Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಬಾಹ್ಯಾಕಾಶಕ್ಕೆ ಜಿಗಿಯಲಿದ್ದಾರೆ ಮೂರನೇ ಭಾರತೀಯ ಮಹಿಳೆ!

ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈದ ಭಾರತೀಯ ಮಹಿಳೆಯರಾದ ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್ ಅವರ ಸಾಲಿಗೆ ಇದೀಗ ಮತ್ತೋರ್ವ ಮಹಿಳೆ ಸೇರ್ಪಡೆಯಾಗುತ್ತಿದ್ದು, ಡಾ.ಶಾವ್ನಾ  ಪಾಂಡ್ಯಾ ಅವರು ಗಗನಯಾತ್ರೆಗೆ ಸಜ್ಜಾಗಿದ್ದಾರೆ.

32 ವರ್ಷದ ಶಾವ್ನಾ ಭಾರತೀಯ ಮೂಲದ ಅಮೆರಿಕ ಪ್ರಜೆಯಾಗಿದ್ದು, ಪ್ರಸ್ತುತ ಕೆನಡಾದಲ್ಲಿ ನೆಲೆಸಿದ್ದಾರೆ. ಶಾವ್ನಾ ಜನಿಸಿದ್ದು ಕೆನಡಾದಲ್ಲೇ ಆದರೂ ಅವರ ಪೋಷಕರು ಭಾರತೀಯರು. ಮುಂಬೈ ಮೂಲದ ಡಾ. ಶಾವ್ನಾ ಬಹುಮುಖ  ಪ್ರತಿಭೆಯಾಗಿದ್ದಾರೆ. ಲೇಖಕಿ, ಗಾಯಕಿ, ಉದ್ಯಮಿ, ವೈದ್ಯೆ, ನರಶಾಸ್ತ್ರಜ್ಞೆ, ಅಂತಾರಾಷ್ಟ್ರೀಯ ಕೊರಿಯನ್ ಟೆಕ್ವಾಂಡೊ ಚಾಂಪಿಯನ್ ಕೂಡ ಆಗಿದ್ದಾರೆ. ಮತ್ತೊಂದು ಪ್ರಮುಖ ಅಂಶವೆಂದರೆ ಶಾವ್ನಾ ಅಮೆರಿಕದ ಅತ್ಯುನ್ನತ ಸೈನಿಕ  ಪಡೆ ನೇವಿ ಸೀಲ್ಸ್​ನಿಂದ ತರಬೇತಿ ಪಡೆದ ಮುಯ್ ಥಾಯ್ ಪಟುವಾಗಿದ್ದಾರೆ. ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಸಾಧನೆ ಗೈದಿರುವ 32 ವರ್ಷದ ಶಾವ್ನಾ 2018ರಲ್ಲಿ ಇತರೆ ಎಂಟು ಬಾಹ್ಯಾಕಾಶ ಯಾತ್ರಿಗಳ ತಂಡದೊಂದಿಗೆ  ಬಾಹ್ಯಾಕಾಶ ಯಾನ ಆರಂಭಿಸಲಿದ್ದಾರೆ. 

ಅಮೆರಿಕದ ಸಿಟಿಜನ್ ಸೈನ್ಸ್ ಅಸ್ಟ್ರೋನಾಟ್, ಸಿಎಸ್​ಎ ಯೋಜನೆಯಡಿ ಶಾವ್ನಾ ಬಾಹ್ಯಾಕಾಶ ಯಾನ ಕೈಗೊಳ್ಳಲಿದ್ದಾರೆ.ಬಾಹ್ಯಾಕಾಶದ ಈ ಸುಧೀರ್ಘ ಪಯಣದಲ್ಲಿ ಶಾವ್ನಾ ಮತ್ತು ತಂಡ ಭೂಮಿಗಿಂತ ಹೊರಗಿನ ವಿಶೇಷ ಪರಿಸರದಲ್ಲಿ ಮಾನವನ ದೇಹ ಹೇಗೆ ಕಾರ್ಯ ನಿರ್ವಹಿಸುತ್ತದೆ.

