Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಉತ್ತರಪ್ರದೇಶ ಮೊದಲ ಹಂತದ ಮತದಾನ ಶುರು: ಗಗನ್ ಸೋಮ್ ಸೆರೆ

ಲಕ್ನೋ:ಹೈವೋಲ್ಟೇಜ್ ಮಿನಿ ಸಮರದ ಮೊದಲ ಹಂತದ ಮತದಾನ ಉತ್ತರಪ್ರದೇಶದಲ್ಲಿ ಶನಿವಾರ ಬೆಳಗ್ಗೆ 7ಗಂಟೆಯಿಂದ ಆರಂಭವಾಗಿದೆ. ಒಟ್ಟು ಏಳು ಹಂತಗಳ ಪೈಕಿ ಇದು ಮೊದಲನೇಯದ್ದು. ಪಶ್ಚಿಮ ಉತ್ತರ ಪ್ರದೇಶದ 73 ವಿಧಾನಸಭಾ ಕ್ಷೇತ್ರಗಳಲ್ಲಿನ 839 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಮತದಾನದ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಏತನ್ಮಧ್ಯೆ ಮೀರತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಗೀತ್ ಸೋಮ್ ಸಹೋದರ ಗಗನ್ ಸೋಮ್ ಮತಗಟ್ಟೆಯೊಳಗೆ ಪಿಸ್ತೂಲ್ ತೆಗೆದುಕೊಂಡು ಹೋದ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ.

No Comments

Leave A Comment