Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಪಾಕಿಸ್ತಾನದ ಆಲ್‍ರೌಂಡರ್ ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್‍ಗೂ ವಿದಾಯ ಹೇಳಿದ ಶಾಹೀದ್ ಅಫ್ರೀದಿ

ಶಾರ್ಜಾ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ, ಆಲ್ ರೌಂಡರ್ ಶಾಹೀದ್ ಅಫ್ರೀದಿ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಪಂದ್ಯಗಳಿಂದ ನಿವೃತ್ತಿ ಘೋಷಿಸಿದ್ದ ಅಫ್ರೀದಿ ಇದೀಗ ಅಂತರರಾಷ್ಟ್ರೀಯ ಟ್ವೆಂಟಿ -20 ಕ್ರಿಕೆಟ್‍ಗೆ ವಿದಾಯ ಹೇಳುವ ಮೂಲಕ 21 ವರ್ಷಗಳ ಕ್ರಿಕೆಟ್ ವೃತ್ತಿ ಜೀವನದಿಂದ ನಿವೃತ್ತರಾಗಿದ್ದಾರೆ.

2010ರಲ್ಲಿ ಟೆಸ್ಟ್ ಕ್ರಿಕೆಟ್‍ಗೆ ಗುಡ್ ಬೈ ಹೇಳಿದ್ದ 36ರ ಹರೆಯ ಅಫ್ರೀದಿ 2015ರ ವಿಶ್ವಕಪ್‍ ನಂತರ ಏಕದಿನ ಕ್ರಿಕೆಟ್‍ನಿಂದ ನಿವೃತ್ತಿ ಪಡೆದಿದ್ದರು. ನಂತರ ಪಾಕ್ ಟ್ವೆಂಟಿ- 20 ತಂಡದಲ್ಲಿ ಮಾತ್ರ ಸದಸ್ಯರಾಗಿದ್ದರು. 2016ರಲ್ಲಿ ಭಾರತದಲ್ಲಿ ನಡೆದ ಟ್ವೆಂಟಿ -20 ವಿಶ್ವಕಪ್‍ನಲ್ಲಿ ಅಫ್ರೀದಿ ಪಾಕ್ ತಂಡದ ನಾಯಕತ್ವ ವಹಿಸಿದ್ದರು.

ಶಾರ್ಜಾದಲ್ಲಿ ನಡೆದ ಪಾಕಿಸ್ತಾನ್ ಸೂಪರ್ ಲೀಗ್ ಪಂದ್ಯದಲ್ಲಿ ಪೇಶಾವರ್ ಜಲ್ಮಿ ತಂಡದಲ್ಲಿ ಆಡಿದ್ದ ಅಫ್ರೀದಿ 28 ಎಸೆತಗಳಲ್ಲಿ 54ರನ್ ಗಳಿಸಿದ್ದು, ಈ ಪಂದ್ಯದ ನಂತರ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ನಿರ್ಧಾರ ಪ್ರಕಟಿಸಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿ ಮಾತನಾಡಿದ ಅಫ್ರೀದಿ ತನ್ನ ಅಭಿಮಾನಿಗಳಿಗಾಗಿ ಪಾಕಿಸ್ತಾನ್ ಕ್ರಿಕೆಟ್ ಲೀಗ್‍ನಲ್ಲಿ ಇನ್ನೂ ಎರಡು ವರ್ಷ ಮುಂದುವರಿಯುತ್ತೇನೆ ಎಂದು ಹೇಳಿದ್ದಾರೆ.

ಹೊಡೆಬಡಿ ದಾಂಡಿಗನಾಗಿರುವ ಅಫ್ರೀದಿ ‘ಬೂಂ ಬೂಂ’ ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ.

1996ರಲ್ಲಿ ಶ್ರೀಲಂಕಾ ವಿರುದ್ದ 36 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಅಫ್ರೀದಿ ಕ್ರಿಕೆಟ್ ಲೋಕದಲ್ಲಿ ಗಮನ ಸೆಳೆದಿದ್ದರು.

ಅಫ್ರೀದಿ ಕ್ರಿಕೆಟ್ ಜೀವನದ ಸ್ಕೋರ್ ಕಾರ್ಡ್

ಅಂತರಾಷ್ಟ್ರೀಯ ಕ್ರಿಕೆಟ್ –  27 ಪಂದ್ಯ
ಗಳಿಸಿದ ರನ್-  1,176 ರನ್‍ಗಳು
ಗರಿಷ್ಠ ರನ್ 156
ವಿಕೆಟ್-  48
ಅಂತರರಾಷ್ಟ್ರೀಯ ಏಕದಿನ ಪಂದ್ಯಗಳು – 398
ರನ್ -8,064
ಗರಿಷ್ಠ ರನ್ – 124
ವಿಕೆಟ್ – 395

ಟ್ವೆಂಟಿ -20  ಪಂದ್ಯಗಳು -98
ರನ್  -1,405
ವಿಕೆಟ್  -97

No Comments

Leave A Comment