Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಬ್ರಿಟಿಷ್ ಅಕಾಡೆಮಿ ಲಯನ್‌ ಚಿತ್ರದಲ್ಲಿನ ಅಭಿನಯಕ್ಕಾಗಿ ದೇವ್ ಪಟೇಲ್‌ ಗೆ ಬಿಎಎಫ್‌ಟಿಎ ಪ್ರಶಸ್ತಿ ಗರಿ

ಲಂಡನ್: ಭಾರತೀಯ ಮೂಲದ ಬ್ರಿಟಿಷ್ ನಟ ದೇವ್ ಪಟೇಲ್‌ಗೆ 2017ನೇ ಸಾಲಿನ  ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಷನ್ ಅವಾರ್ಡ್ಸ್ (ಬಿಎಎಫ್ ಟಿಎ) ಸಂದಿದೆ.

ಲಯನ್ ಚಿತ್ರದಲ್ಲಿನ ಅಭಿನಯಕ್ಕಾಗಿ  ದೇವ್ ಪಟೇಲ್‌ಗೆ ಈ ಪ್ರಶಸ್ತಿ ಬಂದಿದೆ.  ಇದರಲ್ಲಿ ದೇವ್ ಪಟೇಲ್‌  ಪೋಷಕ ನಟನಾಗಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಅತ್ತುತ್ತಮ ಚಿತ್ರಕಥೆ ಪ್ರಶಸ್ತಿ ಸಂದಿರುವುದು ಮತ್ತೊಂದು ವಿಶೇಷ.

ಲಯನ್ ಚಿತ್ರ ಭಾರತೀಯ ಹುಡುಗನ ಕಥೆಯಾಧರಿಸಿದ ಚಿತ್ರವಾಗಿದೆ.

ಭಾನುವಾರ ಸಂಜೆ 70ನೇ ಬಿಎಎಫ್‌ಟಿಎ ಪ್ರಶಸ್ತಿಗಳನ್ನು  ಲಂಡನ್‌ನಲ್ಲಿರುವ  ರಾಯಲ್ ಅಲ್ಬರ್ಟ್ ಸಭಾಂಗಣದಲ್ಲಿ ವಿತರಿಸಲಾಯಿತು.

ಲಯನ್ ಕಥೆ..
ಭಾರತದ ಬಾಲಕನೊಬ್ಬ ರೈಲಿನಲ್ಲಿ ಪ್ರಯಾಣಿಸುತ್ತಿರುತ್ತಾನೆ. ಅದು ದೀರ್ಘ ಕಾಲದ ಪ್ರಯಾಣವಾದ್ದರಿಂದ  ಆ ಬಾಲಕ  ನಿದ್ದೆಗೆ ಜಾರಿರುತ್ತಾನೆ. ಅವನಿಗೆ ಎಚ್ಚರವಾದಾಗ  ತಾನು ಇಳಿಯಬೇಕಾಗಿದ್ದ ಸ್ಥಳ ಇದಲ್ಲ ಎಂಬುದು ತಿಳಿಯುತ್ತದೆ.   ಅಲ್ಲಿನ ಭಾಷೆಯು ಆ ಬಾಲಕನಿಗೆ ಅರ್ಥವಾಗುತ್ತಿರುವುದಿಲ್ಲ.  ಅಲ್ಲಿ ಅನೇಕ ರೀತಿಯ ಅನುಭವಗಳು ಅವನಿಗಾಗುತ್ತವೆ.

ಅಂತಿಮವಾಗಿ ಆ ಬಾಲಕನನ್ನು ಆಸ್ಟ್ರೇಲಿಯಾದ ದಂಪತಿ ದತ್ತು ಪಡೆಯುತ್ತಾರೆ. ಕೆಲ ವರ್ಷಗಳ ನಂತರ ಆ ಬಾಲಕ ತನ್ನ ಕುಟುಂಬವನ್ನು ಹುಡುಕಿಕೊಂಡು ಹೋಗುತ್ತಾನೆ. ಇದೇ  ಲಯನ್ ಚಿತ್ರದ ಕಥೆ.

No Comments

Leave A Comment