Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

80 ಕೋಟಿಗೆ ಅಂಬಾಸಿಡರ್‌ ಬ್ರ್ಯಾಂಡ್‌ ಮಾರಾಟ ಹೊಸ ರೂಪದಲ್ಲಿ ಬರಲಿದೆಯೇ ಅಂಬಾಸಿಡರ್‌ ಕಾರು?

ಕೋಲ್ಕತಾ: ದೇಶದ ಪ್ರಧಾನಿಯಿಂದ ಸಾಮಾನ್ಯ ಪ್ರಜೆಯವರೆಗೂ ಬಳಕೆಗೆ ‘ಅಂಬಾಸಿಡರ್‌’ ಕಾರೇ ಬೇಕಿತ್ತು. ಹಿಂದುಸ್ತಾನ್‌ ಮೋಟಾರ್ಸ್‌ನ ಅಂಬಾಸಿಡರ್‌ ಬ್ರ್ಯಾಂಡ್‌ ಇದೀಗ ‘ಪ್ಯೂಗೋಟ್‌’ ಸಂಸ್ಥೆಗೆ ಮಾರಾಟವಾಗಿದೆ.

ಮೂರು ವರ್ಷಗಳ ಹಿಂದೆಯೇ ಸಿಕೆ ಬಿರ್ಲಾ ಗ್ರೂಪ್‌ನ ಹಿಂದುಸ್ತಾನ್‌ ಮೋಟಾರ್ಸ್‌ ಅಂಬಾಸಿಡರ್‌ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ಇದೀಗ ಫ್ರೆಂಚ್‌ ಕಾರು ಉತ್ಪಾದನಾ ಸಂಸ್ಥೆ ಪ್ಯೂಗೋಟ್‌ ₹80 ಕೋಟಿ ನೀಡಿದ ಅಂಬಾಸಿಡರ್‌ ಬ್ರ್ಯಾಂಡ್‌ ಖರೀದಿಸಿದೆ.

ಶುಕ್ರವಾರ ನಡೆದಿರುವ ಒಪ್ಪಂದದಲ್ಲಿ ಅಂಬಾಸಿಡರ್‌ ಕಾರಿನ ಲೋಗೋ ಹಾಗೂ ಬ್ರ್ಯಾಂಡ್‌ಗೆ ಸಂಬಂಧಿಸಿದ ಎಲ್ಲವನ್ನೂ ಪ್ಯೂಗೋಟ್‌ ಎಸ್‌ಎ ಗ್ರೂಪ್‌ಗೆ ಮಾರಾಟ ಮಾಡಲಾಗಿದೆ.

1960–70ರ ದಶಕದಲ್ಲಿ ಅಂಬಾಸಿಡರ್‌ ಬರಿಯ ಕಾರ್‌ ಆಗಿರಲಿಲ್ಲ. ನಗರ ಭಾರತದ ಭಾಗವೇ ಆಗಿತ್ತು. 1980ರಲ್ಲಿ ಉತ್ತರಪಾರ ಘಟಕದಿಂದ ವಾರ್ಷಿಕ 24,000 ಕಾರುಗಳನ್ನು ಉತ್ಪಾದಿಸಲಾಗುತ್ತಿತ್ತು. 2013–14ರ ವೇಳೆಗೆ ಅಂಬಾಸಿಡರ್‌ ಕಾರು ಮಾರಾಟ ವಾರ್ಷಿಕ 2500ಕ್ಕೆ ಇಳಿಕೆಯಾದ ಕಾರಣ, ಉತ್ಪಾದನೆಯನ್ನು ಸ್ಥಗಿತಗೊಳಿಸಲಾಯಿತು.

ಪ್ಯೂಗೋಟ್‌ ಸಂಸ್ಥೆಯು ಬ್ರ್ಯಾಂಡ್‌ ಖರೀದಿಸಿದ್ದರೂ ಹೊಸ ರೂಪದಲ್ಲಿ ಅಂಬಾಸಿಡರ್‌ ಕಾರನ್ನು ದೇಶೀಯ ಮಾರುಕಟ್ಟೆಗೆ ಪರಿಚಯಿಸುವ ಕುರಿತು ಇನ್ನೂ ಸ್ಪಷ್ಟವಾಗಿಲ್ಲ.

No Comments

Leave A Comment