Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಹಫೀಜ್ ಸಯೀದ್ ವಿರುದ್ಧ ಉಗ್ರ ವಿರೋಧಿ ಕಾಯ್ದೆ ಜಾರಿ

ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರ ಕೊನೆಗೂ ಉಗ್ರ ಹಫೀಜ್ ಸಯೀದ್ ವಿರುದ್ಧ ಉಗ್ರ ವಿರೋಧಿ ಕಾಯ್ದೆ ಜಾರಿಗೊಳಿಸಿ, ಆತನ ಚಲನ-ವಲನಗಳ ಮೇಲೆ ನಿರ್ಬಂಧ ವಿಧಿಸಿದೆ.

ಈ ಬಗ್ಗೆ ಪಾಕ್ ಪತ್ರಿಕೆ ಡಾನ್ ವರದಿ ಮಾಡಿದ್ದು, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಮುಂಬೈ ಉಗ್ರ ದಾಳಿಯ ರೂವಾರಿ ಹಫೀಜ್ ಸಯೀದ್ ವಿರುದ್ಧ ಎಟಿಎ ಕಾಯ್ದೆ ಜಾರಿಗೊಳಿಸಿದೆ ಎಂದು ಹೇಳಿದೆ.

ಎಟಿಎ ಕಾಯ್ದೆ ದಾಖಲಾಗಿರುವುದರಿಂದ ಹಫೀಜ್ ಸಯೀದ್ ನ ಚಲನ-ವಲನಗಳ ಬಗ್ಗೆ ನಿಗಾ ವಹಿಸಲಾಗುತ್ತದೆ. ಅಷ್ಟೇ ಅಲ್ಲದೇ ಆತ ಪ್ರತಿದಿನವೂ ಪೊಲೀಸ್ ಠಾಣೆಗೆ ತೆರಳಿ ಸಹಿ ಹಾಕಬೇಕಾಗುತ್ತದೆ ಎಂದು ಡಾನ್ ವರದಿ ಮಾಡಿದೆ. ಫೆಡರಲ್ ಆಂತರಿಕ ಸಚಿವಾಲಯ ಭಯೋತ್ಪಾದನಾ ನಿಗ್ರಹ ಇಲಾಖೆ(ಸಿಟಿಡಿ) ಗೆ ಸಯೀದ್ ಹೆಸರನ್ನು ಉಗ್ರ ವಿರೋಧಿ ಕಾಯ್ದೆಯ ನಾಲ್ಕನೇ ಸೆಕ್ಷನ್ ಗೆ ಸೇರ್ಪಡೆ ಮಾಡಬೇಕೆಂದು ಸೂಚನೆ ನೀಡಿದ್ದರ ಹಿನ್ನೆಲೆಯಲ್ಲಿ ಹಫೀಜ್ ಸಯೀದ್ ಹೆಸರನ್ನು ವಿರೋಧಿ ಕಾಯ್ದೆಯಡಿ ಜಾರಿಗೊಳಿಸಲಾಗಿದೆ.

No Comments

Leave A Comment