Log In
BREAKING NEWS >
ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿ ಶಿರೂರು ಶ್ರೀನಾಮಪತ್ರ ಸಲ್ಲಿಕೆ.....ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

ಐಪಿಎಲ್ ಹರಾಜು: ಬರೊಬ್ಬರಿ 14.5 ಕೋಟಿಗೆ ಬೆನ್ ಸ್ಟೋಕ್ಸ್ ಪುಣೆ ಪಾಲು

ಬೆಂಗಳೂರು: ಬಹು ನಿರೀಕ್ಷಿತ ಐಪಿಎಲ್ 10ನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆಗೆ ಸೋಮವಾರ ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದ್ದು, ವಿದೇಶಿ ಆಟಗಾರರೂ ಸೇರಿದಂತೆ ಒಟ್ಟು 351 ಆಟಗಾರರನ್ನು ಹರಾಜಿಗೆ  ಇಡಲಾಗಿದೆ.

ಹರಾಜಿನಲ್ಲಿ ಒಟ್ಟು ಎಂಟು ತಂಡಗಳ ಫ್ರಾಂಚೈಸಿಗಳು ಪಾಲ್ಗೊಂಡಿದ್ದು, ಸುಮಾರು 351 ಮಂದಿ ಆಟಗಾರರ ಪೈಕಿ 76 ಆಟಗಾರರನ್ನು ಮಾತ್ರ ಕೊಳ್ಳಬಹುದಾಗಿದೆ. ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಭಾರತದ ಇರ್ಫಾನ್ ಪಠಾಣ್,  ಇಶಾಂತ್ ಶರ್ಮಾ ಫ್ರಾಂಚೈಸಿಗಳ ಕೇಂದ್ರ ಬಿಂದುವಾಗಿದ್ದು, ಫಾರ್ಮ್ ನಲ್ಲಿರುವ ಈ ಆಟಗಾರರ ಮೇಲೆ ಭಾರಿ ಪ್ರಮಾಣದ ಹಣ ಸುರಿಯಲು ಫ್ರಾಂಚೈಸಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಬರೊಬ್ಬರಿ 14.5 ರು. ಪುಣೆ ತಂಡಕ್ಕೆ ಬಿಕರಿಯಾದ ಬೆನ್ ಸ್ಟೋಕ್ಸ್

ಇನ್ನು ಇದೇ ವೇಳೆ ಇಂಗ್ಲೆಂಡ್ ತಂಡದ ಆಟಗಾರ ಬೆನ್ ಸೋಟ್ಕ್ಸ್ ಬರೊಬ್ಬರಿ 14.5 ರುಗೆ ಪುಣೆ ತಂಡದ ಪಾಲಾಗಿದ್ದು, ಐಪಿಎಲ್ 10 ಆವೃತ್ತಿಯಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಹರಾಜಾದ ಮೊದಲ ಆಟಗಾರ ಎಂಬ ಕೀರ್ತಿಗೆ  ಭಜನರಾಗಿದ್ದಾರೆ.

ಅಂತೆಯೇ ಕೋರಿ ಅಂಡರ್ಸನ್ 1 ಕೋಟಿ ರುಗೆ ದೆಹಲಿ ಪಾಲಾದರೆ, ಇಯಾನ್ ಮಾರ್ಗನ್ ಕಿಂಗ್ಸ್ ಇಲೆವನ್ ತಂಡಕ್ಕೆ 2 ಕೋಟಿಗೆ ಮಾರಾಟವಾಗಿದ್ದಾರೆ. ಪವನ್ ನೇಗಿ 1 ಕೋಟಿ ರು.ಗೆ ಆರ್ ಸಿಬಿ ಪಾಲಾದರೆ,  ಲಂಕಾದ ಆಟಗಾರ ಏಂಜಲೋ ಮ್ಯಾಥ್ಯೂಸ್ 2 ಕೋಟಿ ರು. ದೆಹಲಿ ತಂಡದ ಪಾಲಾಗಿದ್ದಾರೆ.

No Comments

Leave A Comment