Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಬೆಂಗಳೂರಿನಲ್ಲಿಂದು IPL ಬಿಡ್ಡಿಂಗ್: ಹರಾಜಿನಲ್ಲಿದ್ದಾರೆ 352 ಆಟಗಾರರು

ಬೆಂಗಳೂರು(ಫೆ.20): ಕ್ರಿಕೆಟ್ ಪ್ರಿಯರ ಮನಗೆದ್ದ  ಹೊಡಿಬಡಿ ಐಪಿಎಲ್ ಸೀಸನ್ 10 ಬಂದೇ ಬಿಟ್ಟಿದೆ. ಈ ಬಾರಿ ಯಾರೆಲ್ಲ ಇರುತ್ತಾರೆ, ಯಾವೆಲ್ಲ ಆಟಗಾರರು ಒಂದು ಟೀಮ್​’ನಿಂದ ಇನ್ನೊಂದು ತಂಡಕ್ಕೆ ಹೋಗುತ್ತಾರೆ ಎಂಬ ಕುತೂಹಲಕ್ಕೆ ಇವತ್ತು ತೇರೆ ಬೀಳಲಿದೆ. ಐಪಿಎಲ್ ಸೀಸನ್ 10 ಬಿಡ್ಡಿಂಗ್ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ.

ಬೆಂಗಳೂರಿನಲ್ಲಿಂದು IPL ಬಿಡ್ಡಿಂಗ್​​​​: ಹರಾಜಿನಲ್ಲಿದ್ದಾರೆ 352 ಆಟಗಾರರು

IPL 10ನೇ ಆವೃತ್ತಿಯ ಹಾರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ರಿಟ್ಜ್​​ ಕಾರ್ಲ್​ಟನ್​​ ಹೋಟೆಲ್’​​ನಲ್ಲಿ IPL ಬಿಡ್ಡಿಂಗ್ ನಡೆಯಲಿದೆ. ಈ ಬಾರಿ ದೇಶ-ವಿದೇಶಗಳ ಒಟ್ಟು 352 ಆಟಗಾರರು  ಹರಾಜು ಪ್ರಕ್ರಿಯೆಯಲ್ಲಿದ್ದು. 8 ತಂಡದ ಫ್ರಾಂಚೈಸಿಗಳು ಆಟಗಾರರನ್ನು ಖರೀದಿ ತಮ್ಮ ತಂಡ ಬಲಪಡಿಸಿಕೊಳ್ಳಲು ಪ್ಲಾನ್ ಮಾಡಿದ್ದಾರೆ.

ಯಾರು ಹೆಚ್ಚು ಬೆಲೆಗೆ ಬಿಕರಿಯಾಗಲಿದ್ದಾರೆ?

ಈ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಇದ್ದೇ ಇದೆ. ಭಾರತ ವಿರುದ್ಧದ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ  ಇಂಗ್ಲೆಂಡ್​​ ಆಲ್​ರೌಂಡರ್​​ ಬೆನ್​ ಸ್ಟೋಕ್ಸ್​ ಈಗಾಗಲೇ ಎಲ್ಲಾ ಪ್ರಾಂಚೈಸಿಗಳ ಕಣ್ಣಿಗೆ ಬಿದ್ದಿದ್ದಾರೆ. ಹೀಗಾಗಿ ಸ್ಟೋಕ್ಸ್ ಅತಿ ಹೆಚ್ಚು ಬೆಲೆಗೆ ಬಿಕರಿಯಾಗುವ ಸಾಧ್ಯತೆ ಇದೆ. ಟೀಂ ಇಂಡಿಯಾದ ಇಶಾಂತ್​​ ಶರ್ಮಾ, ಇರ್ಫಾನ್​​​ ಪಠಾಣ್​​​, ಚೇತೇಶ್ವರ ಪೂಜಾರ ಕೂಡ ಇಂದಿನ ಹಾಟ್​​​ ಲಿಸ್ಟ್​ನಲ್ಲಿದ್ದಾರೆ.

ಹರಾಜಿನಲ್ಲಿದ್ದಾರೆ 10 ಕನ್ನಡಿಗರು

ಪ್ರಥಮ ದರ್ಜೆ ಕ್ರಿಕೆಟ್​​​ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಕರ್ನಾಟಕದ ಶಿಶಿರ್ ಭವಾನೆ, ಆರ್‌.ಸಮರ್ಥ್‌, ಸಿ.ಎಂ. ಗೌತಮ್‌ ಸೇರಿದಂತೆ 10 ಕನ್ನಡಿಗ ಆಟಗಾರರಿಗೂ ಬಿಡ್​​’ನಲ್ಲಿ  ಅವಕಾಶ ಸಿಕ್ಕಿದೆ.

ಪುಣೆ ತಂಡದ ನಾಯಕತ್ವದಿಂದ ಧೋನಿಗೆ ಗೇಟ್​ ಪಾಸ್​​

ಆಟಗಾರರ ಖರೀದಿಗೆ ಫ್ರಾಂಚೈಸಿಗಳಿಗೆ ತಂಡದ ನಾಯಕರೂ ಸಹ ಬಂದು ಟಿಪ್ಸ್​​ ನೀಡುವ. ಶಾಕಿಂಗ್ ವಿಚಾರ ಎಂದ್ರೆ ಐಪಿಎಲ್’​​​​ನ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ಧೋನಿಗೆ ನಾಯಕತ್ವದಿಂದ ಗೇಟ್​ಪಾಸ್ ನೀಡಲಾಗಿದೆ. ಅವರ ಬದಲಿಗೆ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ರನ್ನು ನೇಮಿಸಲಾಗಿದೆ.

ಧೋನಿ ಅಭಿಮಾನಿಗಳಿಗೆ ಇದು ಶಾಕಿಂಗ್ ವಿಚಾರವಾದರೂ, ಕ್ರಿಕೆಟ್ ಅಭಿಮಾನಿಗಳು ಮಾತ್ರ ಇವತ್ತಿನ  ಬಿಡ್ಡಿಂಗ್ ಪ್ರಕ್ರಿಯೆ ಎದುರು ನೋಡುತ್ತಿದ್ದಾರೆ. ಯಾರು ಹೆಚ್ಚು ಬೆಲೆಗೆ ಬಿಕರಿಯಾಗುತ್ತಾರೆ, ಯಾವತಂಡಕ್ಕೆ ಯಾಱರು ಸೇರುತ್ತಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ

No Comments

Leave A Comment