Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಭಾರೀ ಗದ್ದಲ ನಡುವೆ ಬಹುಮತವನ್ನು ಗೆದ್ದು ತಮಿಳುನಾಡಿನ ಮುಖ್ಯಮ೦ತ್ರಿ ಸ್ಥಾನವನ್ನು ಉಳಿಸಿಕೊ೦ಡ ಪಳನಿಸ್ವಾಮಿ/Sasikala loyalist, Palaniswami wins trust vote

ಚೆನ್ನೈ: ತೀವ್ರ ಕುತೂಹಲ ಕೆರಳಿಸಿದ್ದ ತಮಿಳುನಾಡು ರಾಜಕೀಯ ಬಿಕ್ಕಟ್ಟು ಕೊನೆಗೂ ಅಂತ್ಯ ಕಂಡಿದ್ದು, ನಿರೀಕ್ಷೆಯಂತೆಯೇ ಸಿಎಂ ಪಳನಿ ಸ್ವಾಮಿ ವಿಶ್ವಾಸ ಮತ ಗೆದ್ದಿದ್ದಾರೆ ಎಂದು ತಿಳಿದುಬಂದಿದೆ.ಬೆಳಗ್ಗೆ 11 ಗಂಟೆಗೆ ತಮಿಳುನಾಡು ವಿಧಾನಸಭೆಯಲ್ಲಿ ವಿಶೇಷ ಕಲಾಪ ಆರಂಭವಾಯಿತು. ಬಳಿಕ ರಾಜ್ಯಪಾಲರ ಸೂಚನೆ ಮೇರೆಗೆ ಪಳನಿ ಸ್ವಾಮಿ ಅವರು ವಿಶ್ವಾಸ ಮತ ನಿರ್ಣಯ ಮಂಡನೆ ಮಾಡಿದರು.

ಕೋಲಾಹಲದ ನಡುವೆಯೇ ಧ್ವನಿ ಮತದ ಮೂಲಕ ವಿಶ್ವಾಸ ಮತ ನಿರ್ಣಯ ಸಂಬಂಧ ಧ್ವನಿಮತದ ಮೂಲಕ ಮತ ಯಾಚನೆ ಮಾಡಲಾಯಿತು. ಈ ವೇಳೆ ಪಳನಿ ಸ್ವಾಮಿ 122 ಮತಗಳು ಲಭಿಸಿದರೆ, ಅವರ ವಿರುದ್ಧ ಕೇವಲ 11 ಮತಗಳು ಮಾತ್ರ ಬಿದ್ದಿವೆ ಎಂದು ತಿಳಿದುಬಂದಿದೆ.

ಪ್ರತಿಪಕ್ಷಗಳಿಲ್ಲದೇ ಕಲಾಪ, ಧ್ವನಿ ಮತಕ್ಕೆ ಸೂಚನೆ ನೀಡಿದ ಸ್ಪೀಕರ್ ಧನಪಾಲ್ಭಾರಿ ಕೋಲಾಹಲಕ್ಕೆ ಕಾರಣವಾಗಿರುವ ಪಳನಿ ಸ್ವಾಮಿ ವಿಶ್ವಾಸ ಮತ ಯಾಚನೆಗೆ ಅಡ್ಡಿ ಪಡಿಸಿದ್ದ ಡಿಎಂಕೆ ಪಕ್ಷದ ಶಾಸರಕನ್ನು ಸದನದಿಂದ ಸ್ಪೀಕರ್ ಧನಪಾಲ್ ಅವರು ಉಚ್ಛಾಟನೆ ಮಾಡಿದ್ದು, ಡಿಎಂಕೆ ಶಾಸಕರಿಲ್ಲದೇ ವಿಶ್ವಾಸ ಮತ ನಿರ್ಣಯದ ಮತದಾನಕ್ಕೆ ಸೂಚನೆ ನೀಡಿದ್ದಾರೆ.ಮಾರ್ಷಲ್ ಗಳ ಮೂಲಕ ಸದನದಲ್ಲಿದ್ದ ಡಿಎಂಕೆ ಶಾಸಕರನ್ನು ಬಲವಂತವಾಗಿ ಸ್ಪೀಕರ್ ಧನಪಾಲ್ ಅವರು ಹೊರಗೆ ಹಾಕಿಸಿದ್ದು, ಈ ವೇಳೆ ಭಾರಿ ಕೋಲಾಹಲವೇ ಉಂಟಾಗಿತ್ತು.

ಮಾರ್ಷಲ್ ಗಳು ಮತ್ತು ಶಾಸಕರ ನಡುವೆ ತಳ್ಳಾಟ ಸಂಭವಿಸಿ ಬಹುತೇಕ ಶಾಸಕ ಶರ್ಟ್ ಮತ್ತು ಪಂಚೆಗಳು ಹರಿದು ಹೋದ ಘಟನೆ ಕೂಡ ಸಾಮಾನ್ಯವಾಗಿತ್ತು. ಸ್ವತಃ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಹರಿದ ಶರ್ಟ್ ನಲ್ಲಿಯೇ ಮಾಧ್ಯಮಗಳನ್ನು ಕರೆದು ಪ್ರತಿಕ್ರಿಯೆ ನೀಡಿದ್ದು ವಸದನದಲ್ಲಿನ ಕೋಲಾಹಲಕ್ಕೆ ಹಿಡಿದ ಕನ್ನಡಿಯಾಗಿತ್ತು.ಈ ವೇಳೆ ಮಾತನಾಡಿದ ಸ್ಟಾಲಿನ್ ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧವಾಗಿ ಸದನದಲ್ಲಿ ನಡೆದುಕೊಳ್ಳಲಾಗುತ್ತಿದೆ. ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.

After massive drama, Edappadi  Palaniswami, a loyalist of V K Sasikala, has won the floor test in the assembly to remain the Tamil Nadu chief minister. 

122 MLAs in the assembly voted in favour of Palaniswami. 11 MLAS of Panneerselvam faction voted against the CM.
No Comments

Leave A Comment