Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಮೋಹಿತ್ ಸಾಲ್ಯಾನ್ “ಮಿ| ಉಡುಪಿ-2017”

ನ್ಯೂ ಹಕ್ರ್ಯುಲೆಸ್ ಜಿಮ್ ಎಂಡ್ ಫಿಟ್ನೆಸ್ ಸೆಂಟರ್(ರಿ.) ಕುಂದಾಪುರ ಮತ್ತು ಅಸೋಸಿಯೇಶನ್ ಆಫ್ ಬಾಡಿ ಬಿಲ್ಡರ್ಸ್ ಉಡುಪಿ ಡಿಸ್ಟ್ರಿಕ್ಟ್(ರಿ.) ಇವರ ಜಂಟಿ ಆಶ್ರಯದಲ್ಲಿ ಫೆ.19ರಂದು ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ‘ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರ’ದಲ್ಲಿ ನಡೆದ ‘ಉಡುಪಿ ಜಿಲ್ಲಾ ಮಟ್ಟದ ಅಧಿಕೃತ ದೇಹದಾಢ್ರ್ಯ ಸ್ಪರ್ಧೆ’ಯಲ್ಲಿ ಇ-ಫಿಟ್ನೆಸ್ ಕ್ಲಬ್ ಉಡುಪಿ ಇದರ ಸದಸ್ಯ ಮೋಹಿತ್ ಸಾಲ್ಯಾನ್ ಉಡುಪಿ ಇವರು ಸವ್ಯಸಾಚಿಯಾಗಿ ಮಿಂಚಿ “ಮಿ| ಉಡುಪಿ-2017” ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅವರು ರೂ.5,000/- ನಗದು ಬಹುಮಾನ, ಪ್ರಶಸ್ತಿ ಫಲಕ, ಪ್ರಮಾಣ ಪತ್ರದೊಂದಿಗೆ ಇತರ ಆಕರ್ಷಕ ಕೊಡುಗೆಗಳನ್ನು ತನ್ನದಾಗಿಸಿಕೊಂಡಿದ್ದಾರೆ.

“ಮಿ| ಉಡುಪಿ-2017”ನ್ನು ರವಿಕಿರಣ್ ಮುರ್ಡೇಶ್ವರ್, ವಕೀಲರು ಕುಂದಾಪುರ ಇವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಕುಂದಾಪುರ ತಾಲೂಕು ಪಂಚಾಯತ್ ಸದಸ್ಯ ಪ್ರದೀಪ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಭಾರತೀಯ ವಾಯು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಂತರಾಷ್ಟ್ರೀಯ ವೈಟ್ ಲಿಫ್ಟರ್ ಗುರುರಾಜ್ ಪೂಜಾರಿ ವಂಡ್ಸೆಯವರನ್ನು ಸನ್ಮಾನಿಸಲಾಯಿತು. ರಾಷ್ಟ್ರೀಯ ದೇಹದಾಢ್ರ್ಯ ಪಟು ಅರೀಫ್ ಎಮ್.ಕೆ. ಕುಂದಾಪುರ ಇವರು ‘ಮಿ| ಉಡುಪಿ-2017’ ಪ್ರಶಸ್ತಿಯನ್ನು ವಿತರಿಸಿದರು. ಅಸೋಸಿಯೇಶನ್ ಆಫ್ ಬಾಡಿ ಬಿಲ್ಡರ್ಸ್ ಉಡುಪಿ ಡಿಸ್ಟ್ರಿಕ್ಟ್(ರಿ.) ಅಧ್ಯಕ್ಷ ಗೋವರ್ಧನ ಎನ್. ಬಂಗೇರ; ಪ್ರಧಾನ ಕಾರ್ಯದರ್ಶಿ ಎ.