Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ತೈವಾನ್’ನಲ್ಲಿ ಭೀಕರ ಅಪಘಾತ: 32 ಮಂದಿ ಸಾವು, ಹಲವರಿಗೆ ಗಾಯ

ತೈಪೈ: ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್’ವೊಂದು ತಿರುವು ತೆಗೆದುಕೊಳ್ಳುವ ವೇಳೆ ಮೊಗುಚಿ ಬಿದ್ದ ಪರಿಣಾಮ 32 ಮಂದಿ ದುರ್ಮರಣವನ್ನಪ್ಪಿರುವ ಘಟನೆ ಪೂರ್ವ ಚೀನಾದ ತೈವಾನ್ ನಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.

ಪ್ರವಾಸಿಗರ ಬಸ್ ತೈಚುಂಗ್ ಗೆ ಭೇಟಿ ನೀಡಿ ನಂತರ ಹಿಂತಿರುಗಿ ಬರುತ್ತಿದ್ದು. ಈ ವೇಳೆ ರಸ್ತೆಯೊಂದರ ಎಡಬದಿಯಲ್ಲಿ ತಿರುವು ತೆಗೆದುಕೊಳ್ಳುತ್ತಿದ್ದ ವೇಳೆ ಬಸ್ ಮೊಗುಚಿ ಬಿದ್ದಿದೆ. ಬಸ್ ನಲ್ಲಿ 45 ಮಂದಿ ಪ್ರವಾಸಿಗರಿದ್ದು, ಸಾವನ್ನಪ್ಪಿದ ಬಹುತೇಕರಲ್ಲಿ ಹಿರಿಯರೇ ಹೆಚ್ಚಾಗಿದ್ದರು ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಅಗ್ನಿ ಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ, ಈ ವರೆಗೂ 32 ಮಂದಿ ಘಟನೆಯಲ್ಲಿ ಸಾವನ್ನಪ್ಪಿದ್ದು, 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿಸಿವೆ.

ಗಾಯಾಳುಗಳ ಪರಿಸ್ಥಿತಿ ಕೂಡ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

No Comments

Leave A Comment