Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಅಕ್ರಮ ಶಸ್ತ್ರಾಸ್ತ್ರ :ಪತ್ರಕರ್ತ ಅಗ್ನಿ ಶ್ರೀಧರ್‌ಗೆ ಮಧ್ಯಂತರ ಜಾಮೀನು

ಬೆಂಗಳೂರು: ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪ ಪ್ರಕರಣದಲ್ಲಿ ಪತ್ರಕರ್ತ ಅಗ್ನಿ ಶ್ರೀಧರ್‌ಗೆ ಸಿಟಿ ಸಿವಿಲ್‌ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನಿರೀಕ್ಷಣಾ ಜಾಮೀನು ಕೋರಿ ಅಗ್ನಿ ಶ್ರೀಧರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ 53ನೇ ಸೆಷನ್ಸ್‌ ನಾಯಾಲಯದ ನ್ಯಾಯಮೂರ್ತಿ ವನಮಾಲಾ ಆನಂದ್‌ರಾವ್‌ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.

50 ರೂ.ಸಾವಿರ ವೈಯಕ್ತಿಕ ಬಾಂಡ್‌, ಶೂರಿಟಿ, ಒಬ್ಬರ ಭದ್ರತಾ ಖಾತರಿ ಒದಗಿಸಬೇಕೆಂದು ಷರತ್ತು ವಿಧಿಸಿ 15 ದಿನಗಳ ಕಾಲ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ಅಲ್ಲದೆ, 15 ದಿನದೊಳಗೆ ಮಧ್ಯಂತರ ಕಾಯಂತಿಗೆ ಕೋರಿ ಅರ್ಜಿ ಸಲ್ಲಿಸಬಹುದು ಎಂದು ಕೋರ್ಟ್‌ ಅನುಮತಿ ನೀಡಿದೆ. ಅಗ್ನಿ ಶ್ರೀಧರ್‌ ಅವರ ಮನೆಯಲ್ಲಿ ರೋಹಿತ್‌ ಅಡಗಿದ್ದು, ಆತನನ್ನು ಬಂಧಿಸಲು ಪೊಲೀಸರು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಿಂದ ಸರ್ಚ್‌ ವಾರೆಂಟ್‌ ಪಡೆದಿದ್ದರು.

ಶ್ರೀಧರ್‌ ಮನೆಯಲ್ಲಿ ಆತ ಪತ್ತೆಯಾಗಿಲ್ಲ. ಆರೋಪಿ ಸಿಗದ ಕಾರಣ ಶ್ರೀಧರ್‌ ಅವರನ್ನು ತೇಜೋವಧೆ ಮಾಡಲು ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಯಲಹಂಕದಲ್ಲಿ ನಡೆದ ಶೂಟೌಟ್‌ ಪ್ರಕರಣಕ್ಕೂ ಅವರಿಗೂ ಸಂಬಂಧವಿಲ್ಲ. ಅಗ್ನಿ ಶ್ರೀಧರ್‌ ಬರಹಗಾರ ಹಾಗೂ ಆರ್‌.ಟಿ.ಐ.ಕಾರ್ಯಕರ್ತರಾಗಿದ್ದು, ಅವರನ್ನು ಪ್ರಕರಣದಲ್ಲಿ ಅವರ ಹೆಸರನ್ನು ಎಳೆದು ತರುವ ಪ್ರಯತ್ನ ನಡೆಯುತ್ತಿದೆ.

ತಮ್ಮ ಕಕ್ಷೀದಾರ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದು, ನಿರೀಕ್ಷಣಾ ಜಾಮೀನು ನೀಡುವಂತೆ ಅಗ್ನಿ ಶ್ರೀಧರ್‌ ಪರ ವಕೀಲ ಸಿ.ಎಚ್‌.ಹನುಮಂತರಾವ್‌ ಮನವಿ ಮಾಡಿದರು.ಅರ್ಜಿದಾರ ಮನವಿ ಪುರಸ್ಕರಿಸಿದ ನ್ಯಾ.ಆನಂದ ವನಮಾಲ ಆರೋಪಿ ಅಗ್ನಿ ಶ್ರೀಧರ್‌ಗೆ ಹದಿನೈದು ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರು.

No Comments

Leave A Comment