ಶಿವಕುಮಾರ್ ಅಂಬಲಪಾಡಿ; ಸಂಘಟಕ ನ್ಯೂ ಹಕ್ರ್ಯುಲೆಸ್ ಜಿಮ್ ಎಂಡ್ ಫಿಟ್ನೆಸ್ ಸೆಂಟರ್(ರಿ.) ಕುಂದಾಪುರ ಇದರ ಮಾಲಕ ಸತೀಶ್ ಖಾರ್ವಿ; ರಾಷ್ಟ್ರೀಯ ದೇಹದಾಢ್ರ್ಯ ಪಟು ಸತೀಶ್ ಪೂಜಾರಿ ಹೆಮ್ಮಾಡಿ; ಉದ್ಯಮಿಗಳಾದ ಸದಾನಂದ ಬಳ್ಕೂರ್; ಶ್ರೀಧರ ಗಾಣಿಗ; ಹುಸೇನ್ ಹೈಕಾಡಿ; ಮುಜಾಹಿದ್ ನಾಕುಡ; ಪ್ರತಾಪ್ ಶೆಟ್ಟಿ; ಸುರೇಶ್ ಎ. ದೇವಾಡಿಗ; ಉಮೇಶ್; ಫ್ರಾನ್ಸಿಸ್ ಕೋತ; ಮುಸ್ತಾಫ; ಸಂತೋಷ್ ಪಿ.; ನ್ಯಾಯವಾದಿಗಳಾದ ಜಯಚಂದ್ರ ಶೆಟ್ಟಿ; ಕೆ.ಎಮ್. ಇಲಿಯಾಸ್; ತೀರ್ಪುಗಾರರಾದ ವಾಲ್ಟರ್ ಡಿ’ಕೋಷ್ಟ; ವಿಶ್ವನಾಥ್ ಕಾಮತ್; ಮಿಲಿಂದ್ ಸಾಲ್ಯಾನ್; ರತ್ನಾಕರ ಖಾರ್ವಿ; ಮಾರುತಿ ಜಿ. ಬಂಗೇರ; ಪ್ರದೀಪ್ ಪೂಜಾರಿ; ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ಕಾರ್ಯಾಧ್ಯಕ್ಷ ಚಂದ್ರಹಾಸ್ ಕಾಂಚನ್ ಮಲ್ಪೆ ಉಪಸ್ಥಿತರಿದ್ದರು. ಗುರುರಾಜ್ ಹಂಗ್ಳೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ದೇಹ ತೂಕದ 7 ವಿಭಾಗಗಳ ಸ್ಪರ್ಧಾ ವಿಜೇತರ ವಿವರ: 55 ಕೆ.ಜಿ. ವಿಭಾಗ: ಪ್ರತಾಪ್ ಸಾಲ್ಯಾನ್-ಎಕ್ಸ್ಟ್ರೀಮ್ ಪವರ್ ಜಿಮ್ ಉಡುಪಿ (ಪ್ರಥಮ); ಸುಧೀರ್-ಬಾಡಿ ಝೋನ್ ಜಿಮ್ ಕೋಟ (ದ್ವಿತೀಯ); ಮನೋಹರ್ ದೇವಾಡಿಗ-ಲೇಕ್ ವ್ಯೂ ಜಿಮ್ ಕಾರ್ಕಳ (ತೃತೀಯ); ದೀಪಕ್-ವಜ್ರ ಜಿಮ್ ಕಟಪಾಡಿ (ಚತುರ್ಥ); ಅಶೋಕ್-ವೀರ ಮಾರುತಿ ಜಿಮ್ ಬ್ರಹ್ಮಾವರ (ಪಂಚಮ); 60 ಕೆ.ಜಿ. ವಿಭಾಗ: ಪುರುಶೋತ್ತಮ್ ಕೋಟ್ಯಾನ್-ಎಕ್ಸ್ಟ್ರೀಮ್ ಪವರ್ ಜಿಮ್ ಉಡುಪಿ (ಪ್ರಥಮ); ಲಕ್ಷ್ಮಣ್ ಖಾರ್ವಿ-ಲಕ್ಕಿ ಮಲ್ಟಿ ಜಿಮ್ ಉಪ್ಪುಂದ (ದ್ವಿತೀಯ); ಮುಕೇಶ್-ವೀರ ಮಾರುತಿ ಜಿಮ್ ಬ್ರಹ್ಮಾವರ (ತೃತೀಯ); ರಿತೇಶ್ ಪೂಜಾರಿ-ವಜ್ರ ಜಿಮ್ ಕಟಪಾಡಿ (ಚತುರ್ಥ), ಸಾತ್ವಿಕ್-ವೀರ ಮಾರುತಿ ಜಿಮ್ ಬ್ರಹ್ಮಾವರ (ಪಂಚಮ); 65 ಕೆ.