Log In
BREAKING NEWS >
ಉಡುಪಿಯ ಕಿನ್ನಿಮುಲ್ಕಿಯಲ್ಲಿ ಜನವರಿ 17ರ೦ದು ಸಾಯ೦ಕಾಲ 7ಗ೦ಟೆಗೆ ಉಡುಪಿಯ ಖ್ಯಾತ ಉದ್ಯಮಿ ಹಾಗೂ ಕಾ೦ಗ್ರೆಸ್ ಮುಖ೦ಡರಾದ ಕೆ.ಕೃಷ್ಣಮೂರ್ತಿ ಆಚಾರ್ಯ ಹಾಗೂ ನಗರ ಸಭಾ ಸದಸ್ಯರಾದ ಶ್ರೀಅಮೃತ ಕೃಷ್ಣಮೂರ್ತಿ ಆಚಾರ್ಯರವರ ಸಾರಥ್ಯದಲ್ಲಿ ನೂತನ ಯಶೋಧ ಆಟೋ ರಿಕ್ಷಾ ಅಸೋಸಿಯೇಷನ್ ಶುಭಾರ೦ಭಗೊಳ್ಳಲಿದೆ.

ವಾಷಿಂಗ್ಟನ್‌: ಸೂಕ್ತ ದಾಖಲೆಗಳನ್ನು ಹೊಂದಿಲ್ಲದ ನೂರಾರು ವಲಸಿಗರ ಬಂಧನ

ವಾಷಿಂಗ್ಟನ್‌ (ಎಎಫ್‌ಪಿ): ಸೂಕ್ತ ದಾಖಲೆಗಳನ್ನು ಹೊಂದಿಲ್ಲದ ನೂರಾರು ವಲಸಿಗರನ್ನು ಅಮೆರಿಕದ ಅಧಿಕಾರಿಗಳು ಬಂಧಿಸಿದ್ದು, ಇದು ದೇಶದಾದ್ಯಂತ ವಲಸಿಗ ಸಮುದಾಯದವರಲ್ಲಿ ಆತಂಕ ಸೃಷ್ಟಿಸಿದೆ.

ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುವ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸಹಿ ಹಾಕಿದ ಬಳಿಕ, ವಲಸಿಗರನ್ನು ಗುರಿಯಾಗಿರಿಸಿ ನಡೆಸಿದ ಮೊದಲ ಕಾರ್ಯಾಚರಣೆ ಇದಾಗಿದೆ.

ಆದರೆ ಈ ಕಾರ್ಯಾಚರಣೆ ‘ಸಾಮಾನ್ಯ ಪ್ರಕ್ರಿಯೆ’ ಎಂದು ವಲಸೆ ಮತ್ತು ಕಸ್ಟಮ್ಸ್‌ ನಿರ್ದೇಶನಾಲಯದ (ಐಸಿಇ) ವಕ್ತಾರೆ ಜೆನಿಫರ್‌ ಎಲ್ಜಿಯಾ ತಿಳಿಸಿದ್ದಾರೆ. ಅಟ್ಲಾಂಟ, ಆಸ್ಟಿನ್‌, ಷಿಕಾಗೊ, ಲಾಸ್‌ ಏಂಜಲೀಸ್‌, ನ್ಯೂಯಾರ್ಕ್‌ ನಗರಗಳಲ್ಲಿ ಸೂಕ್ತ ದಾಖಲೆಗಳಿಲ್ಲದೆ ವಾಸಿಸುತ್ತಿದ್ದ ವಲಸಿಗರನ್ನು ಐಸಿಇ ಅಧಿಕಾರಿಗಳು ಬಂಧಿಸಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ 160 ವಲಸಿಗರ ಬಂಧನ: ಕ್ಯಾಲಿಫೋರ್ನಿಯದಲ್ಲಿ ಅಂದಾಜು 160 ವಲಸಿಗರನ್ನು ಬಂಧಿಸಲಾಗಿದೆ ಎಂದು ಐಸಿಇ ಕಾರ್ಯಾಚರಣೆಯ ಮುಖ್ಯಸ್ಥ ಡೇವಿಡ್‌ ಮರಿನ್‌ ಹೇಳಿದ್ದಾರೆ. 37 ವಲಸಿಗರನ್ನು ಶುಕ್ರವಾರ ರಾತ್ರಿ ವೇಳೆಗೆ ಮೆಕ್ಸಿಕೊಗೆ ಗಡೀಪಾರು ಮಾಡಲಾಗಿದೆ.

ವಲಸಿಗರ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆಗಳು ನಡೆದಿದ್ದು, ಡೆಮಾಕ್ರಟಿಕ್‌ ಪಕ್ಷದ ಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಅಧ್ಯಕ್ಷ ಟ್ರಂಪ್‌ ಅವರ ನೀತಿಗಳು ನಮ್ಮ ಮೌಲ್ಯಗಳಿಗೆ ಮಾಡುತ್ತಿರುವ ದ್ರೋಹ’ ಎಂದು ಡೆಮಾಕ್ರಟಿಕ್‌ ಸೆನೆಟರ್‌ ಡಯಾನ್‌ ಫೈನ್‌ಸ್ಟೈನ್‌ ತಿಳಿಸಿದ್ದಾರೆ.
ವಲಸೆಗೂ ಅಪರಾಧ ಕೃತ್ಯಗಳಿಗೂ ಸಂಬಂಧವಿಲ್ಲ-ಅಧ್ಯಯನ : ಅಮೆರಿಕದಲ್ಲಿ ಅಪರಾಧ ಕೃತ್ಯಗಳು ಹೆಚ್ಚಿರುವುದಕ್ಕೂ ವಲಸಿಗರಿಗೂ ಸಂಬಂಧವಿಲ್ಲ ಎಂದು ನೂತನ ಅಧ್ಯಯನವೊಂದು ತಿಳಿಸಿದೆ.

‘ಅಮೆರಿಕದ ಮಹಾನಗರಗಳಲ್ಲಿ ಅಪರಾಧ ಕೃತ್ಯಗಳಿಗೂ ವಲಸಿಗರಿಗೂ ಸಂಬಂಧವಿಲ್ಲ ಎನ್ನುವುದಕ್ಕೆ ನಮ್ಮ ಅಧ್ಯಯನದಲ್ಲಿ ಪ್ರಬಲ ಸಾಕ್ಷ್ಯಗಳು ದೊರಕಿವೆ’ ಎಂದು ಬಫೆಲೊ ವಿಶ್ವವಿದ್ಯಾಲಯದ ಸಹಾಯಕ ಪ್ರೊಫೆಸರ್‌ ರಾಬರ್ಟ್‌ ಏಡಲ್‌ಮ್ಯಾನ್‌ ತಿಳಿಸಿದ್ದಾರೆ. ‘ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಅಪರಾಧ ಕೃತ್ಯಗಳು ಹೆಚ್ಚಿರುವುದಿಲ್ಲ. ಬದಲಾಗಿ ಕಳ್ಳತನ, ಕೊಲೆ ಪ್ರಕರಣಗಳು ಕಡಿಮೆ ಇವೆ ಎನ್ನುವ ಅಂಶ ತಿಳಿದುಬಂದಿದೆ’ ಎಂದು ಅವರು ಹೇಳಿದ್ದಾರೆ.

No Comments

Leave A Comment