Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಟ್ಯಾಂಕರ್‌ ಮಿನಿಲಾರಿ ಡಿಕ್ಕಿ ಯಾದಗಿರಿ ಸಮೀಪ ಅಪಘಾತ: 9 ಸಾವು

ಯಾದಗಿರಿ: ಬೂದಿತುಂಬಿದ ಟ್ಯಾಂಕರ್‌ ಮತ್ತು ಮಿನಿ ಲಾರಿ ನಡುವೆ ಸೋಮವಾರ ರಾತ್ರಿ ನಡೆದ ಮುಖಾಮುಖಿ ಡಿಕ್ಕಿಯಿಂದಾಗಿ ಮಗು, ಮಹಿಳೆ ಸೇರಿ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ.

ಮೃತಪಟ್ಟವರೆಲ್ಲರೂ ಸಮೀಪದ ಗಣಪುರದ ಗ್ರಾಮದವರು. ಶಹಾಪುರದಲ್ಲಿ ನಡೆದ ಸಾಬಣ್ಣ ಮೇಸ್ತ್ರಿಯವರ ಪುತ್ರ ಬುಗ್ಗಪ್ಪನ ಮದುವೆ ನಿಶ್ಚಿತಾರ್ಥ ಮುಗಿಸಿಕೊಂಡು 80ಕ್ಕೂ ಹೆಚ್ಚು ಮಂದಿ ಗ್ರಾಮಕ್ಕೆ ವಾಪಸಾಗುತ್ತಿರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಘಟನೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಅವರಲ್ಲಿ ಎಂಟು ಮಕ್ಕಳು, 10ಕ್ಕೂ ಹೆಚ್ಚು  ಮಹಿಳೆಯರ ತಲೆಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್‌ಗೆ ದಾಖಲಿಸಲಾಗಿದೆ.

ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಖುಷ್ಬು ಗೋಯೆಲ್‌ ಚೌಧರಿ ಭೇಟಿ ನೀಡಿದರು. ಸರ್ಕಾರಿ ಆಸ್ಪತ್ರೆಯ ವೈದ್ಯರ ಜತೆಗೆ ಖಾಸಗಿ ಆಸ್ಪತ್ರೆಯ 8 ವೈದ್ಯರು ಚಿಕಿತ್ಸೆಗೆ ನೆರವಾದರು.

No Comments

Leave A Comment