Log In
BREAKING NEWS >
ಶಿರೂರು ಶ್ರೀಗಳು ಮಠಾಧೀಶರೇ ಅಲ್ಲ, ಸನ್ಯಾಸತ್ವ ತ್ಯಜಿಸಿದ್ದರು: ಪೇಜಾವರ ಶ್ರೀ.....ಮಧ್ವ ಸಂಪ್ರದಾಯದಂತೆ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜೀ ಅಂತ್ಯಕ್ರಿಯೆ!

ಫೆ.28ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ

ಬೆಂಗಳೂರು(ಫೆ.16): ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ದೇಶಾದ್ಯಂತ ಫೆ. 28ರಂದು ಬ್ಯಾಂಕ್‌ ಮುಷ್ಕರ ಕೈಗೊಳ್ಳಲು ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆ ಕರೆ ನೀಡಿದೆ.

ಸರಕಾರವು ಸುಧಾರಣೆಗಳ ಹೆಸರಿನಲ್ಲಿ ಕಾರ್ಮಿಕ ಕಾಯಿದೆಗೆ ಅನೇಕ ತಿದ್ದುಪಡಿಗಳನ್ನು ತರಲು ಉದ್ದೇಶಿಸಿರುವುದು ಕಾರ್ಮಿಕರಿಗೆ ಮಾರಕವಾಗಲಿದೆ. ಕೇಂದ್ರ ಸರಕಾರಿ ನೌಕರರಿಗೆ ಕೊಟ್ಟ 20 ಲಕ್ಷ ರೂ. ಗ್ರ್ಯಾಚ್ಯುಟಿಯನ್ನು ಗ್ರ್ಯಾಚ್ಯುಟಿ ಕಾಯಿದೆಗೆ ತಿದ್ದುಪಡಿ ತಂದು 2016 ಜ. 1ರ ಪೂರ್ವಾನ್ವಯವಾಗುವಂತೆ ಕಾರ್ಮಿಕರಿಗೆ 20 ಲಕ್ಷ ರೂ. ಸಿಗುವಂತೆ ಮಾಡಬೇಕು.  ನೋಟು ಅಪಮೌಲ್ಯದಿಂದ ತುರ್ತು ಕೆಲಸಗಳು ಬಾಕಿ ಉಳಿದಿವೆ. ಸಾಲ ನೀಡುವ ಪ್ರಕ್ರಿಯೆಯು ನಡೆಯುತ್ತಿಲ್ಲ. ಬ್ಯಾಂಕ್‌ನ ಸಾಮಾನ್ಯ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಮಹಾ ಒಕ್ಕೂಟದ ಅಧ್ಯಕ್ಷ ಎಲ್ಲೂರು ಸುದರ್ಶನ ತಿಳಿಸಿದ್ದಾರೆ.

ಸರಕಾರವು ಸುಧಾರಣೆಗಳ ಹೆಸರಿನಲ್ಲಿ ಕಾರ್ಮಿಕ ಕಾಯಿದೆಗೆ ಅನೇಕ ತಿದ್ದುಪಡಿಗಳನ್ನು ತರಲು ಉದ್ದೇಶಿಸಿರುವುದು ಕಾರ್ಮಿಕರಿಗೆ ಮಾರಕವಾಗಲಿದೆ. ಕೇಂದ್ರ ಸರಕಾರಿ ನೌಕರರಿಗೆ ಕೊಟ್ಟ 20 ಲಕ್ಷ ರೂ. ಗ್ರ್ಯಾಚ್ಯುಟಿಯನ್ನು ಗ್ರ್ಯಾಚ್ಯುಟಿ ಕಾಯಿದೆಗೆ ತಿದ್ದುಪಡಿ ತಂದು 2016 ಜ. 1ರ ಪೂರ್ವಾನ್ವಯವಾಗುವಂತೆ ಕಾರ್ಮಿಕರಿಗೆ 20 ಲಕ್ಷ ರೂ. ಸಿಗುವಂತೆ ಮಾಡಬೇಕು. ನೋಟು ಅಪಮೌಲ್ಯದಿಂದ ತುರ್ತು ಕೆಲಸಗಳು ಬಾಕಿ ಉಳಿದಿವೆ. ಸಾಲ ನೀಡುವ ಪ್ರಕ್ರಿಯೆಯು ನಡೆಯುತ್ತಿಲ್ಲ. ಬ್ಯಾಂಕಿನ ಸಾಮಾನ್ಯ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ತಿಳಿಸಿದ್ದಾರೆ.

ಕಾರ್ಪೊರೇಶನ್‌ ಬ್ಯಾಂಕ್‌ ಅಧಿಕಾರಿಗಳ ಸಂಘದ ಅಧ್ಯಕ್ಷ ಏಕನಾಥ ಬಾಳಿಗ ಮಾತನಾಡಿ, ಸಿಬ್ಬಂದಿ ಒತ್ತಡ ಕಡಿಮೆಯಾಗಬೇಕಾದರೆ ತುರ್ತಾಗಿ ಬ್ಯಾಂಕ್‌  ಸಿಬ್ಬಂದಿ ಹಾಗೂ ಅಧಿಕಾರಿಗಳ ನೇಮಕವಾಗಬೇಕು. ಈಗಾಗಲೇ ಒಡಂಬಡಿಕೆಯಾಗಿರುವ ಅನೇಕ ಒಪ್ಪಂದಗಳನ್ನು ಭಾರತೀಯ ಬ್ಯಾಂಕ್‌ ಸಂಘವು ವಿಳಂಬ ಮಾಡುತ್ತಿದ್ದು, ದೇಶದಲ್ಲಿ ಸುಮಾರು 7.5 ಲಕ್ಷ ಪಿಂಚಣಿದಾರರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗೆ ಹಲವು ಸಮಸ್ಯೆಗಳನ್ನು ಬ್ಯಾಂಕ್‌ ಸಿಬ್ಬಂದಿ ಅನುಭವಿಸುತ್ತಿದ್ದು, ಫೆ. 28ರೊಳಗೆ ಬೇಡಿಕೆ ಈಡೇರದಿದ್ದಲ್ಲಿ ಮುಷ್ಕರ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

No Comments

Leave A Comment