Log In
BREAKING NEWS >
ಶಿರೂರು ಶ್ರೀಗಳು ಮಠಾಧೀಶರೇ ಅಲ್ಲ, ಸನ್ಯಾಸತ್ವ ತ್ಯಜಿಸಿದ್ದರು: ಪೇಜಾವರ ಶ್ರೀ.....ಮಧ್ವ ಸಂಪ್ರದಾಯದಂತೆ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜೀ ಅಂತ್ಯಕ್ರಿಯೆ!

ಉಡುಪಿಯಲ್ಲಿ ಮಹಿಳಾ ಉದ್ಯಮಿಗಳ ಸಮ್ಮೇಳನ; ಪ್ರಶಸ್ತಿ ಪ್ರದಾನ, ಮಣಿಪಾಲದಲ್ಲಿ ವಾಕ್‌ ಫೋರ್‌ ಹೋಪ್‌ ವಾಕಥಾನ್‌ ….

ಉಡುಪಿ: ಮಹಿಳೆಯರಲ್ಲಿ ಉದ್ಯಮಶೀಲತೆ ಅಭಿವೃದ್ಧಿ ಪಡಿಸುವುದರಿಂದ ಸಮಾಜದ ಒಟ್ಟಾರೆ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಾಧ್ಯ ಎಂಬ ಫಲಿತಾಂಶಗಳನ್ನು ಈಗಾಗಲೇ ಜಾಗತಿಕವಾಗಿ ಸ್ವೀಕರಿಸಲಾಗಿದೆ.

ಕಾರ್ಯಕ್ರಮದ ಪೂರ್ವಭಾವಿಯಾಗಿ ಫೆಬ್ರವರಿ 11,ಶನಿವಾರ ಸಂಜೆ ಮಣಿಪಾಲದಲ್ಲಿ ವಾಕ್‌ ಫೋರ್‌ ಹೋಪ್‌ ಎಂಬ ಹೆಸರಿನಲ್ಲಿ ವಾಕಥಾನ್‌ ನಡೆಯಲಿದೆ. ಜಿಲ್ಲಾಧಿಕಾರಿ ಕಚೇರಿಯಿಂದ ಟೈಗರ್‌ ಸರ್ಕಲ್‌ ವರೆಗೆ ವಾಕಥಾನ್‌ ನಡೆಯಿತು.

ಜಿಲ್ಲಾ ಪ೦ಚಾಯತ್ ಸಿಇಒ ಫ್ರಾನಿಸ್ಸ್ ಮೇರಿರವರು ಉದ್ಘಾಟಿಸಿದರು.

ಸ೦ಘಟನೆಯ ಪದಾಧಿಕಾರಿಗಳಾದ ಸರಿತಾ ಸ೦ತೋಷ್, ರೇಣು ಜಯರಾ೦, ವೀಣಾ ಶ್ರುತಿ ಶೆಣೈ, ಡಾ.ಗಿರಿಜಾ, ಡಾ.ಗಾಯತ್ರಿ , ಪುಷ್ಪಗಣೇಶ್, ಸಾಧನಾ ಕಿಣಿ ಮಣಿಪಾಲ, ಜಯಶ್ರೀಕೃಷ್ಣರಾಜ್, ಅರುಣಾ ಶೆಣೈ, ಸರೋಜಾಆಚಾರ್ಯ ಸೇರಿದ೦ತೆ ಸರ್ವಸದಸ್ಯರು ಹಾಗೂ ಜಿಲ್ಲೆಯ ಎಲ್ಲಾ ಸ೦ಘಟನೆಯ ಮಹಿಳಾ ವಿಭಾಗದ ಸದಸ್ಯರು ಹಾಜರಿದ್ದರು.

ಮಹಿಳೆಯರ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವುದು ಅಗತ್ಯವಾಗಿದ್ದು ಮಹಿಳೆಯರನ್ನು ಅಧಿಕಾರ ಮತ್ತು ಮುಖ್ಯ ವಾಹಿನಿಗೆ ತರುವ ಮೂಲಕ ಆರ್ಥಿಕ ಸ್ಥಿತಿ ಸುಧಾರಿಸಲು ನೆರವಾಗಬೇಕಾದುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಉಡುಪಿಯಲ್ಲಿ ಮಹಿಳಾ ಉದ್ಯಮಿಗಳ ಸಮ್ಮೇಳನವನ್ನು ಆಯೋಜಸಲಾಗಿದೆ.

ಫೆಬ್ರವರಿ 12 ,ಭಾನುವಾರದಂದು ಉಡುಪಿಯ ಓಷಿಯನ್‌ ಪರ್ಲ್ ಹೊಟೇಲ್‌ನ ಸಭಾಂಗಣದಲ್ಲಿ ಸಮ್ಮೇಳನ ನಡೆಯಲಿದ್ದು, ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆಯ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಸಾಧನೆಗೈದ ಮಹಿಳಾ ಉದ್ಯಮಿಗಳಿಗೆ ಪ್ರಶಸ್ತಿ ಪ್ರದಾನವೂ ನಡೆಯಲಿದೆ.

No Comments

Leave A Comment