Log In
BREAKING NEWS >
ಉಡುಪಿಯ ಕಿನ್ನಿಮುಲ್ಕಿಯಲ್ಲಿ ಜನವರಿ 17ರ೦ದು ಸಾಯ೦ಕಾಲ 7ಗ೦ಟೆಗೆ ಉಡುಪಿಯ ಖ್ಯಾತ ಉದ್ಯಮಿ ಹಾಗೂ ಕಾ೦ಗ್ರೆಸ್ ಮುಖ೦ಡರಾದ ಕೆ.ಕೃಷ್ಣಮೂರ್ತಿ ಆಚಾರ್ಯ ಹಾಗೂ ನಗರ ಸಭಾ ಸದಸ್ಯರಾದ ಶ್ರೀಅಮೃತ ಕೃಷ್ಣಮೂರ್ತಿ ಆಚಾರ್ಯರವರ ಸಾರಥ್ಯದಲ್ಲಿ ನೂತನ ಯಶೋಧ ಆಟೋ ರಿಕ್ಷಾ ಅಸೋಸಿಯೇಷನ್ ಶುಭಾರ೦ಭಗೊಳ್ಳಲಿದೆ.

ನಾಯಕತ್ವ ಸ್ಥಾನದಿಂದ ಧೋನಿ ಕೈ ಬಿಟ್ಟ ಪುಣೆ!

ನವದೆಹಲಿ: ಐಪಿಎಲ್-2017ಗೆ ದಿನಗಣನೆ ಆರಂಭವಾಗಿರುವಂತೆಯೇ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಪುಣೆ ತಂಡ ಶಾಕ್ ನೀಡಿದ್ದು, ತಂಡದ ನಾಯಕತ್ವದಿಂದ ಅವರನ್ನು ಕೈಬಿಟ್ಟಿದೆ.

2016ನೇ ಸಾಲಿನ ಐಪಿಎಲ್ ನಲ್ಲಿ ಪುಣೆ ತಂಡ ತೋರಿದ ಕಳಪೆ ಪ್ರದರ್ಶನದಿಂದಾಗಿ ತಂಡದ ಮಾಲೀಕರು ನಾಯಕ ಧೋನಿ ವಿರುದ್ಧ ಕೆಂಗಣ್ಣು ಬೀರಿದ್ದು, ಅವರನ್ನು ನಾಯಕತ್ವದಿಂದ ಕೈಬಿಟ್ಟಿದ್ದಾರೆ. ಅಲ್ಲದೆ ಅವರ ಸ್ಥಾನಕ್ಕೆ ಆಸಿಸ್  ತಂಡದ ನಾಯಕ ಸ್ಟೀವ್ ಸ್ಮಿತ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ.

2017ನೇ ಸಾಲಿನ ಐಪಿಎಲ್ ಹರಾಜು ಪ್ರಕ್ರಿಯೆಗೆ ಕೇವಲ ಎರಡೇ ದಿನ ಬಾಕಿ ಇದ್ದು ಈ ಹಂತದಲ್ಲಿ ಪುಣೆ ಮಾಲೀಕರ ನಡೆ ತೀವ್ರ ಕುತೂಹಲ ಕೆರಳಿಸಿದೆ. ಇನ್ನು ಈ ಬಗ್ಗೆ ಪುಣೆ ತಂಡದ ಮೂಲಗಳು ತಿಳಿಸಿರುವಂತೆ ನಾಯಕತ್ವ  ಬದಲಾವಣೆ ಕುರಿತಂತೆ ಮಾಲೀಕರು ಧೋನಿ ಅವರೊಂದಿಗೂ ಚರ್ಚೆ ನಡೆಸಿದ್ದು, ಇದಕ್ಕೆ ಧೋನಿ ಕೂಡ ಸಹಮತ ವ್ಯಕ್ತಪಡಿಸಿದ್ದಾರಂತೆ. ಅಲ್ಲದೆ ಓರ್ವ ಆಟಗಾರನಾಗಿ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ ಎಂದು  ತಿಳಿದುಬಂದಿದೆ.

ಕಳೆದ ಐಪಿಎಲ್ ಸರಣಿಯಲ್ಲಿ ಧೋನಿ ನಾಯಕತ್ವದ ಪುಣೆ ತಂಡ ಒಟ್ಟು 14 ಪಂದ್ಯಗಳನ್ನು ಆಡಿದ್ದು, ಈ ಪೈಕಿ 5 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಸರಣಿಯಲ್ಲಿ ಒಟ್ಟು 12 ಇನ್ನಿಂಗ್ಸ್ ಗಳನ್ನು ಆಡಿದ್ದ ಧೋನಿ 284 ರನ್  ಗಳಿಸಿದ್ದರು. ಇದರಲ್ಲಿ ಒಂದು ಅರ್ಧಶತಕ ಕೂಡ ಸೇರಿದೆ.ಈ ಹಿಂದೆ ಚೆನ್ನೈ ತಂಡದ ನಾಯಕರಾಗಿದ್ದ ಧೋನಿ 9 ಸರಣಿಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.

No Comments

Leave A Comment