Log In
BREAKING NEWS >
ಶಿರಾ ಲಾರಿ -ಬಸ್ಸು ಭೀಕರ ರಸ್ತೆ ಅಪಘಾತ 7 ಮಂದಿ ದುರ್ಮರಣ......ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಇಂಧನ ದರ-ಪೆಟ್ರೋಲ್‌, ಡೀಸೆಲ್‌ ದರ ಗರಿಷ್ಠ ಮಟ್ಟಕ್ಕೆ

ನಟ ಅರುಣ್ ಸಾಗರ್ ಗೋದಾಮಿಗೆ ಬೆಂಕಿ: ಲಕ್ಷಾಂತರ ಮೌಲ್ಯದ ಕಲಾಕೃತಿಗಳು ಬೆಂಕಿಗಾಹುತಿ

ಬೆಂಗಳೂರು: ಸ್ಯಾಂಡಲ್’ವುಡ್ ನಟ ಹಾಗೂ ಕಲಾ ನಿರ್ದೇಶಕ ಅರುಣ್ ಸಾಗರ್ ಅವರ ಆರ್ಟ್ ಗ್ಯಾಲರಿ ಮತ್ತು ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ಮೌಲ್ಯದ ಕಲಾಕೃತಿಗಳು ಬೆಂಕಿಗಾಹುತಿಯಾಗಿರುವುದಾಗಿ ತಿಳಿದುಬಂದಿದೆ.

ಫೆಬ್ರವರಿ 15 ರಂದು ಅಗ್ನಿ ಅವಘಡ ಸಂಭವಿಸಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಗ್ನಿ ಅವಘಡದಲ್ಲಿ ಚಲನಚಿತ್ರ ಹಾಗೂ ಧಾರವಾಹಿಗಳಿಗೆ ಬಳಸಲಾಗುತ್ತಿದ್ದ ಸಾವಿರಾರು ಅಪೂರ್ವ ಕಲಾಕೃತಿಗಳು ಸುಟ್ಟು ಭಸ್ಮವಾಗಿದ್ದು, ರೂ.75 ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.ಉತ್ತರಹಳ್ಳಿಯಲ್ಲಿ 1.5 ಎಕರೆ ಜಾಗದಲ್ಲಿ ಅರುಣ್ ಸಾಗರ್ ಅವರ ಗೋದಾಮು ಇದ್ದು, 3 ಗೋದಾಮಿನಲ್ಲಿ ಕಲಾಕೃತಿಗಳು ಹಾಗೂ ಇನ್ನಿತರೆ ವಸ್ತುಗಳನ್ನು ಸಂಗ್ರಹಿಸಡಲಾಗಿತ್ತು.

ಬುಧವಾರ ಸಂಜೆ ವೇಳೆಗೆ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದರಾದರೂ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ನಂತರ ಅಗ್ನಿ ಶಾಮಕದಳ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸುವಷ್ಟರಲ್ಲಿ ಬೆಂಕಿ ಕೆನ್ನಾಲಿಗೆ ಮೂರು ಗೋದಾಮುಗಳಿಗೆ ಹೊತ್ತಿಕೊಂಡಿದೆ.

ಬೆಂಕಿ ನಂದಿಸಲು ಸಾಕಷ್ಟು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಾಕಷ್ಟು ಹರಸಾಹಸ ಪಟ್ಟಿದ್ದಾರೆ.15 ವರ್ಷಗಳಿಂದ ಪಟ್ಟ ಪರಿಶ್ರಮಗಳು ಗೋದಾಮಿನಲ್ಲಿರಿಸಲಾಗಿತ್ತು. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಲು ಸಾಧ್ಯವಿಲ್ಲ.

ಸ್ಥಳದಲ್ಲಿ ವಿದ್ಯುತ್ ಸಂಬಂಧಿಸಿದ ವೈರ್ ಗಳಾಗಲೀ ಇನ್ನಾವುದೇ ವಸ್ತುಗಳಿರಲಿಲ್ಲ. ಪಕ್ಕದಲ್ಲಿ ಖಾಲಿ ಜಾಗವಿದ್ದು, ಅಲ್ಲಿಂದ ಬೆಂಕಿ ಬಂದಿರಬಹುದು. ಯಾವ ಕಾರಣಕ್ಕೆ ಬೆಂಕಿ ತಗುಲಿದೆ ಎಂಬುದು ಗೊತ್ತಾಗುತ್ತಿಲ್ಲ. ನನಗೆ ಯಾರ ಮೇಲೆಯೂ ಅನುಮಾನಗಳಿಲ್ಲ. ಈಗಾಗಲೇ ಪೊಲೀಸರು ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆಂದು ಅರುಣ್ ಸಾಗರ್ ಅವರು ಖಾಸಗಿ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದಾರೆ.

No Comments

Leave A Comment