Log In
BREAKING NEWS >
ಶರತ್ ಮಡಿವಾಳ ಹತ್ಯೆ: ಆರೋಪಿ ಮಹಮದ್ ಷರೀಫ್ ಗೆ ಹೈಕೋರ್ಟ್ ಜಾಮೀನು....

ನಟಿ ಭಾವನಾ ಅಪಹರಿಸಿ ಲೈಂಗಿಕ ಕಿರುಕುಳ, ಓರ್ವನ ಬಂಧನ

ಎರ್ನಾಕುಲಂ(ಕೇರಳ): ಕನ್ನಡದ ಜಾಕಿ, ರೋಮಿಯೋ ಚಿತ್ರಗಳಲ್ಲಿ ಅಭಿನಯಿಸಿದ್ದ ಮಲಯಾಳಂ ನಟಿ ಭಾವನಾ ಅವರನ್ನು ಕಳೆದ ರಾತ್ರಿ ಕೆಲ ದುಷ್ಕರ್ಮಿಗಳು ಅಪಹರಣ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಅಂಗಮಾಲಿಯ ಅಥಣಿ ಬಳಿ ಭಾವನಾ ಅವರ ಮಾಜಿ ಕಾರು ಚಾಲಕ ಗುಂಪಿನೊಂದಿಗೆ ಬಲವಂತವಾಗಿ ಭಾವನಾ ಕಾರು ನಿಲ್ಲಿಸಿ ಹತ್ತಿಕೊಂಡಿದ್ದಾರೆ. ನಂತರ ಪಲರಿವಟ್ಟಂವರೆಗೂ ಭಾವನಾ ಅವರಿಗೆ ಕಾರಿನಲ್ಲೇ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಭಾವನ ಪೊಲೀಸರಿಗೆ ದೂರು ನೀಡಿದ್ದಾರೆ.

ಪಲರಿವಟ್ಟಂಗೆ ಬಂದ ತಕ್ಷಣ ಅವರು ಕಾರು ನಿಲ್ಲಿಸಿ ಮತ್ತೊಂದು ಕಾರು ಹತ್ತಿ ಪರಾರಿಯಾಗಿದ್ದಾರೆ. ಅವರು ತನ್ನ ವಿಡಿಯೋ ಮತ್ತು ಫೋಟೋಗಳನ್ನು ತೆಗೆದುಕೊಂಡಿದ್ದಾರೆ ಎಂದು ನಟಿ ದೂರಿದ್ದಾರೆ.

ಘಟನೆ ಬಳಿಕ ಭಾವನಾ ಕಾಕನಾಡದ ನಿರ್ದೇಶಕರ ಮನೆಗೆ ತೆರಳಿ ಆಶ್ರಯ ಪಡೆದು ನಂತರ ಪೊಲೀಸರಿಗೆ ದೂರು ನೀಡಿದರು.ಈ ಸಂಬಂಧ ಭಾವನಾ ಕಾರು ಚಾಲಕ ಮಾರ್ಟಿನ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

No Comments

Leave A Comment