಬೃಹತ್ ನಕ್ಷತ್ರದ ಸುತ್ತ ಈ ಗ್ರಹಗಳು ತಿರುಗುತ್ತಿವೆಯಂತೆ.ಅಲ್ಲದೆ ಈ ಗ್ರಹಗಳ ಪೈಕಿ ಮೂರು ಗ್ರಹಗಳು TRAPPIST-1 ಎಂಬ ಬೃಹತ್ ನಕ್ಷತ್ರದತ್ತ ತನ್ನ ಕಕ್ಷೆಯಲ್ಲಿ ತಿರುಗುತ್ತಿದ್ದು, ಭೂಮಿಯಂತೆಯೇ ತಮ್ಮ ಸುತ್ತ ತಿರುಗುತ್ತಿವೆ.

ಇದೇ ಕಾರಣಕ್ಕೆ ಈ ಗ್ರಹಗಳಲ್ಲೇ ಭಾರಿ ಪ್ರಮಾಣದ  ನೀರಿನ ಮೂಲವಿರುವ ಕುರಿತು ವಿಜ್ಞಾನಿಗಳು ಶಂಕಿಸಿದ್ದಾರೆ. ಇನ್ನು ಭೂಮಿಯನ್ನು ಹೋಲುವ 7 ಗ್ರಹಗಳನ್ನು ಹೊಂದಿರುವ ನಕ್ಷತ್ರಕ್ಕೆ ವಿಜ್ಞಾನಿಗಳು TRAPPIST-1 ಎಂದು ನಾಮಕರಣ ಮಾಡಿದ್ದು, ಈ ವರೆಗಿನ  ಸಂಶೋಧನೆಗಳಲ್ಲೇ ಭೂಮಿಯ ವಾತಾವರಣಕ್ಕೆ ತೀರಾ ಹತ್ತಿರವಾಗಿರುವ ಗ್ರಹ ಮತ್ತು ಸೌರಮಂಡಲ ಎಂದರೆ ಇದೇ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಬಾಹ್ಯಾಕಾಶ ವಿಜ್ಞಾನಿ ಹಾಗೂ ಗಗನಯಾತ್ರಿ ಅಮೌರಿ ಟ್ರೈಯಾಡ್ ಅವರು, “ಈ ವರೆಗೂ ಭೂಮಿಗೆ ಪರ್ಯಾಯವಾಗಿ ಇರುವ ಗ್ರಹದ ಕುರಿತು ನಡೆದ  ಸಂಶೋಧನೆಗಳಲ್ಲೇ TRAPPIST-1 ಸಂಶೋಧನೆ ಅತ್ಯಂತ ಮಹತ್ವದ್ದಾಗಿದೆ. ನಮ್ಮ ಸೌರಮಂಡಲದ ಸಮೀಪದಲ್ಲೇ ಇರುವ ಮತ್ತು 7 ಗ್ರಹಗಳು ಭೂಮಿಯನ್ನು ಹೋಲುವ ಬೃಹತ್ ಜಾಲವನ್ನು ಶೋಧಿಸಲಾಗಿದೆ. 

ಮತ್ತೊಂದು ಪ್ರಮುಖ ವಿಚಾರವೆಂದರೆ ಈ 7 ಗ್ರಹಗಳ ಪೈಕಿ 3 ಗ್ರಹಗಳು ನಿಖರವಾಗಿ ಭೂಮಿಯನ್ನೇ ಹೋಲುತ್ತಿವೆ. ಅಲ್ಲದೆ ಅಲ್ಲಿ ಬೃಹತ್ ನೀರಿನ ಸೆಲೆ ಇರುವ ಕುರಿತು ಆಶಾಭಾವನೆ ವ್ಯಕ್ತವಾಗುತ್ತಿದೆ” ಎಂದು ಅವರು  ಅಭಿಪ್ರಾಯಪಟ್ಟಿದ್ದಾರೆ.ನಾಸಾದ ಈ ಬೃಹತ್ ಸಂಶೋಧನೆ ಇದೀಗ ದಶಕಗಳ ಹಿಂದೆ ಆರಂಭವಾದ ಪರ್ಯಾಯ ಭೂಮಿ ಸಂಶೋಧನೆಗೆ ಮತ್ತೊಂದು ಮಹತ್ತರ ತಿರುವು ನೀಡಿದ್ದು, ಇದೀಗ ವಿಶ್ವದ ಎಲ್ಲ ವಿಜ್ಞಾನಿಗಳು ಈ ನೂತನ ಸೌರವ್ಯೂಹದತ್ತ  ಕುತೂಹಲದಿಂದ ನೋಡುತ್ತಿದ್ದಾರೆ.

No Comments

Leave A Comment