Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಮಾರ್ಚ್ 11 ಕ್ಕೆ ಪಡುಕೆರೆ ಸೇತುವೆ ಉದ್ಘಾಟನೆ- ಸಚಿವ ಪ್ರಮೋದ್

ಉಡುಪಿ: ಪಡುಕರೆ ಪ್ರದೇಶದ ಜನರ ಬಹು ಕಾಲಕ ಬಹ ನಿರೀಕ್ಷಿತ ಪಡುಕೆರೆ ಸೇತುವೆಯನ್ನು ಮಾರ್ಚ್ 11 ರಂದು ಉದ್ಘಾಟಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಅವರು ಬುಧವಾರ ಪಡುಕೆರೆ ಸೇತುವೆಯ ಕಾಮಗಾರಿ ಪರಿಶೀಲಿಸಿ ಮಾತನಾಡಿದರು, ಒಟ್ಟು 16.5 ಕೋಟಿ ವೆಚ್ಚದ ಸೇತುವೆಯ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದು, ಕ್ಯೂರಿಂಗ್ ನಡೆಯಬೇಕಿರುವುದರಿಂದ ಸೇತುವೆಯನ್ನು ಮಾಚ್ 11 ರಂದು ಉದ್ಘಾಟಿಲಾಗುವುದು, ಈಗಾಗಲೇ ಕಾಮಗಾರಿಯ ಮೊತ್ತದ 13.5 ಕೋಟಿ ಮೊತ್ತವನ್ನು ಗುತ್ತಿಗೆದಾರರಿಗೆ ಸಂಪೂರ್ಣವಾಗಿ ಪಾವತಿಸಿದ್ದು, ಕಾಮಗಾರಿಗೆ ಹಣದ ಕೊರತೆ ಇಲ್ಲ, ಅಲ್ಲದೇ ಸೇತುವೆಗೆ ಸಂಪರ್ಕ ರಸ್ತೆ ನಿರ್ಮಾಣ ಮಾಡಲು 50 ಲಕ್ಷ ವೆಚ್ಚದಲ್ಲಿ ಪಡುಕರೆಯಲ್ಲಿ ಮತ್ತು 50 ಲಕ್ಷದಲ್ಲಿ ಅಯ್ಯಪ್ಪ ದೇವಾಲಯದ ಬಳಿ ಕಾಮಗಾರಿ ನಡೆಯಲಿದೆ ಎಂದು ಸಚಿವರು ತಿಳಿಸಿದರು.

ಸೇತುವೆ ನಿರ್ಮಾಣದಿಂದ ಪಡುಕರೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆ ಅಭಿವೃದ್ಧಿಗೊಳ್ಳಲಿದ್ದು, ಪಡುಕರೆ ಬೀಚ್ ನ್ನು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಮೂಲಕ ಸಮಗ್ರವಾಗಿ ಅಭಿವೃದ್ಧಿಗೊಳಿಸಿ , ಪಡುಕರೆಯನ್ನು ಆಕರ್ಷಕ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವವಿರುವಲ್ಲಿ ಟ್ಯಾಂಕರ್ ಮೂಲಕ ನೀರು ವಿತರಿಸುವಂತೆ ಜಿಲ್ಲೆಯ ಎಲ್ಲಾ ಪಿಡಿಓ ಗಳಿಗೆ ಹಾಗೂ ಸಂಬಂದಪಟ್ಟ ಅಧಿಕರಿಗಳಿಗೆ ಸೂಚಿಸಲಾಗಿದ್ದು, ನಿರ್ಲಕ್ಷ್ಯ ತೋರಿದಲ್ಲಿ ಅಮಾನತುಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೇಯ ಉಪಾಧ್ಯಕ್ಷೆ ಸಂಧ್ಯಾ, ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ತೋನ್ಸೆ,ಪೌರಾಯುಕ್ತ ಮಂಜುನಾಥಯ್ಯ , ಸೇತುವೆ ನಿರ್ಮಾಣ ಸಂಸ್ಥೆ ಯೋಜಕದ ಇಂಜಿನಿಯರ್ ವಿನಂiÀi ಕುಮಾರ್, ಸ್ಥಳೀಯ ಮೀನುಗಾರರ ಮುಖಂಡರು ಹಾಜರಿದ್ದರು.

No Comments

Leave A Comment