Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಬಂಡೀಪುರ: ಕಾಡ್ಗಿಚ್ಚು ನಂದಿಸಲು ಹೋದ ಗಾರ್ಡ್ ಬಲಿ


ಚಾಮರಾಜನಗರ (ಎಚ್.ಡಿ.ಕೋಟೆ): ತಾಲ್ಲೂಕಿನ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಮೊಳೆಯೂರು ಅರಣ್ಯದಲ್ಲಿ ಶನಿವಾರ ಮಧ್ಯಾಹ್ನ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ವೇಳೆ ವನಪಾಲಕರೊಬ್ಬರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. 

ವನಪಾಲಕ ಮುರುಗಪ್ಪ ತಮ್ಮಂಗಲು (32) ಮೃತಪಟ್ಟವರು. ಗಾಯಗೊಂಡಿರುವ ವಲಯ ಅರಣ್ಯಾಧಿಕಾರಿ ಗಂಗಾಧರ್, ಸಿಬ್ಬಂದಿ ಮಂಜು, ಮನು ಅವರನ್ನು ಸರಗೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುರುಗಪ್ಪ ಅವರು ವಿಜಯಪುರ ಜಿಲ್ಲೆಯ ಸಿಂದಗಿ ಊರಿನವರು.
 
 ದಟ್ಟ ಹೊಗೆ ಮತ್ತು ಬೆಂಕಿಯ ರಭಸಕ್ಕೆ ಸಿಲುಕಿದ ಮರುಗಪ್ಪ ಅವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.
No Comments

Leave A Comment