Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಡೋರಾ ಟೀಸರ್‍ ವೈರಲ್ ಅಬ್ಬರಿಸಿ ಬರುತಿದೆ ‘ಡೋರಾ’

ಹಿನ್ನೆಲೆಯಲ್ಲಿ ಖಡಕ್ ಸಂಗೀತ, ಪರದೆಯಲ್ಲಿ ಚಿಮ್ಮುವ ಬೆಂಕಿ ಕಿಡಿ, ನಡುರಾತ್ರಿ ವಾತಾವರಣ, ಅಕ್ಕಪಕ್ಕ ಸುಳಿದಾಡುವ ಗಾಳಿ… ಇದು ನಯನಾ ತಾರಾ ಎಂಟ್ರಿಗೆ ವಿನ್ಯಾಸ ಮಾಡಿರುವ ದೃಶ್ಯ. ಇದು ಯಾವುದೇ ತಾರಾ ವರ್ಚಸ್ಸಿನ ನಾಯಕನ ಎಂಟ್ರಿ ದೃಶ್ಯಕ್ಕೆ ಕಡಿಮೆಯಾಗಿಲ್ಲ.

ಹಸಿರು ಕುರ್ತಾ ತೊಟ್ಟು, ಬಲಗೈ ತೋಳಿನ ಕಾಲರ್ ಮಡಚುತ್ತಾ ಸ್ಲೋಮೋಷನ್‌ನಲ್ಲಿ ಹೆಜ್ಜೆ ಹಾಕುತ್ತಾರೆ ‘ಲೇಡಿ ಸೂಪರ್‌ಸ್ಟಾರ್’ ನಯನಾ ತಾರಾ. ಅಂದ ಹಾಗೆ ಇದು ತಮಿಳಿನ ‘ಡೋರಾ’ ಸಿನಿಮಾದ ಟೀಸರ್.

ಕಳೆದ ವಾರ ಯುಟ್ಯೂಬ್‌ಗೆ ಅಪ್‌ಲೋಡ್ ಆದ ಟೀಸರ್‌ಗೆ 1.71 ಲಕ್ಷ ಹಿಟ್ಸ್‌ ಸಿಕ್ಕಿವೆ.

ನಯನಾ ತಾರಾರನ್ನು ಹುಡುಕುತ್ತಾ, ತನ್ನಷ್ಟಕ್ಕೆ ತಾನು ರಸ್ತೆಯಲ್ಲಿ ಸುತ್ತಾಡುತ್ತಾ, ಅರಚುತ್ತಾ ಕಿರುಚುತ್ತಾ, ಅಬ್ಬರಿಸಿಕೊಂಡು ಓಡಾಡುವ ಕಾರುದೆವ್ವ. ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ಮಾಟಗಾತಿ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸುವಲ್ಲಿ ಯಶಸ್ವಿಯಾಗುತ್ತಾರೆ.

ಇಷ್ಟೆಲ್ಲಾ ವಿವರಿಸಿದ ಮೇಲೆ ಇದು ಹಾರರ್– ಥ್ರಿಲ್ಲರ್ ಸಿನಿಮಾ ಎಂದು ಪ್ರತ್ಯೇಕವಾಗಿ ಹೇಳಬೇಕೆ? ಸಿನಿಮಾ ಏ.11ರಂದು ಬಿಡುಗಡೆಯಾಗಲಿದೆ.

No Comments

Leave A Comment