Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಶಿವಾಜಿ ಇಲ್ಲದ ಭಾರತದ ಇತಿಹಾಸ ಅಪೂರ್ಣ-ಅಪರ ಜಿಲ್ಲಾಧಿಕಾರಿ ಜಿ.ಅನುರಾಧ

ಉಡುಪಿ: ಛತ್ರಪತಿ ಶಿವಾಜಿ ಮಹಾರಾಜರ ಕುರಿತು ತಿಳಿಸಿದ ಭಾರತ ದೇಶದ ಇತಿಹಾಸ ಅಪೂರ್ಣವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ತಿಳಿಸಿದ್ದಾರೆ.

ಅವರು ಭಾನುವಾರ , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಿಟ್ಟೂರಿನ ಸರಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮರಾಠ ಸಂಸ್ಥಾನದ ಸ್ಥಾಪಕನಾಗಿ, ತನ್ನ ತಾರುಣ್ಯದಲ್ಲಿಯೇ ಸಮರ ಕಲೆಗಳಲ್ಲಿ ನಿಪುಣ, ಧೀಮಂತ ಯೋಧನಾಗಿದ್ದ , ಅಪ್ಪಟ ಸ್ವಾಭಿಮಾನಿ ಹಾಗೂ ದೇಶಪ್ರೇಮಿಯಾಗಿದ್ದ ಶಿವಾಜಿ ಮಹಾರಾಜ, ಉತ್ತಮ ಆಡಳಿತಗಾರನಾಗಿದ್ದು ಆತನ ಆಡಳಿತ ಕ್ರಮಗಳೂ ಇಂದಿಗೂ ಮಾದರಿಯಾಗಿವೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.

ಶಿವಾಜಿ ಮಹಾರಾಜರ ಕುರಿತು ವಿಶೇಷ ಉಪನ್ಯಾಸ ನೀಡಿದ, ಆದರ್ಶ ಗೋಖಲೆ ಉಪನ್ಯಾಸಕರು ಕಾರ್ಕಳ ಇವರು ಮಾತನಾಡಿ, ಶಿವಾಜಿ ಮಹಾರಾಜರು ಜಗತ್ತಿನ ಯುವ ಜನತೆಗೆ ಮಾದರಿಯಾಗಿದ್ದಾರೆ, ಶಿವಾಜಿ ಅವರ ಗೆರಿಲ್ಲಾ ಯುದ್ದತಂತ್ರದಿಂದಲೇ ವಿಯೆಟ್ನಾಂ ಅಮೇರಿಕಾ ವಿರುದ್ದ ಯುದ್ದದಲ್ಲಿ ಸ್ವಾತಂತ್ರ್ಯ ಪಡೆದಿದೆ, ಯುದ್ದತಂತ್ರ ನಿಪುಣನಾಗಿದ್ದ ಶಿವಾಜಿಯವರ ಆಡಳಿತ ಚಿಂತನೆಗಳ ದಾರಿಯಲ್ಲಿ ಇಂದಿನ ಆಡಳಿತ ವ್ಯವಸ್ಥೆ ಸಾಗಬೇಕಿದೆ, ಸಾಮಾನ್ಯ ಯುವಕರ ಬೆಂಬಲದಿಂದ ಸ್ವಾಭಿಮಾನಿ ರಾಜ್ಯ ನಿಮಾರ್ಣ ಮಾಡಿದ ಶಿವಾಜಿ ಸಾಧನೆ ಸಾಮಾನ್ಯವಾದುದಲ್ಲ, ಭಾರತದ ಸ್ವಾತ್ರಂತ್ರ್ಯ ಹೋರಾಟದಲ್ಲಿ ಹಲವು ಕ್ರಾಂತಿಕಾರಿಗಳಿಗೆ ಶಿವಾಜಿ ಸಾಧನೆಗಳೇ ಆದರ್ಶಗಳಾಗಿದ್ದವು, ಯುವ ಜನತೆಗೆ ಹಾಗೂ ಜನಪ್ರತಿನಿಧಿಗಳಿಗೂ ಸಹ ಶಿವಾಜಿ ಯಾವಾಗಲೂ ಆದರ್ಶರಾಗಿದ್ದಾರೆ, ಭಾರತೀಯರ ಮನೆ ಮನಗಳಲ್ಲಿ ಶಿವಾಜಿ ಎಲ್ಲರಿಗೂ ಸದಾ ಪ್ರೇರಣೆಯಾಗಲಿ ಎಂದು ತಿಳಿಸಿದರು.

ಉಡುಪಿ ತಹಸೀಲ್ದಾರ್ ಮಹೇಶ್ಚಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್, ಬಾಲ ಮಂದಿರದ ಅಧೀಕ್ಷಕಿ ಹುಲಿಗೆವ್ವ ಜೋಗೆರ್, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಅನಿಲ್, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಉಡುಪಿ ಅಧ್ಯಕ್ಷ ಕೇಶವರಾವ್, ಮರಾಠ ಸ್ವಾಭಿಮಾನಿ ಜಾಗೃತಿ ಪ್ರತಿಷ್ಠಾನ ಉಡುಪಿ ಅಧ್ಯಕ್ಷ ದಿನೇಶ್ ನ್ಯಾಕ್ ಮೋರೆ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ತಾಂತ್ರಿಕ ಸಹಾಯಕಿ ಪೂರ್ಣಿಮ ಸ್ವಾಗತಿಸಿದರು, ಗಣೇಶ್ ಕುಮಾರ್ ಗಂಗೊಳ್ಳಿ ನಿರೂಪಿಸಿದರು.

ಶಿವಾಜಿ ಮಹಾರಾಜರ ಕುರಿತು ಯಕ್ಷಗಾನ ಕಾರ್ಯಕ್ರಮ ನಡೆಯಿತು.

No Comments

Leave A Comment