ಜಿ. ವಿಭಾಗ: ಸಂದೇಶ್-ಬಾಡಿ ಝೋನ್ ಜಿಮ್ ಕೋಟ (ಪ್ರಥಮ); ಗೌರವ್-ಸ್ಟೋನ್ ಜಿಮ್ ಕಟಪಾಡಿ (ದ್ವಿತೀಯ); ಸೋಮಶೇಖರ್-ವೀರ ಮಾರುತಿ ಜಿಮ್ ಹೆಮ್ಮಾಡಿ (ತೃತೀಯ); ಆನಂದ್ ಗಂಗೊಳ್ಳಿ-ವೀರಾಂಜನೇಯ ಜಿಮ್ ಗಂಗೊಳ್ಳಿ (ಚತುರ್ಥ); ರಿಯಾಝ್-ಪವರ್ ಹೌಸ್ ಜಿಮ್ ಉಡುಪಿ (ಪಂಚಮ); 70 ಕೆ.ಜಿ. ವಿಭಾಗ: ಮೋಹಿತ್ ಸಾಲ್ಯಾನ್-ಇಫಿಟ್ನೆಸ್ ಕ್ಲಬ್ ಉಡುಪಿ (ಪ್ರಥಮ); ಚರಣ್-ಹಾರ್ಡ್‍ಕೋರ್ ಜಿಮ್ ಮಲ್ಪೆ (ದ್ವಿತೀಯ); ವಿನೋದ್-ಬಾಡಿ ಝೋನ್ ಜಿಮ್ ಕೋಟ (ತೃತೀಯ); ಪವನ್ ಸುವರ್ಣ-ಐರ್ನ್ ಹೌಸ್ ಜಿಮ್ ಸಂತೆಕಟ್ಟೆ (ಚತುರ್ಥ); ಅಕ್ಷಯ್-ಐರ್ನ್ ಹೌಸ್ ಜಿಮ್ ಸಂತೆಕಟ್ಟೆ (ಪಂಚಮ); 75 ಕೆ.ಜಿ. ವಿಭಾಗ: ಹರ್ಷಿತ್-ಯುನಿವರ್ಸಲ್ ಜಿಮ್ ಕುಂಜಿಬೆಟ್ಟು (ಪ್ರಥಮ); ಗುರು ಪ್ರಸಾದ್-ವಜ್ರಾಂಕ ಜಿಮ್ ಅಂಬಾಗಿಲು (ದ್ವಿತೀಯ); ರಾಮ್ ಕುಮಾರ್ ಕೆ.ಎಮ್.-ರೋಯಲ್ ಜಿಮ್ ಸಂತೆಕಟ್ಟೆ (ತೃತೀಯ); ಜಾಕ್ಸನ್ ಡಿ’ಸೋಜ-ವೀರ ಮಾರುತಿ ಜಿಮ್ ಬ್ರಹ್ಮಾವರ (ಚತುರ್ಥ); ಸಾಹಿಲ್-ಫ್ರೆಂಡ್ಸ್ ಜಿಮ್ ತೆಕ್ಕಟ್ಟೆ (ಪಂಚಮ); 80 ಕೆ.ಜಿ. ವಿಭಾಗ: ಹೋಸ್ಟನ್-ಸ್ಪಾರ್ಟನ್ ಫಿಟ್ನೆಸ್ ಜಿಮ್ ಉಡುಪಿ (ಪ್ರಥಮ); ನಿರಂಜನ್ ಹೊಳ್ಳ-ಬಾಡಿ ಝೋನ್ ಜಿಮ್ ಕೋಟ (ದ್ವಿತೀಯ); ಆದಿತ್ಯ-ಜೈ ಹನುಮಾನ್ ಜಿಮ್ ಕಾರ್ಕಳ (ತೃತೀಯ); ಪ್ರಶಾಂತ್ ಎಸ್.-ಜಿಮ್ ಎಂಡ್ ಸ್ಲಿಮ್ ಉಡುಪಿ (ಚತುರ್ಥ); 80+ ಕೆ.ಜಿ. ವಿಭಾಗ: ಗಣೇಶ್ ದೇವಾಡಿಗ-ವೀರಾಂಜನೇಯ ಜಿಮ್ ಬಾರ್ಕೂರು (ಪ್ರಥಮ); ರಕ್ಷಿತ್-ವೈಟ್ ಝೋನ್ ಜಿಮ್ ಕುಂದಾಪುರ (ದ್ವಿತೀಯ); ರಾಮ್ ಕೃಷ್ಣ-ರೋಯಲ್ ಜಿಮ್ ಸಂತೆಕಟ್ಟೆ (ತೃತೀಯ).

No Comments

Leave A Comment