Log In
BREAKING NEWS >
ಶರತ್ ಮಡಿವಾಳ ಹತ್ಯೆ: ಆರೋಪಿ ಮಹಮದ್ ಷರೀಫ್ ಗೆ ಹೈಕೋರ್ಟ್ ಜಾಮೀನು....

ಅತ್ಯುತ್ತಮ ಶಿಕ್ಷಣ ಶಿಲ್ಪಿ ರಾಜ್ಯ ಪ್ರಶಸ್ತಿ 2017 –ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ

ಕರ್ನಾಟಕಜ್ಞಾನ ವಿಜ್ಞಾನ ಸಮಿತಿ (ರಿ), ಬೆಂಗಳೂರು ಇವರು ಶಿಕ್ಷಣ ಶಿಲ್ಪಿ ಮಾಸಪತ್ರಿಕೆಯರಾಜ್ಯಮಟ್ಟದ ಶೈಕ್ಷಣಿಕ ಸಮ್ಮಿಲನ ಹಾಗೂ 4ನೇ ವಾರ್ಷಿಕೋತ್ಸವದಂದು ಸರಕಾರಿ ಪ್ರಥಮದರ್ಜೆಕಾಲೇಜು, ಹಳೆಯಂಗಡಿ ಮಂಗಳೂರು ದ.ಕಇಲ್ಲಿ–ದಕ್ಷಿಣಕನ್ನಡಜಿಲ್ಲೆಯ ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ಸುಳ್ಯ ತಾಲೂಕಿನ ವಿಜ್ಞಾನ ಶಿಕ್ಷಕ ಪಿ.ಎನ್.ಭಟ್‍ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸರಕಾರಿ ಪದವಿಪೂರ್ವಕಾಜೇಜು ಹೆಬ್ರಿ ಇಲ್ಲಿಯ ದಿನೇಶ್ ಶೆಟ್ಟಿಗಾರ್‍ಇವರ ಶಿಕ್ಷಣ ಕ್ಷೇತ್ರದಲ್ಲಿಯ ಸಾಧನೆಯನ್ನು ಗುರುತಿಸಿ ಅತ್ಯುತ್ತಮ ಶಿಕ್ಷಣ ಶಿಲ್ಪಿ ರಾಜ್ಯಪ್ರಶಸ್ತಿ 2017ನ್ನು ನೀಡಿಗೌರವಿಸಲಾಯಿತು.

ಈ ಪ್ರಶಸ್ತಿಯನ್ನು ಶ್ರೀ ವೀರಭದ್ರಚನ್ನಮಲ್ಲ ಸ್ವಾಮೀಜಿ ಶಿವಾಯತ ಧರ್ಮಗುರುಗಳು, ಮಾನವಧರ್ಮ ಪೀಠ ಬೆಂಗಳೂರು ಹಾಗೂ ಡಾ| ಸಿ ಆರ್‍ಚಂದ್ರಶೇಖರ್ ಪ್ರಖ್ಯಾತ ಮನೋವೈದ್ಯರು ಹಾಗೂ ಅಧ್ಯಕ್ಷರುಕರ್ನಾಟಕಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು, ಡಾ| ಎಂ ಆರ್‍ರವಿ ಕೆ.ಪಿ.ಎಸ್ ಮುಖ್ಯಕಾರ್ಯನಿರ್ವಾಹಕಅಧಿಕಾರಿದ.ಕಇವರು ನೀಡಿದರು.

No Comments

Leave A Comment