Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ವಿಕೆ ಶಶಿಕಲಾ ಅಪರಾಧಿ, 4 ವರ್ಷ ಜೈಲು ಶಿಕ್ಷೆ ತೀರ್ಪು ನೀಡಿದ ‘ಸುಪ್ರೀಂ’/SC convicts Sasikala, to spend 4 years in jail


ನವದೆಹಲಿ:
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಇಂದು ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್ ವಿಕೆ ಶಶಿಕಲಾ ಅಪರಾಧಿ ಎಂದು ಘೋಷಿಸಿದ್ದು ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಇಡೀ ದೇಶವೇ ಕಾತರದಿಂದ ನಿರೀಕ್ಷಿಸುತ್ತಿದ್ದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ ಶಶಿಕಲಾ ನಟರಾಜನ್ ಅವರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ನ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಪಿನಾಕಿ ಚಂದ್ರ ಘೋಷ್ ಮತ್ತು ಅಮಿತಾವ್ ರಾವ್ ಪ್ರಕಟಿಸಿದ್ದಾರೆ.

ಶಶಿಕಲಾಗೆ ನಾಲ್ಕು ವರ್ಷ ಜೈಲು ಶಿಕ್ಷೆ, 10 ಕೋಟಿ ರುಪಾಯಿ ದಂಡ ವಿಧಿಸಿರುವ ಸುಪ್ರೀಂಕೋರ್ಟ್ ಈ ಕೂಡಲೇ ಪೊಲೀಸರಿಗೆ ಶರಣಾಗುವಂತೆ ಸೂಚಿಸಿದೆ. ಈ ಮೂಲಕ ಶಶಿಕಲಾ ಇನ್ನು ನಾಲ್ಕು ವರ್ಷ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಶಿಕ್ಷೆ ಅನುಭವಿಸಲಿದ್ದಾರೆ.

ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಆದಾಯ ಮೀರಿ ಆಸ್ತಿ ಪ್ರಕರಣದ ಮುಖ್ಯ ಆರೋಪಿಯಾಗಿದ್ದು ಅವರು ಮೃತಪಟ್ಟಿರುವುದರಿಂದ ಅವರನ್ನು ಪ್ರಕರಣದಿಂದ ಕೈಬಿಡಲಾಗಿದ್ದು, ಇನ್ನು ಎರಡನೇ ಆರೋಪಿ ಶಶಿಕಲಾ, ಮೂರನೇ ಆರೋಪಿ ಸುಧಾಕರನ್ ಮತ್ತು ನಾಲ್ಕನೇ ಆರೋಪಿ ಇಳವರಸಿ ಇದೀಗ ಜೈಲು ಸೆರಲಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪು ಅನ್ವಯ ಇನ್ನು ಆರು ವರ್ಷಗಳ ಕಾಲ ಶಶಿಕಲಾ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಜತೆಗೆ 10 ವರ್ಷಗಳ ಕಾಲ ಯಾವುದೇ ಸ್ಥಾನವನ್ನು ಅಲಂಕರಿಸುವಂತಿಲ್ಲ.

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಶಶಿಕಲಾರನ್ನು ದೋಷಮುಕ್ತಗೊಳಿಸಿ ಕರ್ನಾಟಕ ಹೈಕೋರ್ಟ್‌ 2015ರಲ್ಲಿ ಆದೇಶ ನೀಡಿತ್ತು. ಇದನ್ನು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

V K Sasikala, long time aide of Jayalalithaa, has been convicted by the Supreme Court in the disproportionate assets case, nixing any possibility of her becoming Tamil Nadu chief minister.

The two-judge bench comprising Justices P C Ghose and Amitava Roy directed Sasikala and the two relatives to surrender forthwith to the trial court in Bengaluru and serve the remaining part of four year jail term.

The court verdict comes at a time when Sasikala is fighting a bitter public battle with caretaker Chief Minister O Panneerselvam for the control of the All India Anna Dravida Munnetra Kazhagam. The internal crisis threatened to split the AIADMK with each camp laying claim to Jayalalithaa’s legacy. After Panneerselvam resigned from the post a few days ago, Sasikala was set to become the chief minister of the state. But Governor C Vidyasagar Rao did not invite her to form the government.

The verdict disqualifies Sasikala from becoming a legislator, and consequentially she can’t be chief minister either.

The bench read the operative portion of the voluminous judgment saying that “according to the materials and evidence place on record, we set aside the judgment and the order of the high court and affirm in toto the judgement and order the trial court convicting the accused persons.”

The bench said since Jayalalithaa has expired, the proceeding against her is abated.

“Nevertheless, we reiterate that having regard to the facts, the charge framed against them by the trial court is restored,” the bench said.

“Since the charges framed by the trial court have been restored against all of them they will surrender forthwith before the trial court and serve the remaining part of the sentence,” the bench said.

The trial court had sentenced Sasikala and her two relatives to four years imprisonment with a fine of Rs 10 crore each. Jayalalithaa was sentenced to four years with a fine of Rs 100 crore.

Jayalalithaa and three others were accused of allegedly amassing disproportionate asserts to the tune of Rs 66.65 crore during her first term as chief minister from 1991 to 1996

No Comments

Leave A Comment