ದೇಹದಲ್ಲಿ ಯಾವೆಲ್ಲಾ ಬದಲಾವಣೆಗಳಾಗುತ್ತವೆ, ಅದಕ್ಕೆ ದೇಹ  ಹೇಗೆ ಸ್ಪಂದಿಸುತ್ತದೆ ಎಂಬ ಕುರಿತು ಬಾಹ್ಯಾಕಾಶದಲ್ಲಿ ವಿಶೇಷ ಅಧ್ಯಯನ ಕೈಗೊಳ್ಳಲಿದ್ದಾರೆ. ಅದಕ್ಕಾಗಿ ಬಯೋ ಮೆಡಿಸಿನ್, ಮೆಡಿಕಲ್ ಸೈನ್ಸ್, ನ್ಯೂರೋಸೈನ್ಸ್ ಮತ್ತು ಇತರೆ ಬಾಹ್ಯಾಕಾಶ ಪ್ರಯೋಗಗಳನ್ನು ಬಳಸಿಕೊಳ್ಳಲಿದ್ದಾರೆ.  ಹವಾಮಾನದ ಬದಲಾವಣೆಯ ಪರಿಣಾಮಗಳ ಕುರಿತು ಈ ಅಧ್ಯಯನ ಬೆಳಕು ಚೆಲ್ಲಲಿದೆ ಎಂದು ಮೂಲಗಳು ತಿಳಿಸಿವೆ.ಈ ಬಗ್ಗೆ ಬಹಳ ಖುಷಿಯಿಂದಲೇ ಮಾತನಾಡುವ ಶಾವ್ನಾ, “ನಾನು 10 ವರ್ಷದ ಹುಡುಗಿಯಾಗಿದ್ದಾಗಾಲೇ ಬಾಹ್ಯಾಕಾಶದ ಕುರಿತಂತೆ ಸಾಕಷ್ಟು ಕುತೂಹಲವಿತ್ತು.

ಚಿಕ್ಕಂದಿನಿಂದಲೂ ಬಾಹ್ಯಾಕಾಶ ಸಂಶೋಧನೆ, ಗಗನಯಾತ್ರೆಯ  ಬಗ್ಗೆ ಕನಸು ಕಾಣುತ್ತಿದ್ದೆ” ಎಂದು ಹೇಳಿದ್ದಾರೆ. ಇನ್ನು ಶಾವ್ನಾ ಕುಟುಂಬಸ್ಥರು ಮುಂಬೈನಲ್ಲಿ ನೆಲೆಸಿದ್ದು, ಅಪರೂಪಕ್ಕೆ ಭಾರತಕ್ಕೆ ಬರುವ ಶಾವ್ನಾ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಹೋಗುತ್ತಿರುತ್ತಾರೆ.ಅರ್ಜಿ ಸಲ್ಲಿಕೆ ಮಾಡಿದ್ದು ಬರೊಬ್ಬರಿ 3200 ಮಂದಿ ಆಯ್ಕೆಯಾಗಿದ್ದು ಕೇವಲ ಇಬ್ಬರುಇನ್ನು ಈ ಪ್ರತಿಷ್ಟಿತ ಗಗನಯಾನದಲ್ಲಿ ಪಾಲ್ಗೊಳ್ಳಲು ವಿಶ್ವಾದ್ಯಂತ ಸುಮಾರು 3200 ಮಂದಿ ಆಸಕ್ತರು ಅರ್ಜಿ ಸಲ್ಲಿಕೆ ಮಾಡಿದ್ದರಂತೆ. ಆದರೆ ಈ ಪೈಕಿ ಆಯ್ಕೆಯಾಗಿದ್ದು ಮಾತ್ರ ಇಬ್ಬರು. ಆ ಇಬ್ಬರಲ್ಲಿ ಭಾರತೀಯ ಮೂಲದ ಶಾವ್ನಾ  ಪಾಂಡ್ಯಾ ಕೂಡ ಒಬ್ಬರು ಎನ್ನುವುದೇ ಹೆಮ್ಮೆಯ ಸಂಗತಿ. ಶಾವ್ನಾ ಈಗಾಗಲೇ ಇತರ ಎರಡು ಬಾಹ್ಯಾಕಾಶ ಯೋಜನೆಯ ಕುರಿತು ಸಂಶೋಧನಾ ನಿರತರಾಗಿದ್ದಾರೆ.

