Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಕಾಲಿಗೆ ಬಿದ್ದು ಎದೆಗೆ ಗುಂಡು! ಭೀಕರ ಹತ್ಯೆಯ ಸಿಸಿಟಿವಿ ದೃಶ್ಯಾವಳಿ

ಗೋರಖ್‌ಪುರ : ಇಲ್ಲಿ ಸರ್ಕಾರಿ ಅಧಿಕಾರಿಯೊಬ್ಬನನ್ನು ಗುಂಡಿನ ಮಳೆಗೆರೆದು ಭೀಕರವಾಗಿ ಕೊಲೆಗೈಯಲಾಗಿದೆ. ಹತ್ಯೆಗೈದಿರುವ ಇಬ್ಬರು ದುಷ್ಕರ್ಮಿಗಳು ಮೊದಲು ಹತ್ಯೆಗೀಡಾದ ವ್ಯಕ್ತಿಯ ಕೈಕುಲುಕುತ್ತಾ ಮಾತನಾಡುತ್ತಾರೆ. ಒಬ್ಬಾತ ಕಾಲಿಗೆ ನಮಸ್ಕರಿಸಿ ಕೂಡಲೇ ರಿವಾಲ್ವರ್‌ ತೆಗೆದು ಎದೆಗೆ ಗುಂಡಿಕ್ಕಿದ್ದಾನೆ. ಭೀಕರ ಹತ್ಯೆಯ ಸಿಸಿಟಿವಿಯ ದೃಶ್ಯಾವಳಿ ವೀಕ್ಷಿಸಿ..

ಒಂದೇ ಗುಂಡು ಎದೆ ಸೀಳಿದ ಪರಿಣಾಮ ವ್ಯಕ್ತಿ ನೆಲಕ್ಕೆ ಬಿದ್ದಿದ್ದು ಆಬಳಿಕ ಇನ್ನೊಬ್ಟಾತ ಇನ್ನೂ 5 ಗಂಡುಗಳನ್ನು ಎದೆಗೆ ಗುರಿಯಾಗಿಸಿ ಮನಬಂದಂತೆ ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳೀಯ ಗುಂಡಿತ ಮೊರೆತಕ್ಕೆ ಬೆಚ್ಚಿ ಬಿದ್ದು ಸ್ಥಳಕ್ಕಾಗಮಿಸಿ ನೋಡುವಾಗ ಅದಾಗಲೇ ಪ್ರಾಣ ಪಕ್ಷಿ ಹಾರಿಹೋಗಿತ್ತು. ನೆರೆದವರೆಲ್ಲ ಭೀಕರ ದೃಶ್ಯ ನೋಡಿ ಬೆಚ್ಚಿ ಬಿದ್ದರು.

No Comments

Leave A Comment