Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಶಶಿಕಲಾ ಪ್ರಮಾಣ ಸ್ವೀಕಾರಕ್ಕೆ ತಡೆ ಕೋರಿದ ಅರ್ಜಿ: ತ್ವರಿತ ವಿಚಾರಣೆಗೆ ಸುಪ್ರೀಂ ನಿರಾಕರಣೆ

ಚೆನ್ನೈ: ತಮಿಳಿನಾಡಿನ ಮುಖ್ಯಮಂತ್ರಿಯಾಗಿ ವಿ.ಕೆ.ಶಶಿಕಲಾ ಅಧಿಕಾರ ವಹಿಸುವುದಕ್ಕೆ ತಡೆಯೊಡ್ಡಬೇಕೆಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತುರ್ತು ವಿಚಾರಣೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಶಶಿಕಲಾ ಅವರನ್ನು ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರಡಿ ಆರೋಪ ಎದುರಿಸುತ್ತಿರುವುದರಿಂದ ಅವರು ಮುಖ್ಯಮಂತ್ರಿಯಾಗುವುದಕ್ಕ ತಡೆಯೊಡ್ಡಬೇಕೆಂದು ಕಳೆದ 6ರಂದು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.  ತಮಿಳು ನಾಡು ಜನತೆಯ ಹಿತಾಸಕ್ತಿ ಬಯಸಿ ರಾಜ್ಯದಲ್ಲಿ ಶಾಂತಿ ಕಾಪಾಡಲು ತಾವು ಅರ್ಜಿ ಸಲ್ಲಿಸಿರುವುದಾಗಿ ಅರ್ಜಿದಾರರು ಹೇಳಿದ್ದಾರೆ.

ಇನ್ನೊಂದೆಡೆ ನಿನ್ನೆ ನಡೆದ ಪ್ರಮುಖ ವಿದ್ಯಾಮಾನದಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್, ಸರ್ಕಾರ ರಚಿಸಲು ತಮ್ಮ  ಹಕ್ಕನ್ನು ಪ್ರತಿಪಾದಿಸಿದರು.

ಚಿನ್ನಮ್ಮ ಸರ್ಕಾರ ರಚಿಸಲು ತಮ್ಮ ಹಕ್ಕನ್ನು ಪ್ರತಿಪಾದಿಸಿದ್ದಾರೆ ಎಂದು ಪಕ್ಷ ಟ್ವೀಟ್ ಮಾಡಿದೆ.

ನಿನ್ನೆ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರನ್ನು ಭೇಟಿ ಮಾಡಿದ ಶಶಿಕಲಾ ತಮಗೆ ಸರ್ಕಾರ ರಚಿಸಲು ಬಹುತೇಕ ಶಾಸಕರ ಬೆಂಬಲವಿದೆ ಎಂದು ತೋರಿಸಿದರು. ಅವರ ಜೊತೆಗೆ ಪಕ್ಷದ ಐವರು ಹಿರಿಯ ನಾಯಕರಿದ್ದರು.

ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ತಮ್ಮ ಹಕ್ಕನ್ನು ಪ್ರತಿಪಾದಿಸುವುದಕ್ಕೆ ಮುನ್ನ ಶಶಿಕಲಾ ಅವರು ಪಕ್ಷದ ಹಿರಿಯ ನಾಯಕರಾದ ಇ.ಮಧುಸೂಧನನ್ ಮತ್ತು ಒ.ಪನ್ನೀರ್ ಸೆಲ್ವಂ ಅವರ ಬೆಂಬಲ ಕಳೆದುಕೊಂಡರು. ತಾವು ಹೋರಾಟ ನಡೆಸದೆ ಮುಖ್ಯಮಂತ್ರಿ ಹುದ್ದೆಯನ್ನು ಸುಮ್ಮನೆ ಬಿಟ್ಟುಕೊಡುವುದಿಲ್ಲ ಎಂದು ಪನ್ನೀರ್ ಸೆಲ್ವಂ ತಿಳಿಸಿದ್ದಾರೆ.

ಈ ಮಧ್ಯೆ, ತಮ್ಮನ್ನು ವಿಶ್ವಾಸ ವಂಚಕ ಎಂದು ಕರೆದಿರುವ ಶಶಿಕಲಾ ವಿರುದ್ಧ ಹರಿಹಾಯ್ದ ಪನ್ನೀರ್ ಸೆಲ್ವಂ, ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸುವಂತೆ ಅನೇಕ ಸಚಿವರುಗಳಿಗೆ ಮಾಧ್ಯಮಗಳಲ್ಲಿ ಸಂದರ್ಶನ ನೀಡುವಂತೆ ಪ್ರಚೋದಿಸುತ್ತಿದ್ದಾರೆ, ಕೊಳಕು ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.

No Comments

Leave A Comment