ಹಲವು ಭಾಷೆ ಮತ್ತು ವಿಷಯಗಳಲ್ಲಿ ಪರಿಣತಿ ಹೊಂದಿರುವ ಶಾವ್ನಾಯುನಿವರ್ಸಿಟಿ ಆಫ್ ಅಲ್ಬರ್ಟಾ ದಲ್ಲಿ ನ್ಯೂರೋಸೈನ್ಸ್ ವಿಷಯದಲ್ಲಿ ನಲ್ಲಿ ಬಿ.ಎಸ್​ಸಿ ಪದವಿ ಪಡೆದ ಶಾವ್ನಾ, ಬಳಿಕ ಇಂಟರ್​ನ್ಯಾಷನಲ್ ಸ್ಪೇಸ್ ಯುನಿವರ್ಸಿಟಿಯಲ್ಲಿ ಬಾಹ್ಯಾಕಾಶ ವಿಜ್ಞಾನದಲ್ಲಿ ಎಂ.ಎಸ್​ಸಿ ಪದವಿ ಪಡೆದಿದ್ದಾರೆ.  ಅದಾದ ಬಳಿಕ ಯುನಿವರ್ಸಿಟಿ ಆಫ್ ಅಲ್ಬರ್ಟಾದಲ್ಲಿ ಮೆಡಿಸಿನ್​ನಲ್ಲಿ ಎಂಡಿ ಮಾಡಿದ್ದಾರೆ.

ಫ್ರೆಂಚ್, ಸ್ಪಾನಿಶ್ ಮತ್ತು ರಷ್ಯನ್ ಭಾಷೆಯಲ್ಲೂ ಪ್ರಭುತ್ವ ಪಡೆದಿರುವ ಶಾವ್ನಾ, ಹ್ಯೂಸ್ಟನ್​’ನ ನಾಸಾದ ಜಾನ್ಸನ್ ಸ್ಪೇಸ್ ಸೆಂಟರ್ ಮತ್ತು  ಜರ್ಮನಿಯ ಕೋಲಿನ್​ನ ಯುರೋಪಿಯನ್ ಅಸ್ಟ್ರೋನಟ್ ಸೆಂಟರ್​ನಲ್ಲಿ ತರಬೇತಿ ಮತ್ತು ಸಂಶೋಧನೆಯನ್ನೂ ಕೈಗೊಂಡಿದ್ದಾರೆ. 2009ರಲ್ಲಿ ಸಿವಿಗಾರ್ಡ್ ಎಂಬ ಮೊಬೈಲ್ ಆಧರಿತ ತುರ್ತು ಸಂಪರ್ಕ ವ್ಯವಸ್ಥೆ ಒದಗಿಸುವ  ಕಂಪನಿ ಸ್ಥಾಪಿಸಿದ್ದಾರೆ. ಅಂತೆಯೇ ಹಲವು ಭಾಷೆಗಳಲ್ಲಿ ಪರಿಣಿತಿ ಹೊಂದಿರುವ ಶಾವ್ನಾ ಫ್ರೆಂಚ್, ಸ್ಪಾನಿಷ್ ಮತ್ತು ರಷ್ಯನ್ ಭಾಷೆಗಳನ್ನು ಬಲ್ಲವರಾಗಿದ್ದಾರೆ.

No Comments

Leave A Comment