Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಲಂಡನ್ ಗೆ ತೆರಳುತ್ತಿದ್ದ ಭಾರತೀಯ ವಿಮಾನದ ಸಂಪರ್ಕ ಕಡಿತ; ಶಂಕೆ ಮೇರೆಗೆ ವಿಮಾನ ಹಿಂಬಾಲಿಸಿದ ಜರ್ಮನ್ ವಾಯು ಸೇನೆ!

ಲಂಡನ್: ಭಾರತೀಯ ಪ್ರಯಾಣಿಕ ವಿಮಾನವೊಂದು ಆಕಾಶ ಮಾರ್ಗದಲ್ಲೇ ವಾಯುಗೋಪುರದ ಸಂಪರ್ಕ ಕಡಿದುಕೊಂಡ ಪರಿಣಾಮ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.ಭಾರತದ ಮುಂಬೈನಿಂದ ಲಂಡನ್ ಗೆ ಪ್ರಯಾಣಿಸುತ್ತಿದ್ದ ಜೆಟ್ ಏರ್ ವೇಸ್ ಸಂಸ್ಥೆಯ ವಿಮಾನ ಜರ್ಮನಿ ಮೇಲೆ ಪ್ರಯಾಣಿಸುತ್ತಿದ್ದಾಗ ದಿಢೀರ್ ಸಂಪರ್ಕ ಕಳೆದುಕೊಂಡಿತ್ತು.

ಜೆಟ್ ಏರ್ ವೇಸ್ ಸಂಸ್ಥೆಗೆ ಸೇರಿದೆ ಬೋಯಿಂಗ್ 777 ಸರಣಿ ವಿಮಾನ ಸಂಖ್ಯೆ 9W 118 ವಿಮಾನ ಕಳೆದ  ಗುರುವಾರ ಮುಂಬೈನಿಂದ ಲಂಡನ್ ತೆರಳಿತ್ತು. ವಿಮಾನದಲ್ಲಿ ಸುಮಾರು 330 ಮಂದಿ ಪ್ರಯಾಣಿಕರು ಹಾಗೂ 15 ಸಿಬ್ಬಂದಿಗಳು ಇದ್ದರು ಎಂದು ತಿಳಿದು ಬಂದಿದೆ.ವಿಮಾನದಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಸಂಪರ್ಕ ಸಾಧ್ಯವಾಗಿರಲಿಲ್ಲ. ಜರ್ಮನಿ ಬಳಿ ಕೊನೆಯದಾಗಿ ಸಂಪರ್ಕ ಸಾಧ್ಯವಾಗಿತ್ತು. ಹೀಗಾಗಿ ಜರ್ಮನಿ ಅಧಿಕಾರಿಗಳು ಜೆಟ್ ಏರ್ ವೇಸ್ ವಿಮಾನವನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಜೆಟ್ ಯುದ್ಧ ವಿಮಾನಗಳ ಮೂಲಕ ಅಧಿಕಾರಿಗಳು ಭಾರತದ  ವಾಯುಗೋಪುರವನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರಾದರೂ, ಅದು ಸಾಧ್ಯವಾಗಿಲ್ಲ.

ಹೀಗಾಗಿ ತುರ್ತು ಕ್ರಮ ಕೈಗೊಂಡ ಜರ್ಮನಿ ಅಧಿಕಾರಿಗಳು ವಿಮಾನವನ್ನು ಶಂಕಿಸಿ ತನ್ನ 2 ಯುದ್ಧ ವಿಮಾನಗಳ ಮೂಲಕ ವಿಮಾನವನ್ನು ಹಿಂಬಾಲಿಸಿದ್ದಾರೆ. ಜೆಟ್ ಏರ್ ವೇಸ್ ನ ಹಿಂದೆ ಯುದ್ಧ  ವಿಮಾನಗಳು ಸಾಗುತ್ತಿರುವ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಬಳಿಕ ತಾಂತ್ರಿಕ ಸಮಸ್ಯೆ ಸರಿಪಡಿಸಲಾಯಿತು. ಬಳಿಕ ವಿಮಾನಕ್ಕೆ ಯಾವುದೇ ರೀತಿ ತೊಂದರೆ ಇಲ್ಲ ಎಂದು ತಿಳಿದಾಗ ಜರ್ಮನಿ ವಾಯುಸೇನೆಯ ಯುದ್ಧ ವಿಮಾನಗಳು  ವಾಪಸ್ ತೆರಳಿವೆ ಎಂದು ತಿಳಿದುಬಂದಿದೆ.

ಪೈಲಟ್ ಕಣ್ತಪ್ಪಿನಿಂದ ಗೊಂದಲ?

ಮತ್ತೊಂದು ಮೂಲದ ಪ್ರಕಾರ ವಿಮಾನದ ಪೈಲಟ್ ಕಣ್ತಪ್ಪಿನಿಂದಾಗಿ ತಪ್ಪು ಫ್ರೀಕ್ವೆನ್ಸಿ ಆಯ್ಕೆ ಮಾಡಿದ್ದರಿಂದ ವಾಯುಗೋಪುರ ಸಂಪರ್ಕ ಸಾಧ್ಯವಾಗಲಿಲ್ಲ. ಹೀಗಾಗಿ ಇದು ಭಯೋತ್ಪಾದಕರ ಯೋಜನೆಯೋ ಅಲ್ಲವೋ ಎಂದು ತಿಳಿಯಲು ಜರ್ಮನ್ ವಾಯು ಪಡೆ ತನ್ನ 2 ಜೆಟ್ ಯುದ್ಧ ವಿಮಾನಗಳನ್ನು ರವಾನಿಸಿತ್ತು. ಇದರಿಂದ ಆತಂಕಗೊಂಡ ಪೈಲಟ್ ಗಳು ಜರ್ಮನ್ ವಾಯುಗೋಪುರ ಸಂಪರ್ಕಿಸಿ ವಿಚಾರ ತಿಳಿಸಿದ್ದಾರೆ. ಬಳಿಕ ಅಪಾಯ ಇಲ್ಲ ಎಂದು ತಿಳಿದಾಗ ಮತ್ತೆ ಜೆಟ್ ಯುದ್ಧ ವಿಮಾನಗಳು ವಾಪಸಾಯಿತು ಎಂದು ಹೇಳಲಾಗುತ್ತಿದೆ.

No Comments

Leave A Comment