Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

18 ನಿಮಿಷಗಳ ಒಳಗೆ ಫೈನಾನ್ಸ್‌ನಿಂದ 32 ಕೆಜಿ ಚಿನ್ನ ಲೂಟಿ !

ಗುರುಗ್ರಾಮ: ಇಲ್ಲಿ ನಡೆದ ಬೆಚ್ಚಿ ಬೀಳಿಸುವ ಘಟನೆಯೊಂದರಲ್ಲಿ  8 ಮಂದಿ  ಶಸ್ತ್ರಧಾರಿಗಳು ಹಾಡಹಗಲೇ  ಮಣಪ್ಪುರಂ ಫೈನಾನ್ಸ್‌ಗೆ ನುಗ್ಗಿ 32 ಕೆಜಿ ಚಿನ್ನಾಭರಣ ಮತ್ತು 8 ಲಕ್ಷ ರೂಪಾಯಿ ನಗದು ಹಣವನ್ನುಲೂಟಿಗೈದು ಪರಾರಿಯಾಗಿದ್ದಾರೆ. ಗುರುವಾರ ಜನನಿಬಿಡ ರೈಲ್ವೇ ರಸ್ತೆಯ ಕಚೇರಿಯಲ್ಲಿ ಈ ಘಟನೆ ನಡೆದಿದೆ.

ಶಸ್ತ್ರಧಾರಿಗಳು ಬ್ಯಾಂಕ್‌‌ನ ಭದ್ರತಾ ಸಿಬಂದಿಯ ಮೇಲೆ ಹಲ್ಲೆ ನಡೆಸಿ ಸಿಬಂದಿಗಳನ್ನು ಬೆದರಿಸಿ ಚಿನ್ನಾಭರಣ ಲೂಟಿಗೈದಿದ್ದಾರೆ.ಕೇವಲ 18 ನಿಮಿಷಗಳ ಒಳಗೆ ಲೂಟಿಗೈದು ಪರಾರಿಯಾಗಿದ್ದಾರೆ. ಸಿಸಿಟಿವಿಯಲ್ಲಿ  ಸಂಪೂರ್ಣ ಕೃತ್ಯ ಸೆರೆಯಾಗಿದೆ. ಘಟನೆಯಲ್ಲಿ  ಭದ್ರತಾ ಸಿಬಂದಿ ಮತ್ತು ಇಬ್ಬರು ಗ್ರಾಹಕರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ತನಿಖೆಗೆ ತಂಡಗಳನ್ನು ರಚಿಸಿ ಶೀಘ್ರ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ಹೇಳಿದ್ದಾರೆ.

No Comments

Leave A Comment